Astrology: ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹವನ್ನು ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಮಂಗಳನು ಧನು ರಾಶಿಯಿಂದ ಮಕರ ರಾಶಿಗೆ ಸಾಗಲಿದ್ದಾನೆ. ಈ ವೇಳೆ ಅದರ ಶಕ್ತಿಯು ಉತ್ತುಂಗದಲ್ಲಿದ್ದು, ಶಕ್ತಿ, ಧೈರ್ಯ, ಶೌರ್ಯ, ನಾಯಕತ್ವಕ್ಕೆ ಕಾರಣವಾಗಲಿದ್ದಾನೆ. ಮಂಗಳ ಗ್ರಹವು ತನ್ನ ಉತ್ತುಂಗ ರಾಶಿಗೆ ಸಾಗಿದಾಗ, ಅದು ವೃತ್ತಿ, ಕಠಿಣ ಪರಿಶ್ರಮ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಆದಾಗ್ಯೂ, ಮಂಗಳ ಗ್ರಹವು ದೋಷ ಪೂರಿತವಾಗಿದ್ದರೆ, ಇದು ಅಪಘಾತ, ಗಾಯಗಳು, ಕೋಪ, ವಾದಗಳು, ಖ್ಯಾತಿಯ ನಷ್ಟ ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗುತ್ತದೆ. ಹಾಗಾಗಿ ಈ ಮಂಗಳನ ಚಲನೆಯು ಈ ರಾಶಿಯವರಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ಗ್ರಹದ ಸಂಚಾರವು ಯಾವ ರಾಶಿಯವರಿಗೆ ಒಳ್ಳೆಯದು ಕೆಟ್ಟದ್ದು ಎಂದು ನೋಡೋಣ ಬನ್ನಿ...
ವೃಷಭ ರಾಶಿ
ಈ ರಾಶಿಯವರಿಗೆ ಮಂಗಳ ಗ್ರಹವು ಒಂಬತ್ತನೇ ಮನೆಗೆ ಚಲಿಸುತ್ತದೆ. ಇದರಿಂದ ಅದೃಷ್ಟವು ಅನುಕೂಲವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ ಜೀವನದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಹೊಸ ವ್ಯಾಪಾರ ಆರಂಭಿಸುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ಇದು ನೀವು ತಂದೆ ಅಥವಾ ಗುರುಗಳಿಂದ ಮಾರ್ಗದರ್ಶನ ಪಡೆಯುತ್ತೀರಿ.
ಕರ್ಕಾಟಕ ರಾಶಿ
ಈ ರಾಶಿಯವರಿಗೆ ಮಂಗಳ ಗ್ರಹವು 7ನೇ ಮನೆಯಲ್ಲಿ ಸಾಗುತ್ತದೆ. ಇದು ವೃತ್ತಿ ಮತ್ತು ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿದ್ದೀರಿ. ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತಮವಾಗಲಿದೆ.
ಕನ್ಯಾ ರಾಶಿ
ಈ ರಾಶಿಯವರಿಗೆ ಮಂಗಳ ಗ್ರಹವು ಐದನೇ ಮನೆಯಲ್ಲಿರುತ್ತಾನೆ. ಇದು ಬುದ್ಧಿವಂತಿಕೆ, ಯೋಜನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ಬಲಗೊಳ್ಳುತ್ತವೆ. ಆದಾಗ್ಯೂ, ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ತೆಗೆದುಕೊಳ್ಳುತ್ತಿರುವವರು ಉತ್ತಮವಾಗಲಿದೆ. ಮಕ್ಕಳಿಗೆ ಸಂಬಂಧಿಸಿದ ಜವಾಬ್ದಾರಿಗಳು ಹೆಚ್ಚಾಗುತ್ತವೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.