Astrology: ಕೈಂಜಿ ಧಾಮದ ನೀಮ್ ಕರೋಲಿ ಬಾಬಾ ಅವರನ್ನು ಆಧುನಿಕ ಭಾರತದ ಶ್ರೇಷ್ಠ ಸಂತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಪ್ರಕಾರ ಯಾವುದೇ ವ್ಯಕ್ತಿಯು ಪುಣ್ಯದ ಕೆಲಸ ಮಾಡಿದರೆ ಆತನನ್ನು ಭಗವಂತನು ಕಾಪಾಡುತ್ತಾನೆ. ಹಾಗೆಯೇ ದುರ್ಬುದ್ಧಿಯನ್ನು ಹೊಂದಿದ್ದರೆ ಆತನಿಗೆ ದೇವರು ಯಶಸ್ಸನ್ನು ಕಾಪಾಡುವುದಿಲ್ಲ ಎಂದು ತಿಳಿಸಿದ್ದಾರೆ.
1. ಸಹಕಾರ ಮತ್ತು ಸೇವೆಯನ್ನು ಹೇಳಿಕೊಂಡು ಓಡಾಡಬೇಡಿ
ಸನಾತನ ಧರ್ಮದಲ್ಲಿ, ಸೇವೆ ಮತ್ತು ಸಹಕಾರ ಬೆಳೆಸಿಕೊಳ್ಳುವುದು ಬಹಳ ಪುಣ್ಯದ ಕೆಲಸ ಎಂದು ಪರಿಗಣಿಸಲಾಗುತ್ತದೆ. ಜನರು ಎಲ್ಲೆಡೆ ತಾವು ಮಾಡಿದ ಸೇವೆಯನ್ನು ಹೇಳಲು ತೊಡಗಿದರೆ, ಅದು ಸೇವೆಯ ಮಹತ್ವವನ್ನು ಕಳೆದುಕೊಳ್ಳುತ್ತದೆ. ಯಾವುದೇ ವ್ಯಕ್ತಿಯು ನಿಜವಾಗಿಯೂ ಸೇವೆಯನ್ನು ಮಾಡಿದಾಗಲೂ ಅದು ಯಾರಿಗೂ ತಿಳಿಯದ ಹಾಗೆ ಇರಬೇಕು. ಎಂದಿಗೂ ಬೇರೆಯವರಿಗೆ ತಿಳಿಯಬಾರದು.
2. ಸುಳ್ಳು ಮತ್ತು ಅನ್ಯಾಯದಿಂದ ದೂರ ಇರಬೇಕು
ಸುಳ್ಳು ಮತ್ತು ಅನ್ಯಾಯದ ಮಾರ್ಗದಲ್ಲಿ ನಡೆಯುವ ವ್ಯಕ್ತಿಯು ದೇವರ ಕೃಪೆಯನ್ನು ಪಡೆಯಲು ಸಾಧ್ಯವಿಲ್ಲ. ಸತ್ಯ ಮತ್ತು ದಯೆ ತೋರಿಸುವವರಿಗೆ ದೇವರು ಒಳಿತನ್ನು ಮಾಡುತ್ತಾನೆ. ಇತರರಿಗೆ ಸಲ್ಲಬೇಕಾದದನ್ನು ಕಸಿದುಕೊಳ್ಳುವುದು ಅಥವಾ ಅನ್ಯಾಯ ಮಾಡುವುದನ್ನು ಮಾಡಿದರೆ ಆತನಿಗೆ ದೇವರ ಕೃಪೆ ದೊರೆಯುವುದಿಲ್ಲ.
3. ದ್ವೇಷ ಅಸೂಯೆಯನ್ನು ಇಟ್ಟುಕೊಳ್ಳಬಾರದು
ಇನ್ನೊಂದು ವ್ಯಕ್ತಿಗಳೊಂದಿಗೆ ದ್ವೇಷ, ಅಸೂಯೆ ತೋರಿಸುವ ಮನೋಭಾವವನ್ನು ಹೊಂದಿರುವ ಮನುಷ್ಯನು ಸಮಾಜದಲ್ಲಿ ಗೌರವ ಮತ್ತು ದೇವರ ಕೃಪೆಯನ್ನು ಕಳೆದುಕೊಳ್ಳುತ್ತಾರೆ. ಆದರಿಂದ ಯಾವ ವ್ಯಕ್ತಿಯೊಂದಿಗೂ ದ್ವೇಷವನ್ನು ಇಟ್ಟುಕೊಳ್ಳಬೇಡಿ. ಮನುಷ್ಯರಾಗಲಿ ಪ್ರಾಣಿಗಳಾಗಲಿ ದ್ವೇಷವನ್ನು ಇಟ್ಟುಕೊಳ್ಳುವುದರಿಂದ ಗೌರವದ ಭಾವನೆಯನ್ನು ಬೆಳೆಸಿಕೊಳ್ಳಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.