ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಶುರುವಾಯ್ತು ಮಂಗಳಾದಿತ್ಯ ರಾಜಯೋಗ; ಈ ರಾಶಿಯವರ ಬಾಳಿನಲ್ಲಿ ಇನ್ನು ಹಣದ ಮಳೆ Astrology

ಪ್ರಮುಖ ಮುಖ್ಯಾಂಶಗಳು

  • ಸೂರ್ಯನು ಶತಭಿಷ ನಕ್ಷತ್ರಕ್ಕೆ ಸಾಗುತ್ತಾನೆ. ಅದೇ ರೀತಿ ಮಂಗಳನೂ ಕೂಡ ಈ ನಕ್ಷತ್ರಕ್ಕೆ ಸಾಗುತ್ತಾನೆ
  • ಈ ಸಮಯದಲ್ಲಿ ಸೂರ್ಯ ಮತ್ತು ಮಂಗಳನ ಗ್ರಹಗಳು ಶತಭಿಷ ನಕ್ಷತ್ರದಲ್ಲಿ ಒಟ್ಟಿಗೆ ನೆಲೆಸುತ್ತಾರೆ
  • ಮಂಗಳ ಆದಿತ್ಯ ರಾಜಯೋಗವು ಸಂಪತ್ತು, ಯಶಸ್ಸು ಮತ್ತು ಗೌರವವನ್ನು ಹೆಚ್ಚಿಸುತ್ತದೆ
Astrology: ಫೆಬ್ರವರಿಯಲ್ಲಿ ಸೂರ್ಯನು ಶತಭಿಷ ನಕ್ಷತ್ರಕ್ಕೆ ಸಾಗುತ್ತಾನೆ. ಅದೇ ರೀತಿ ಮಂಗಳನೂ ಕೂಡ ಈ ನಕ್ಷತ್ರಕ್ಕೆ ಸಾಗುತ್ತಾನೆ. ಈ ಸಮಯದಲ್ಲಿ ಸೂರ್ಯ ಮತ್ತು ಮಂಗಳನ ಗ್ರಹಗಳು ಶತಭಿಷ ನಕ್ಷತ್ರದಲ್ಲಿ ಒಟ್ಟಿಗೆ ನೆಲೆಸಿ ಮಂಗಳ ಆದಿತ್ಯ ರಾಜಯೋಗವನ್ನು ಸೃಷ್ಟಿಸುತ್ತವೆ. ಜ್ಯೋತಿಷ್ಯದ ಪ್ರಕಾರ, ಈ ರಾಜಯೋಗವು ಸಂಪತ್ತು, ಯಶಸ್ಸು ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಇದರಿಂದ ಕೆಲವೊಂದು ರಾಶಿಗಳು ಪ್ರಯೋಜನ ಪಡೆಯಲಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ..

ಮೇಷ ರಾಶಿ

ಮೇಷ ರಾಶಿಯನ್ನು ಮಂಗಳನು ಆಳುವುದರಿಂದ ಈ ಸಂಯೋಗವು ಈ ರಾಶಿಯವರಿಗೆ ತುಂಬಾ ಶುಭವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೆಲಸದಲ್ಲಿ ಹೊಸ ಜವಬ್ದಾರಿಗಳು ಸಿಗಲಿವೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಕಾಣುವ ಸಾಧ್ಯತೆಯಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಮಿಥುನ ರಾಶಿ

ಈ ಸಮಯವು ಮಿಥುನ ರಾಶಿಯವರಿಗೆ ಅದೃಷ್ಟ ತರುವಂತ ಸಮಯ ಇದಾಗಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಳೆಯ ಹೂಡಿಕೆಗಳು ಗಣನೀಯ ಲಾಭವನ್ನು ನೀಡಲಿದ್ದು, ವಿದೇಶ ಪ್ರಯಾಣ ಬಯಸುವವರಿಗೆ ಪ್ರಯಾಣ ಸಾಧ್ಯತೆಗಳು ದೊರೆಯಲಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಆಳ್ವಿಕೆ ಸೂರ್ಯನಿಂದ ಕೂಡಿರುವುದರಿಂದ, ಈ ಸಂಯೋಗವು ಈ ರಾಶಿಯವರ ಮೇಲೆ ಸಕರಾತ್ಮಕವಾಗಿ ಪರಿಣಾಮ ಬೀರಲಿದೆ. ನಿಮ್ಮ ಒಳ್ಳೆಯ ನಡೆಗಲು ಇತರರನ್ನು ಆಕರ್ಷಿಸುತ್ತದೆ. ಉದ್ಯಮಿಗಳು ಗಮನಾರ್ಹ ಲಾಭವನ್ನು ಪಡೆಯಬಹುದು. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಹಳೆಯ ಆಸ್ತಿಯಿಂದ ಅನೇಕ ಲಾಭವನ್ನು ಪಡೆಯಬಹುದಾಗಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.