Astrology ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಮಂಗಳ ಗೋಚಾರ 2026: ಈ ರಾಶಿಗಳ ಅದೃಷ್ಟದ ಬಾಗಿಲು ಇಂದೇ ಓಪನ್! ನಿಮ್ದೂ ಇದೇ ರಾಶಿನಾ? Astrology

Astrology: ಮೇ 11 ರಂದು ಮಂಗಳ ಗ್ರಹವು ಮೇಷ ರಾಶಿಯಲ್ಲಿ ಸಂಚಾರ ನಡೆಸಲಿದ್ದಾನೆ. ಜ್ಯೋತಿಷ್ಯದಲ್ಲಿ ಮಂಗಳನು ಧೈರ್ಯ ಮತ್ತು ಶಕ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಮಂಗಳನು ತನ್ನದೇ ಆದ ರಾಶಿಯ ಮೂಲಕ ಸಾಗಿದಾಗ ಅದು ಋಷಕ ಯೋಗವನ್ನು ಸಹ ರೂಪಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಇದನ್ನು ಜ್ಯೋತಿಷ್ಯದಲ್ಲಿ ಅಪರೂಪದ ಮತ್ತು ಶುಭ ಯೋಗವೆಂದು ಪರಿಗಣಿಸಲಾಗಿದೆ. ಇದನ್ನು ಪಂಚ ಮಹಾಪುರುಷ ಯೋಗಗಳಲ್ಲಿ ಅತ್ಯಂತ ಪ್ರಭಾವಶಾಲಿ ಯೋಗವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಜೂನ್ 21 ರವರೆಗೆ ಮಂಗಳನು ಮೇಷ ರಾಶಿಯಲ್ಲಿ ಉಳಿಯುವುದರಿಂದ ಕೆಲವೊಂದು ರಾಶಿಯವರಿಗೆ ಬಹಳ ಪ್ರಯೋಜನ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮಂಗಳನ ಸಂಚಾರದಿಂದ ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ನೋಡೋಣ ಬನ್ನಿ...

ಮೇಷ ರಾಶಿ

ಮಂಗಳ ಗ್ರಹದ ಸಂಚಾರವು ಮೇಷ ರಾಶಿಯವರಿಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸಕರಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಲಿದ್ದೀರಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಉತ್ತಮ ಸ್ಥಾನವನ್ನು ಪಡೆಯಲಿದ್ದೀರಿ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಆಸ್ತಿ ಖರೀದಿಸುವವರಿಗೆ ಈ ಸಮಯ ಒಳ್ಳೆಯದಾಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ಸಮಯವು ಬಹಳ ಉಪಯುಕ್ತವಾಗಿರುತ್ತದೆ. ಬಹುಕಾಲದ ಆಸೆಗಳು ಈಡೇರುವಂತಹ ಸಮಯ ಇದಾಗಿದೆ. ಆರ್ಥಿಕ ಪರಿಸ್ಥಿತಿ ಈಡೇರಲಿದೆ. ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳು ಕೊನೆಗೊಳ್ಳಲಿದೆ. ಮದುವೆ ಪ್ರಸ್ತಾಪಗಳು ಕೂಡಿ ಬರಲಿವೆ. ತಂದೆ-ತಾಯಿ ಆಶೀರ್ವಾದದೊಂದಿಗೆ ಉತ್ತಮ ಯೋಜನೆಗಳಿಗೆ ಕೈ ಹಾಕಲಿದ್ದೀರಿ.

ಧನು ರಾಶಿ

ಧನು ರಾಶಿಯವರಿಗೆ, ಈ ಮಂಗಳ ಗ್ರಹದ ಸಂಚಾರವು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಂತ ಸಮಯ ಇದಾಗಿದೆ. ಈ ದಿನಗಳಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹಳೆಯ ಸಮಸ್ಯೆಗಳು ಬಗೆಹರಿಯಲಿವೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಬಹಳ ಅನುಕೂಲಕರವಾಗಿರುತ್ತದೆ. ಆಸ್ತಿ ಸಂಬಂಧಿಸಿದಂತೆ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.