- ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
- ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
- ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
- ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs: ತಾನು ಹಣವಂತನಾಗಬೇಕು ಮತ್ತು ಆರಾಮದಾಯಕ ಜೀವನ ನಡೆಸಬೇಕೆಂಬ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಈ ಆಸೆ ಈಡೇರಬೇಕೆಂದರೆ, ಒಂದು ಶ್ರಮ ಪಡಬೇಕು ಅಥವಾ ಅದೃಷ್ಟ ಇರಬೇಕು. ಶ್ರಮ ಪಟ್ಟರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ. ಆದರೆ, ಅದೃಷ್ಟ ಅಂತಾ ಬಂದಾಗ ಅದು ಎಲ್ಲರಿಗೂ ಒಲಿಯುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ರಾಶಿ, ಜನ್ಮ ನಕ್ಷತ್ರ ಹಾಗೂ ಗ್ರಹಗತಿಗಳೆಲ್ಲ ಕೂಡಿ ಬರಬೇಕು. ಟೈಂ ಚೆನ್ನಾಗಿದ್ದಾರೆ ಮಾತ್ರ ಅದೃಷ್ಟ ಅರಸಿ ಬರುತ್ತದೆ. ಅದರಂತೆ, 2026ರಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಹಣವಂತನಾಗಬೇಕೆಂಬ ಆಸೆ ನನಸಾಗುತ್ತದೆ. ಅಂದರೆ, ಈ ರಾಶಿಚಕ್ರ ಚಿಹ್ನೆಗಳಿಗೆ ಗ್ರಹಗಳ ಚಲನೆ ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ.
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಏಕೆಂದರೆ, ಗ್ರಹಗಳ ಸ್ಥಾನಗಳಲ್ಲಿನ ಬದಲಾವಣೆಗಳು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಹೀಗಾಗಿ, ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾದ ಬುಧ, ಫೆಬ್ರವರಿ 3 ರಂದು ಕುಂಭ ರಾಶಿಗೆ ಸ್ಥಳಾಂತರಗೊಳ್ಳುತ್ತಾನೆ. ಇದರ ಪ್ರಭಾವ, ಎಲ್ಲ 12 ರಾಶಿಚಕ್ರ ಚಿಹ್ನೆಗಳಲ್ಲಿ ಪ್ರತಿಫಲಿಸಿದರೂ, ಕೆಲವು ರಾಶಿಚಕ್ರ ಚಿಹ್ನೆಗಳ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಅಪಾರ ಸಂಪತ್ತನ್ನು ತರುತ್ತದೆ.
ಹಾಗಾದರೆ, ಅನಿರೀಕ್ಷಿತ ರೀತಿಯಲ್ಲಿ ರಾಜಯೋಗವನ್ನು ಅನುಭವಿಸುವ ಟಾಪ್ 3 ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ನಾವೀಗ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ, ಬುಧನ ಈ ಸಂಚಾರವು ಜೀವನದಲ್ಲಿ ಅನೇಕ ಅನಿರೀಕ್ಷಿತ ಪಾಸಿಟಿವ್ ಬದಲಾವಣೆಗಳನ್ನು ತರುತ್ತದೆ. ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ವಿವಿಧ ರೀತಿಯಲ್ಲಿ ಆದಾಯ ಗಳಿಸುವ ಅವಕಾಶಗಳು ಹೆಚ್ಚಾಗಲಿವೆ. ಹಠಾತ್ ಹಣದ ಒಳಹರಿವು ಸಂತೋಷ ತರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ತಾವು ಇಷ್ಟಪಡುವ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚು. ಸ್ವಲ್ಪ ಪ್ರಯತ್ನ ಮಾಡಿದರೆ, ಈ ಅವಧಿಯು ಆರ್ಥಿಕವಾಗಿ ಹೆಚ್ಚಿನ ಪ್ರಗತಿಯನ್ನು ತರಬಹುದು.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಬುಧನ ಸಂಚಾರವು ದೀರ್ಘಕಾಲದ ಸಮಸ್ಯೆಗಳಿಗೆ ಯಶಸ್ವಿ ಪರಿಹಾರಗಳನ್ನು ತರುತ್ತದೆ. ಇದು ಅವರ ಅದೃಷ್ಟವನ್ನು ಬೆಳಗಿಸುತ್ತದೆ ಮತ್ತು ಸಾಲದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ಹಣದ ಹರಿವು ಶುಭವಾಗಿರುತ್ತದೆ. ಜ್ಞಾನ ಗ್ರಹ ಬುಧನ ಆಶೀರ್ವಾದದಿಂದ, ಆಲೋಚನೆಗಳಲ್ಲಿ ಸ್ಪಷ್ಟತೆ ಉಂಟಾಗುತ್ತದೆ. ದಾಂಪತ್ಯ ಜೀವನದಲ್ಲಿ, ಅಸ್ತಿತ್ವದಲ್ಲಿರುವ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಗಂಡ ಮತ್ತು ಹೆಂಡತಿಯ ನಡುವಿನ ಅನ್ಯೋನ್ಯತೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
ತುಲಾ ರಾಶಿ
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.