Astrology: ಬುಧ ಗ್ರಹವು ಬುದ್ಧಿವಂತಿಕೆ, ತರ್ಕ, ವ್ಯವಹಾರ, ಶಿಕ್ಷಣ, ಸಂವಹನ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಒಂದು ಅಂಶವೆಂದು ಪರಿಗಣಿಸಲಾಗಿದೆ. ಆದರಿಂದ ಬುಧ ತನ್ನ ಸ್ಥಾನವನ್ನು ಬದಲಾಯಿಸಿದಾಗಲೆಲ್ಲಾ, ಅದರ ಪ್ರಭಾವವು ಎಲ್ಲಾ ರಾಶಿ ಚಕ್ರಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ, ಡಿ.25 ರಂದು ಬುಧನು ಧನು ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಶುಭ ಯೋಗದಿಂದ ಈ ಮೂರು ರಾಶಿಯವರಿಗೆ ನಿರೀಕ್ಷೆ ಇದೆ ಎಂದು ತಿಳಿದುಬರುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...
ಧನು ರಾಶಿ
ಧನು ರಾಶಿಯವರಿಗೆ ದಶಾಂಕ ಯೋಗವು ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಹೊಸ ವ್ಯವಹಾರ ಅವಕಾಶಗಳು ಸಾಧ್ಯವಾಗುತ್ತದೆ. ಹಳೆಯ ಹೂಡಿಕೆಗಳು ಲಾಭವನ್ನು ತರುವ ನಿರೀಕ್ಷೆ ಇದೆ. ಉದ್ಯೋಗದಾತರಿಗೆ ಬಡ್ತಿ ಮತ್ತು ಹೊಸ ಜವಬ್ದಾರಿಗಳು ಸಿಗಬಹುದು. ಅವರ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ಬಲಗೊಳ್ಳುತ್ತವೆ.
ಕುಂಭ ರಾಶಿ
ಬುಧ ರಾಶಿಯ ಸಂಯೋಗವು ಕುಂಭ ರಾಶಿಯವರಿಗೆ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉದ್ಯಮಿಗಳಿಗೆ ಅಧಿಕ ಲಾಭಗಳನ್ನು ಪಡೆಯುವ ನಿರೀಕ್ಷೆ ಇದೆ. ಸಾಮಾಜದಲ್ಲಿ ಪ್ರತಿಷ್ಟೆ ಹೆಚ್ಚಾಗುವ ನಿರೀಕ್ಷೆ ಇದೆ. ಕಚೇರಿಗಳಲ್ಲಿ ಒಳ್ಳೆಯ ಸ್ಥಾನ ಮಾನ ಹೆಚ್ಚಾಗುವ ನಿರೀಕ್ಷೆ ಇದೆ. ಮಾನಸಿಕ ಸ್ಪಷ್ಟತೆ, ಉತ್ತಮ ಆರೋಗ್ಯ ಹೆಚ್ಚಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ, ದಶಾಂಕ ಯೋಗವು ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುವವರಿಗೆ ಶುಭವಾಗಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಹೊಸ ವರ್ಷದಲ್ಲಿ ಸಂವಹನ ಕೌಶಲ್ಯಗಳು ಬಲಗೊಳ್ಳುತ್ತವೆ. ಇದು ಮೆಚ್ಚುಗೆಗೆ ಕಾರಣವಾಗುತ್ತದೆ. ಹಳೆಯ ಹೂಡಿಕೆಗಳು ಹೆಚ್ಚಿನ ಲಾಭ ನೀಡಲಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.