Astrology: ಜ್ಯೋತಿಷ್ಯದ ಪ್ರಕಾರ, ಜನವರಿ ಮಧ್ಯಭಾಗವು ಬಹಳ ಮುಖ್ಯವಾದ ಸಮಯ ಎಂದು ನಂಬಲಾಗುತ್ತದೆ. ಈ ಸಮಯದಲ್ಲಿ ಹಲವಾರು ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತದೆ. ಇದರ ಪರಿಣಾಮವಾಗಿ ಶುಭ ಯೋಗ ಮತ್ತು ರಾಜ ಯೋಗ ಉಂಟಾಗುತ್ತದೆ. ಈ ಗ್ರಹಗಳ ಚಲನೆಯು ಅನೇಕ ರೀತಿಯಲ್ಲಿ ಯೋಗವನ್ನು ನೀಡಲಿವೆ.
ಆದಾಗ್ಯೂ, ಮಕರ ಸಂಕ್ರಾಂತಿಯ ಮರು ದಿನವಾದ ಜನವರಿ 16 ರಂದು ಧೈರ್ಯ ಮತ್ತು ಶಕ್ತಿಯ ಗ್ರಹವಾದ ಮಂಗಳ ಮಕರ ರಾಶಿಯನ್ನು ಪ್ರವೇಶಿಸುತ್ತದೆ. ಈ ಎರಡು ಗ್ರಹಗಳು ಮಕರ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಮಹಾಲಕ್ಷ್ಮೀ ಯೋಗವು ರೂಪುಗೊಳ್ಳುತ್ತದೆ. ಈ ಚಲನೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಎಂದು ಕರೆಯಲಾಗುತ್ತದೆ. ಹಾಗಾದರೆ, ಆ ರಾಶಿಗಳು ಯಾವು ದು ಎಂದು ನೋಡೋಣ ಬನ್ನಿ...
ಮೇಷ ರಾಶಿ
ಈ ರಾಜಯೋಗವು ಮೇಷ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ತರಲಿದೆ. ಈ ಯೋಗವು ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಇದಾಗಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಲಾಭ ಸಿಗಲಿದೆ. ಹೊಸ ಯೋಜನೆಗಳು ಲಾಭವನ್ನು ನೀಡಲಿವೆ. ಹಳೆಯ ಹೂಡಿಕೆಗಳು ಆರ್ಥಿಕತೆಯನ್ನು ಹೆಚ್ಚು ಮಾಡಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಹಾಲಕ್ಷ್ಮಿ ರಾಜಯೋಗವು ಅನೇಕ ಪ್ರಯೋಜನಗಳನ್ನು ನೀಡಲಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಉತ್ತಮ ಸಮಯ ಇದಾದ್ದು, ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ನೋಡಬಹುದು ಮತ್ತು ಉತ್ತಮ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಸಾಧ್ಯತೆಯಿದೆ. ಪ್ರೇಮ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಸಹ ಕಂಡುಬರುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಮಹಾಲಕ್ಷ್ಮಿ ರಾಜಯೋಗವಿದ್ದು, ಆರ್ಥಿಕವಾಗಿ ಸಬಲಗೊಳ್ಳಲಿದ್ದಾರೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಕೆಲವು ವರ್ಷಗಳಿಂದ ಸಿಲುಕಿಕೊಂಡಿದ್ದ ಹಣ ಮತ್ತೆ ಮರಳಿ ಸಿಗಲಿದೆ. ಕೆಲಸದ ವೇಗ ಹೆಚ್ಚಾಗುತ್ತದೆ ಮತ್ತು ದೀರ್ಘಾವಧಿಯ ಯೋಜನೆಯಲ್ಲಿ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ಕುಟುಂಬದ ವಾತಾವರಣವು ಶಾಂತ ಮತ್ತು ಸಕಾರಾತ್ಮಕವಾಗಿರುತ್ತದೆ. ನಿಮ್ಮ ಮಾತು ಇತರ ಜನರನ್ನು ಆಕರ್ಷಿಸಲಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.