ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ವಿಘ್ನ

ಮೇಷ:  ವಿಭಿನ್ನತೆ ಹುಡುಕುವ ನಿಮ್ಮ ಮನಸನ್ನು ತೃಪ್ತಿಪಡಿಸುವುದು ಅಸಾಧ್ಯ. ಗುರು ದತ್ತಾತ್ರೇಯನನ್ನು ಸ್ತುತಿಸಿ. ಅದೃಷ್ಟಸಂಖ್ಯೆ: 1

ವೃಷಭ: ಕರ್ತವ್ಯಗಳನ್ನು ಬೇಗ ಮಾಡುವಿರಿ. ಕೆಲವು ವಿಚಾರಗಳು ಮರೆತುಹೋದಾವು. ಆಂಜನೇಯ ಸ್ತೋತ್ರ ಪಠಿಸಿ. ಅದೃಷ್ಟಸಂಖ್ಯೆ: 4

ಮಿಥುನ: ಕಾರ್ಯಕ್ಷೇತ್ರದಲ್ಲಿ ವಿಘ್ನ ಎದುರಾಗುತ್ತದೆ. ಎಚ್ಚರದಿಂದಿರಿ. ಬೆಳಗ್ಗೆ ಹಸುವೊಂದಕ್ಕೆ ಬಾಳೆಹಣ್ಣು ತಿನ್ನಿಸಿ ನಮಿಸಿ. ಅದೃಷ್ಟಸಂಖ್ಯೆ: 7

ಕಟಕ: ನಿಮ್ಮ ಪ್ರತಿಭೆಯನ್ನು ಅರಿಯದವರು ಅವಮಾನಿಸಬಹುದು. ಮಹಾವಿಷ್ಣುವಿಗೆ ತುಳಸಿದಳವನ್ನು ಸಮರ್ಪಿಸಿ. ಅದೃಷ್ಟಸಂಖ್ಯೆ: 5

ಸಿಂಹ: ನಿಮ್ಮ ಅಧಿಕಾರವನ್ನು ಇತರರು ಬಳಸುತ್ತಿರುವುದು ತಿಳಿಯಲು ತಡವಾದೀತು. ಶಿವನಿಗೆ ಅರ್ಚನೆ ಮಾಡಿಸಿ. ಅದೃಷ್ಟಸಂಖ್ಯೆ: 9

ಕನ್ಯಾ: ಸ್ವಾರ್ಥಿಗಳ ಮಾತನ್ನು ನಂಬಿ ಕಾಸು ಬಿಚ್ಚಿದರೆ ನಿಮಗೇ ನಷ್ಟ. ದುರ್ಗಾದೇವಿಗೆ ಕುಂಕುಮಾರ್ಚನೆ ಮಾಡಿಸಿ. ಅದೃಷ್ಟಸಂಖ್ಯೆ: 6

ತುಲಾ: ಪರೋಪಕಾರ ಬುದ್ಧಿಯಿಂದ ಅನಗತ್ಯ ಖರ್ಚು. ಸಮಯವೂ ವ್ಯರ್ಥವಾಗುತ್ತದೆ. ಗಣಪತಿಯನ್ನು ಸ್ತುತಿಸಿ. ಅದೃಷ್ಟಸಂಖ್ಯೆ: 1

ವೃಶ್ಚಿಕ: ಶಾರೀರಿಕ ಬೆಳವಣಿಗೆಯ ವಿಚಾರದಲ್ಲಿ ಮನಸ್ಸಿಗೆ ಬೇಸರ ಆಗಬಹುದು. ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ. ಅದೃಷ್ಟಸಂಖ್ಯೆ: 7

ಧನುಸ್ಸು: ಆಲಸ್ಯದ ದುಷ್ಟ ಪ್ರಭಾವವನ್ನು ತುಸು ಹೆಚ್ಚೇ ಅನುಭವಿಸಬೇಕಾದೀತು. ಬಡಬಗ್ಗರಿಗೆ ಅನ್ನದಾನವನ್ನು ಮಾಡಿ. ಅದೃಷ್ಟಸಂಖ್ಯೆ: 2

ಮಕರ: ಇತರರ ತಪ್ಪು ನಿಮ್ಮ ಮೇಲೆ ಬರಬಹುದು. ಪರೋಪಕಾರಕ್ಕೂ ಇತಿಮಿತಿಗಳು ಇರುತ್ತವೆ ಎಂಬುದನ್ನು ಗಮನಿಸಿ. ಅದೃಷ್ಟಸಂಖ್ಯೆ: 8

ಕುಂಭ: ಸ್ವತಂತ್ರವಾಗಿ ಏನೋ ಮಾಡುತ್ತೇನೆಂದು ಅರ್ಧ ಮಾಡಿ ಪೂರ್ಣಗೊಳಿಸಲಾಗದೆ ತಮಾಷೆಗೆ ಈಡಾಗುತ್ತೀರಿ. ಅದೃಷ್ಟಸಂಖ್ಯೆ: 3

ಮೀನ: ಎಲ್ಲ ವಿಚಾರಗಳಲ್ಲಿಯೂ ನಿಮಗೆ ಬರಬೇಕಾದ ಪಾಲು ಕೊನೆಯದಾಗಿ ಸಲ್ಲುತ್ತದೆ. ತುಳಸಿ ಪೂಜೆಯನ್ನು ಮಾಡಿ. ಅದೃಷ್ಟಸಂಖ್ಯೆ: 7