ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಮನೆಯಿಂದ ಆಚೆಬಂದಾಗ ಇವರೆಲ್ಲಾ ಕಂಡರೆ ಅದು ನಿಮ್ಮ ಪಾಲಿಗೆ ಶುಭ ಶಕುನ.. ಯಾರು ಎನ್ನುವುದನ್ನು ಮಿಸ್​ ಮಾಡದೆ ನೋಡಿ..Vastu tips

Vastu tips: ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಸಣ್ಣ ದೈನಂದಿನ ಅನುಭವಗಳು ಕೂಡಾ ಭವಿಷ್ಯದಲ್ಲಿ ಶುಭ ಮತ್ತು ಅಶುಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ನೀವು ಬೆಳಿಗ್ಗೆ ಎದ್ದು ಯಾವುದಾದರೂ ಪ್ರಮುಖ ಕಾರ್ಯಕ್ಕಾಗಿ ಹೊರಟಾಗ ದಾರಿಯಲ್ಲಿ ನೀವು ನೋಡುವ ಕೆಲವೊಂದು ವಿಷಯಗಳು ನಿಮ್ಮ ದಿನ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಹಾಗಿದ್ದರೆ, ಆ ಚಿಹ್ನೆಗಳು ಏನೆಂಬುದನ್ನು ನೋಡೋಣ ಬನ್ನಿ...
ಶಿವ ಭಕ್ತರು/ ಸನ್ಯಾಸಿಗಳು
ನೀವು ನಿಮ್ಮ ಮೆನೆಯಿಂದ ಹೊರ ಬಂದ ತಕ್ಷಣ ಸನ್ಯಾಸಿ ಅಥವಾ ಶಿವನ ಭಕ್ತರನ್ನು ನೋಡಿದರೆ, ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ವೇದಗಳ ಪ್ರಕಾರ, ಅಂತಹ ಸಮಯದಲ್ಲಿ ನೀವು ದೇವರನ್ನು ನೆನಸಿ ಮತ್ತು ಸನ್ಯಾಸಿಗಳನ್ನು ಗೌರವಿಸಿ. ಇದು ಮಾನಸಿಕ ಒತ್ತಡ ಮತ್ತು ಕೆಲಸಕ್ಕೆ ಸಂಬಂಧಿಸಿದ ಕೆಲವೊಂದು ತೊಂದರೆಗಳು ನಿವಾರಣೆಯಾಗುತ್ತದೆ.

ಕಸ ಗುಡಿಸುವ ಕಾರ್ಮಿಕರು

ಬೆಳಿಗ್ಗೆ ಬೇಗನೆ ಎದ್ದು, ಕಸ ಗುಡಿಸುವ ಉದ್ಯೋಗಿಯನ್ನು ನೋಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತ ಎಂದು ಕರೆಯಲಾಗುತ್ತದೆ. ನೀವೇನಾದರೂ, ಯಾರಾದರೂ ಸ್ವಚ್ಛಗೊಳಿಸುವುದನ್ನು ನೋಡಿದರೆ, ನಿಮ್ಮ ವೃತ್ತಿಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಅದರ ಜೊತೆಗೆ ನಿಮ್ಮ ಹೊಸ ಯೋಜನೆಗಳು ಯಶಸ್ವಿಯಾಗುತ್ತದೆ.

ನವ ದಂಪತಿ

ಹಿಂದೂ ಧರ್ಮದಲ್ಲಿ ನವವಿವಾಹಿತ ದಂಪತಿಗಳನ್ನು ಲಕ್ಷ್ಮಿ ಮತ್ತು ನಾರಾಯಣರ (ವಿಷ್ಣು) ಪ್ರತಿರೂಪ ಎಂದು ಭಾವಿಸಲಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಅಥವಾ ಒಂದು ಒಳ್ಳೆಯ ಕೆಲಸಕ್ಕೆ ಹೊರಡುವಾಗ ನೀವು ನವದಂಪತಿಯನ್ನು ನೋಡುವುದರಿಂದ ದೈವಿಕ ಆಶೀರ್ವಾದವನ್ನು ಪಡೆದಂತೆ ಎಂದು ಹೇಳಲಾಗುತ್ತದೆ. ಇದರರ್ಥ ನೀವೇನಾದರೂ ಸಮಸ್ಯೆಗಳನ್ನು ಎದುರಿಸುತ್ತದೆ ಅವು ಪರಿಹರಿಸುತ್ತವೆ. ಜೊತೆಗೆ ನಿಮ್ಮ ಆರ್ಥಿಕತೆಗೆ ಸಹಾಯವಾಗುತ್ತದೆ.

ಅಂತ್ಯಕ್ರಿಯೆ

ಹಿಂದೂ ಪುರಾಣದ ಪ್ರಕಾರ, ರಸ್ತೆಯಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನೋಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಯಾವುದೇ ಕಾರ್ಯಕ್ರಮಕ್ಕೆ ಹೋಗುತ್ತಿದ್ದರೆ, ಆ ಸಮಯದಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನೋಡುವುದರಿಂದ ನಿಮ್ಮ ಕೆಲಸ ಯಾವುದೇ ನಿರ್ವಿಘ್ನವಾಗದಂತೆ ನಡೆಯುತ್ತದೆ. ಆದಾಗ್ಯೂ, ಉತ್ತರ, ಪೂರ್ವ ಅಥವಾ ಪಶ್ಚಿಮ ದಿಕ್ಕುಗಳಲ್ಲಿ ಅಂತ್ಯಕ್ರಿಯೆಯನ್ನು ನೋಡುವುದನ್ನು ಅದೃಷ್ಟ ಎಂದು ಹೇಳಲಾಗುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.