Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಮಹಾ ಶಿವರಾತ್ರಿ 2026: ಈ ರಾಶಿಯವರಿಗೆ ಶಿವ ನೀಡಲಿದ್ದಾನೆ ಬಂಪರ್ ಉಡುಗೊರೆ! ನಿಮ್ದೂ ಇದೇ ರಾಶಿನಾ?Astrology

Astrology: ಜ್ಯೋತಿಷ್ಯದ ಪ್ರಕಾರ, ಈ ವರ್ಷದ ಮಹಾಶಿವರಾತ್ರಿಯು ಇಂದು (ಫೆ.15) ಸಂಜೆ 5:06 ಕ್ಕೆ ಪ್ರಾರಂಭವಾಗಿ ಫೆಬ್ರವರಿ 16 ರಂದು ಸಂಜೆ 5:35 ಕ್ಕೆ ಕೊನೆಗೊಳ್ಳುತ್ತದೆ ಎಂದು ತಿಳಿಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಮಹಾರಾತ್ರಿ ಬಹಳ ವಿಶೇಷವಾಗಿದ್ದು, ಸರ್ವಾರ್ಥ ಸಿದ್ಧಿ ಯೋಗವನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.
ಪಂಚಾಂಗದ ಪ್ರಕಾರ, ಈ ದಿನವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ಯೋಗದ ಸಮಯದಲ್ಲಿ ಕೈಗೊಂಡ ಚಟುವಟಿಕೆಗಳು ಯಶಸ್ವಿಯಾಗುತ್ತವೆ ಮತ್ತು ಸ್ಥಗಿತಗೊಂಡ ಯೋಜನೆಗಳು ವೇಗವನ್ನು ಪಡೆಯುತ್ತವೆ ಎಂದು ನಂಬಲಾಗಿದೆ.
ಈ ದಿನ, ಉತ್ತರಾಷಾಢ ಮತ್ತು ಶ್ರಾವಣ ನಕ್ಷತ್ರಗಳ ಸಂಯೋಗ ಏರ್ಪಡುವುದರಿಂದ ದಿನವಿಡೀ ವ್ಯತಿಪತ್ ಯೋಗವು ಮೇಲುಗೈ ಸಾಧಿಸುತ್ತದೆ. ಕುಂಭ ರಾಶಿಯಲ್ಲಿ ಸೂರ್ಯ, ಬುಧ, ರಾಹು ಮತ್ತು ಶುಕ್ರ ಸ್ಥಾನಗಳು ಚತುರ್ಗ್ರಹಿ ಯೋಗವನ್ನು ಸೃಷ್ಟಿಸುತ್ತವೆ. ಇದರಿಂದ ಕೆಲವೊಂದು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳು ಕಾಣುತ್ತವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ..

ಮೇಷ ರಾಶಿ

ಮಹಾ ಶಿವರಾತ್ರಿಯ ಸಮಯವು, ಮೇಷ ರಾಶಿಯವರಿಗೆ ತಮ್ಮ ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಬಡ್ತಿಗಳು ಸಿಗುವಂತಹ ಸಮಯ ಇದಾಗಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ಈ ಸಮಯದಲ್ಲಿ ಬಾಕಿ ಇದ್ದ ಹಳೆಯ ಕೆಲಸಗಳು ಪೂರ್ಣಗೊಳ್ಳಲಿದೆ.

ಕನ್ಯಾ ರಾಶಿ

ಶಿವರಾತ್ರಿಯಿಂದ ಕನ್ಯಾ ರಾಶಿಯವರಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಈ ಸಮಯದಲ್ಲಿ ಹಳೆಯ ಹೂಡಿಕೆಗಳು ಗಣನೀಯ ಲಾಭವನ್ನು ನೀಡಲಿವೆ. ಕೆಲಸಕ್ಕೆ ಸಂಬಂಧಿಸಿದಂತೆ ಕಚೇರಿಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯಲಿದ್ದೀರಿ. ಕುಟುಂಬದ ಸಹಕಾರದಿಂದ ಅನೇಕ ಕೆಲಸಗಳು ವೃದ್ಧಿಯಾಗಲಿದೆ. ಮನೆಯಲ್ಲಿ ಶಾಂತಿ ವಾತಾವರಣ ಇರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಮಹಾಶಿವರಾತ್ರಿ ಸಮಯವು ಗಮನಾರ್ಹ ಪ್ರಗತಿಯನ್ನು ಸೂಚಿಸಲಿದೆ. ಆರ್ಥಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಮಯದಲ್ಲಿ ನೀವು ಮಾಡಬೇಕೆಂದುಕೊಳ್ಳುವ ಹೊಸ ಯೋಜನೆಗಳು ಯಶಸ್ವಿಯಾಗಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ಅವರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.