Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಸೂರ್ಯನ ಸಂಚಾರ: 2026ರಲ್ಲಿ ಈ ರಾಶಿಯವರಿಗೆ ಕುಬೇರ ಯೋಗ, ಹಣದ ಮಳೆ ಖಚಿತ! Astrology

Astrology: ಏಪ್ರಿಲ್ 14 ರಂದು ಸೂರ್ಯ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಪಡೆಯುತ್ತಾನೆ. ಈ ದಿನವನ್ನು ಮೇಧ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮೇಧ ಸಂಕ್ರಾಂತಿಯ ಪರಿಣಾಮವು ಕೆಲವೊಂದು ರಾಶಿಯವರ ಮೇಲೆ ಸಕರಾತ್ಮಕ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಮೇಷ ರಾಶಿಯು ಸೂರ್ಯನ ಉತ್ತುಂಗ ಚಿಹ್ನೆಯಾಗಿರುವುದರಿಂದ ಈ ರಾಶಿಯಲ್ಲಿ ಸೂರ್ಯನ ಶಕ್ತಿ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದರ ಪರಿಣಾಮ ಕೆಲವು ರಾಶಿಚಕ್ರದವರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಾಗುತ್ತದೆ ಎನ್ನಲಾಗಿದೆ. ಆದಾಗ್ಯೂ, ಈ ಚಲನೆಯಿಂದ ಯಾವ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತಾರೆ ಎಂದು ನೋಡೋಣ ಬನ್ನಿ,..

ಮೇಷ ರಾಶಿ

ಮೇಷ ರಾಶಿಗೆ ಸೂರ್ಯನು ಸಂಚಾರ ನಡೆಸಲಿರುವುದರಿಂದ ಈ ಜನರಿಗೆ ಶುಭ ಎಂದು ಹೇಳಲಾಗುತ್ತದೆ. ಆದಾಗ್ಯೂ, ಈ ಸಮಯವು ಈ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯವು ಬಹಳ ಉಪಯುಕ್ತವಾಗಿದೆ.

ಸಿಂಹ ರಾಶಿ

ಸೂರ್ಯ ಒಂಬತ್ತನೇ ಮನೆಗೆ ಪ್ರವೇಶ ಪಡೆಯುತ್ತಾನೆ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಅನುಕೂಲಕರವಾಗಿರುತ್ತದೆ. ಈ ಜನರ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಲಭಿಸಲಿವೆ. ವೆಚ್ಚಗಳು ಸ್ವಲ್ಪ ಹೆಚ್ಚಾಗಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ.

ಕನ್ಯಾ ರಾಶಿ

ಸೂರ್ಯ ದೇವರು ಕನ್ಯಾ ರಾಶಿಯ ಎಂಟನೇ ಮನೆಗೆ ಚಲಿಸಲಿದ್ದಾನೆ. ಈ ರಾಶಿಯರು ಸೂರ್ಯನ ಸಂಚಾರದಿಂದ ಉತ್ತಮ ಪ್ರಯೋಜನವನ್ನು ಪಡೆಯಲಿದ್ದೀರಿ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಈ ಸಮಯವು ಉತ್ತಮ ಫಲ ನೀಡಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗುವಂತಹ ಸಮಯ ಇದಾಗಿದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕುಟುಂಬದೊಂದಿಗೆ ಸಂತೋಷದಿಂದ ಇರಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.