ಮೇಷ: ಸಹೋದ್ಯೋಗಿಗಳಿಗೆ ನೀಡಿದ ಉಪದೇಶ ವ್ಯರ್ಥ. ಚಿಕ್ಕಪುಟ್ಟ ಮನಸ್ತಾಪ ಆಗಬಹುದು. ಪರಶಿವನ ದರ್ಶನ ಮಾಡಿ. ಅದೃಷ್ಟಸಂಖ್ಯೆ: 4
ವೃಷಭ: ಒಪ್ಪಿಕೊಂಡಿದ್ದ ಕೆಲಸ ಮುಗಿಸುವ ಸಮಯ ಬಂದಿದೆ. ಅದನ್ನು ಪೂರ್ಣಗೊಳಿಸಿ. ಗಣೇಶ ಸ್ತೋತ್ರವನ್ನು ಪಠಿಸಿ. ಅದೃಷ್ಟಸಂಖ್ಯೆ: 2
ಮಿಥುನ: ಹಳೆಯ ಸ್ನೇಹಿತರ ಭೇಟಿ. ತುಸು ಖರ್ಚಾದರೂ ಮನಸಾರೆ ನಗುತ್ತೀರಿ. ವೈವಿಧ್ಯಮಯ ಊಟ ಮಾಡುವ ಯೋಗ. ಅದೃಷ್ಟಸಂಖ್ಯೆ: 1
ಕಟಕ: ನೀವೇ ಕಷ್ಟದಲ್ಲಿದ್ದರೂ ತೊಂದರೆಯಲ್ಲಿ ಇರುವವರಿಗೆ ಸಹಾಯ ಮಾಡಬೇಕೆನಿಸುತ್ತದೆ. ಕೈಲಾದಷ್ಟು ನೆರವು ನೀಡಿ. ಅದೃಷ್ಟಸಂಖ್ಯೆ: 9
ಸಿಂಹ: ದೂರಪ್ರಯಾಣ ಮಾಡಬೇಕು ಎನಿಸಬಹುದು. ದೈನಂದಿನ ಕೆಲಸಗಳ ಬಗ್ಗೆ ಉದಾಸೀನತೆ ಕೂಡ ಬಂದುಬಿಡಬಹುದು. ಅದೃಷ್ಟಸಂಖ್ಯೆ: 3
ಕನ್ಯಾ: ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾದ ದಿನ. ಅದಕ್ಕಾಗಿ ಕಾಯುವವರೂ ಇದ್ದಾರೆ. ಶ್ರೀರಾಮನನ್ನು ಸ್ತುತಿಸಿ. ಅದೃಷ್ಟಸಂಖ್ಯೆ: 7
ತುಲಾ : ಸ್ನೇಹಿತರು ಬಹಳ ಒತ್ತಾಯಿಸಿದರೂ ಸಮಯಾವಕಾಶ ಸಿಗದೆ ಒತ್ತಡ. ಅದೇ ಮನಸ್ಸಿಗೆ ಬೇಸರ ತರುತ್ತದೆ. ಅದೃಷ್ಟಸಂಖ್ಯೆ: 9
ವೃಶ್ಚಿಕ: ಸಿಟ್ಟು, ಕೂಗಾಟಗಳನ್ನು ಬಿಡಿ. ಅದರಿಂದ ನಿಮ್ಮ ಆರೋಗ್ಯವೇ ಹಾಳಾಗುತ್ತದೆ. ಕುಜ ಅಷ್ಟೋತ್ತರವನ್ನು ಓದಿ. ಅದೃಷ್ಟಸಂಖ್ಯೆ: 4
ಧನುಸ್ಸು: ಯಾರೋ ಮೋಸ ಮಾಡಬಹುದು. ಎಚ್ಚರ ವಹಿಸಿ. ಹಣದ ಹೊಣೆ ನಿರಾಕರಿಸಿ. ಲಕ್ಷಿ್ಮೕ ಅಷ್ಟೋತ್ತರ ಪಠಿಸಿ. ಅದೃಷ್ಟಸಂಖ್ಯೆ: 6
ಮಕರ: ದಾಕ್ಷಿಣ್ಯದ ಕಾರಣ ಸ್ನೇಹಿತರ ಕೆಲಸ ನಿಮ್ಮ ಮೇಲೆ ಬೀಳಲಿದೆ. ತಪ್ಪದೆ ದುರ್ಗಾ ಅಷ್ಟೋತ್ತರ ಪಠಣ ಮಾಡಿ. ಅದೃಷ್ಟಸಂಖ್ಯೆ: 5
ಕುಂಭ: ನಿಮಗಷ್ಟೇ ಗೊತ್ತಿದೆ ಎಂಬ ಭ್ರಾಂತಿಯಿಂದ ನಷ್ಟವಾಗಬಹುದು. ಎಡವಿ ಬೀಳುವ ಸನ್ನಿವೇಶ ಇದ್ದಾಗ ಓಡದಿರಿ. ಅದೃಷ್ಟಸಂಖ್ಯೆ: 2
ಮೀನ: ನಿತ್ಯದ ಕೆಲಸಗಳನ್ನು ವ್ಯಾಯಾಮವೆಂದೇ ಭಾವಿಸಿ ಮಾಡಿ. ಆಹಾರದ ವಿಚಾರದಲ್ಲಿ ಮಾತ್ರ ಎಚ್ಚರ ವಹಿಸಿ. ಅದೃಷ್ಟಸಂಖ್ಯೆ: 3