Zodiac Sign: ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಓರ್ವ ವ್ಯಕ್ತಿಯ ರಾಶಿ ( Zodiac Sign) ಚಕ್ರ ಮತ್ತು ಜನ್ಮ ನಕ್ಷತ್ರವು ವ್ಯಕ್ತಿಯ ಭವಿಷ್ಯ ಜೀವನವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ, ನಮ್ಮ ದೇಶದಲ್ಲಿ ಜನರು ಜೋತಿಷ್ಯವನ್ನು ಅಷ್ಟು ನಂಬುತ್ತಾರೆ. ಒಬ್ಬ ವ್ಯಕ್ತಿಯ ಜನ್ಮ ರಾಶಿಯು ಆತನ ಹಣಕಾಸಿನ ಸ್ಥಿತಿ, ಪ್ರೀತಿ, ಶಿಕ್ಷಣ, ಮದುವೆ, ದಾಂಪತ್ಯ, ಉದ್ಯೋಗ ಮತ್ತು ಆತನ ಒಳ್ಳೆಯ ಗುಣಗಳು ಮತ್ತು ಕೆಟ್ಟ ಗುಣಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ದೀರ್ಘಕಾಲೀನ ಹೂಡಿಕೆಗೆ ಸಕಾಲ. ಸಹೋದ್ಯೋಗಿಗಳೊಂದಿಗೆ ಬಿಡುವಿನ ಸಮಯ ಕಳೆಯುವುದರಿಂದ ಜ್ಞಾನ ಹೆಚ್ಚಾಗುವುದು. ವರ್ಷಾಂತ್ಯವಾದ್ದರಿಂದ ಹೆಚ್ಚಿನ ಕೆಲಸದ ಒತ್ತಡ ಇರುವುದಿಲ್ಲ. ರಜೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಕುಟುಂಬಸ್ಥರೊಂದಿಗೆ ದೀರ್ಘಾವಧಿಯ ಪ್ರಯಾಣ ಮಾಡಬಹುದು. ಹಣಕಾಸಿನ ಜೀವನ ಅಂದುಕೊಂಡಂತೆ ಇರಲಿದೆ. ಈ ರಾಶಿಯ ಪೊಲೀಸ್, ವಕೀಲ, ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಸಿಗುವ ಸಮಯ.
ಮೇಷ ರಾಶಿಯವರಿಗೆ ಕೆಲಸದ ಒತ್ತಡ ಕೊಂಚ ಕಡಿಮೆಯಾಗಲಿದೆ. ಇಂದು ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಸಿಗುವುದು. ಆರ್ಥಿಕ ಒತ್ತಡಗಳು ಕಡಿಮೆಯಾಗಿ ನೆಮ್ಮದಿಯ ಜೀವನವನ್ನು ನೀವು ನಡೆಸುವಿರಿ. ಆದರೆ ಈ ದಿನ ಹಣಕಾಸಿನ ವಿಚಾರದಲ್ಲಿ ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗಬಹುದು ತಾಳ್ಮೆ ಇರಲಿ. ಈ ಸಮಯದಲ್ಲಿ ಭೂಮಿ ಅಥವಾ ವಾಹನ ಖರೀದಿ ಬಗ್ಗೆ ಆಲೋಚಿಸಬಹುದು.
ಧನು ರಾಶಿ
ಧನು ರಾಶಿಯವರಿಗೆ ಸಣ್ಣ ವ್ಯಾಪಾರಿಗಳಿಗೆ ಲಾಭವಾಗಲಿದೆ.ಅಧಿಕಾರಿ ವರ್ಗದವರಿಗೆ ಕೆಲಸದ ಒತ್ತಡವಿರುತ್ತದೆ. ಆಸ್ತಿ ಖರೀದಿ ಬಗ್ಗೆ ಯೋಚನೆ ಮಾಡಬಹುದು. ಮಾರಾಟದ ವ್ಯವಹಾರಗಳು ಲಾಭ ನೀಡುತ್ತವೆ. ನಿಮ್ಮೆಲ್ಲಾ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ಸಿಗುವುದು. ವರ್ಷಾಂತ್ಯವಾಗಿರುವುದರಿಂದ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಕೆಲಸದಿಂದ ಕೊಂಚ ವಿರಾಮ ಪಡೆಯುವುದರಿಂದ ಮನಸ್ಸು ಉತ್ಸಾಹದಿಂದ ಇರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಸ್ವಯಂ ಉದ್ಯೋಗಿಗಳಿಗೆ ಶುಭ ಸುದ್ದಿಯಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ. ಲಾಟರಿಯಿಂದ ಲಾಭ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದರಿಂದ ಖರ್ಚುಗಳು ಹೆಚ್ಚಾಗಬಹುದು. ಹಣ ಆಗಮನಕ್ಕಿದ್ದ ಅಡೆತಡೆಗಳು ನಿವಾರಣೆಯಾಗಿ ಹಣದ ಹರಿವು ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಕೆಲಸದಲ್ಲಿ ಉತ್ಸಾಹ ಆಸಕ್ತಿ ಹೆಚ್ಚಾಗಲಿದೆ. ಈ ರಾಶಿಯ ಕೃಷಿ, ಹೈನುಗಾರಿಕೆ, ಕೈಗಾರಿಕೆ, ಉದ್ಯಮ, ವ್ಯಾಪಾರ, ವ್ಯವಹಾರ ಮಾಡುವವರಿಗೆ ಲಾಭ ಸಿಗಲಿದೆ. ಸ್ವಂತ ಹುದ್ದೆಯಿಂದಲೂ ಹಣ ಆಗಮನವಾಗಬಹುದು. ಆದರೆ ಶತ್ರುಗಳ ಕುತಂತ್ರದಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಹನುಮಾನ್ ಚಾಲೀಸ್ ಪಠಿಸುವುದು ಮಂಗಳಕರ. ಭವಿಷ್ಯದ ಯೋಜನೆಗಳಿಗಾಗಿ ಮಾಡುವ ಖರ್ಚು ಮುಂದೆ ಲಾಭ ತರಲಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.