Vastu tips: ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಅತ್ಯಂತ ಪವಿತ್ರವೆಂದು ನಂಬಲಾಗುತ್ತದೆ. ಲಕ್ಷ್ಮಿ ದೇವಿಯು ಸ್ವತಃ ತುಳಸಿ ಸಸ್ಯದಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ತುಳಸಿಯನ್ನು ಎಂದಿಗೂ ಹಸಿರಾಗಿ ಇಡಬೇಕು. ಇದೇನಾದರೂ ಒಣಗಿಹೋದಲ್ಲಿ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಿಸಿಕೊಂಡಿದ್ದಾಳೆ ಎಂದು ತಿಳಿಸುತ್ತದೆ.
ಚಳಿಗಾಲದಲ್ಲಿ ತುಳಸಿ ಗಿಡ ದುರ್ಬಲಗೊಳ್ಳುವುದು ಸಹಜ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದಾಗ್ಯೂ, ಚಳಿಗಾಲದಲ್ಲಿ ತುಳಸಿ ಗಿಡವನ್ನು ಚೆನ್ನಾಗಿ ನೋಡಿಕೊಂಡರೂ ಸಹ ಬಾಡುತ್ತಿದ್ದರೆ, ಅದು ಲಕ್ಷ್ಮಿ ದೇವಿಯ ಅಸಮಾಧಾನದ ಸಂಕೇತ ಎಂದು ಗುರುತಿಸಲಾಗಿದೆ. ಇದ್ದಕ್ಕಿಂದಂತಲೇ ತುಳಸಿ ಏನಾದರೂ ಬಾಡಲು ಪ್ರಾರಂಭಿಸಿದರೆ, ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ತುಳಸಿ ಒಣಗುವುದು ಅಶುಭ
ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಏನಾದರೂ ಒಣಗಲು ಪ್ರಾರಂಭಿಸಿದರೆ, ನಿಮ್ಮ ಆರ್ಥಿಕ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾಸ್ತು ಸೂಚಿಸುತ್ತದೆ. ಅಂತಹ ಮನೆಗಳಲ್ಲಿ, ವೆಚ್ಚಗಳು ಯಾವಾಗಲೂ ಆದಾಯಕ್ಕಿಂತ ಹೆಚ್ಚಾಗುತ್ತವೆ. ವ್ಯಾಪಾರಗಳು, ವ್ಯವಹಾರಗಳು ಮತ್ತು ಆಸ್ತಿಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ. ಇದರರ್ಥ ಇನ್ನು ಮುಂದೆ ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸಲು ಇಷ್ಟ ಪಡುವುದಿಲ್ಲ ಹಾಗೆಯೇ ಆಕೆಯ ಆಶೀರ್ವಾದ ನಿಮಗೆ ಸಿಗುವುದಿಲ್ಲ.
ತುಳಸಿ ಗಿಡ ಒಣಗಿದರೆ ಏನು ಮಾಡಬೇಕು?
ಜ್ಯೋತಿಷ್ಯದ ಪ್ರಕಾರ, ತುಳಸಿ ಗಿಡ ಏನಾದರೂ ಒಣಗಿದರೆ, ಅದನ್ನು ಹರಿಯುವ ನೀರಿಗೆ ಅಥವಾ ನದಿಯಲ್ಲಿ ಮುಳುಗಿಸಬೇಕು. ಹಾಗೆಯೇ ತಕ್ಷಣಕ್ಕೆ ಹೊಸ ತುಳಸಿ ಗಿಡಗಳನ್ನು ಮನೆಗೆ ತಂದು ಪೋಷಣೆ ಮಾಡಬೇಕು. ಇದರಿಂದ ಲಕ್ಷ್ಮೀ ನಿಮ್ಮ ಮನೆಯಲ್ಲಿ ಇರಲು ಇಷ್ಟಪಡುತ್ತಾಳೆ. ತುಳಸಿಯ ಒಣಗಿದ ಎಲೆಗಳಿಂದ ಗಂಗಾ ನೀರನ್ನು ಮನೆಗೆ ಸಿಂಪಡಿಸಿದರೆ ಇದು ಮನೆಯಲ್ಲಿರುವ ನಕರಾಥ್ಮಕ ಶಕ್ತಿಯನ್ನು ಹೊರಹಾಕುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.