ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಹುಟ್ಟಿದವರು ತುಂಬಾ ಅದೃಷ್ಟಶಾಲಿಗಳು..Numerology

ವಿನಾಯಕ ನಾಯಕ
Numerology : ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆ ತನ್ನದೇ ಆದ ವಿಶೇಷತೆ ಮತ್ತು ಮೌಲ್ಯವನ್ನು ಹೊಂದಿರುತ್ತದೆ. ಆದರೆ ಈ ದಿನಾಂಕಗಳಂದು ಜನಿಸಿದ ಬಹಳಷ್ಟು ವ್ಯಕ್ತಿಗಳು ಯಶಸ್ಸನ್ನು ಗಳಿಸಿರುವುದರಿಂದ ಈ ದಿನಾಂಕಗಳಲ್ಲಿ ಹುಟ್ಟಿದರೆ ಅದೃಷ್ಟ ಎನ್ನುವುದು ಇವರ ಜತೆಯಲ್ಲೇ ಇರುತ್ತದೆ ಎಂದು ಹೇಳಲಾಗುತ್ತದೆ.

1. ಸಂಖ್ಯೆ 1 ( 1, 10, 19, 28 ರಲ್ಲಿ ಜನಿಸಿದವರು)

ಸಂಖ್ಯೆ 1ರಲ್ಲಿ ಜನಿಸಿದವರ ಮೇಲೆ ಸೂರ್ಯ ದೇವರ ಆರ್ಶಿವಾದ ಇರುತ್ತದೆ. ಆದ್ದರಿಂದ ಇವರಲ್ಲಿ ನಾಯಕತ್ವ ಗುಣವು ಹಚ್ಚಿರುತ್ತದೆ. ಇವರಲ್ಲಿ ಆತ್ಮ ವಿಶ್ವಾಸಕ್ಕೆ ಯಾವುದೇ ಕೊರತೆ ಇರದ ಕಾರಣ ಎಂತಹ ಕಷ್ಟಕರ ಸನ್ನಿವೇಶವನ್ನು ಸಹ ಸುಲಭವಾಗಿ ಎದುರಿಸುವ ಎದೆಗಾರಿಕೆ ಇವರಿಗೆ ಇರುತ್ತದೆ.

2. ಸಂಖ್ಯೆ 3 (3, 12, 21, 30 ರಲ್ಲಿ ಜನಿಸಿದವರು)

ಸಂಖ್ಯೆ 3 ರಲ್ಲಿ ಜನಿಸಿದವರು ಗುರು ಗೃಹವನ್ನು ಪ್ರತಿನಿಧಿಸುವುದರಿಂದ ಇವರಲ್ಲಿ ಗಟ್ಟಿತನ ಮತ್ತು ಶಿಸ್ತು ಹೆಚ್ಚಾಗಿರುತ್ತದೆ. ಇವರು ಮಾಡಬೇಕೆನ್ನುವ ಕೆಲಸವನ್ನು ಆತ್ಮ ವಿಶ್ವಾಸ ಮತ್ತು ಧೃಢ ಸಂಕಲ್ಪದಿಂದ ಮಾಡುವುದರಿಂದ ಇವರು ಕೈಗೊಳ್ಳುವ ಎಲ್ಲಾ ಕೆಲಸಗಳು ನೆರವೇರುತ್ತವೆ.

3. ಸಂಖ್ಯೆ 5 (5, 14, 23 ರಲ್ಲಿ ಜನಿಸಿದವರು)

ಇವರು ಬುಧಗ್ರಹದ ಪ್ರತಿನಿಧಿಗಳಾಗಿದ್ದು ಇವರು ಉತ್ತಮ ಸಂವಹನಕಾರರಾಗಿರುತ್ತಾರೆ. ಇವರು ಅತ್ಯಂತ ಚುರುಕು ಬುದ್ದಿಮತ್ತೆಯವರಾಗಿದ್ದು, ಇತರರಿಂದ ಕೆಲಸ ಮಾಡಿಸಿಕೊಳ್ಳುವುದರಲ್ಲಿ ನಿಪುಣರಾಗಿರುತ್ತಾರೆ. ಇವರಿಗೆ ಬಹಬೇಗ ಜನಪ್ರೀಯತೆ ದೊರೆಯುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.