Vastu tips (ಸಾಂದರ್ಭಿಕ ಚಿತ್ರ)
Vastu tips: ಮನೆಯ ಅಂದವನ್ನು ಹೆಚ್ಚಿಸಲು ಅನೇಕ ಜನರು ಸಸ್ಯಗಳನ್ನು ಬೆಳೆಸುತ್ತಾರೆ. ಇವುಗಳು ಬಾಲ್ಕನಿಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ಪರಿಸರವನ್ನು ಸ್ವಚ್ಛಗೊಳಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಾವು ನೆಡುವ ಕೆಲವೊಂದು ಸಸ್ಯಗಳು ಸಕರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಉತ್ತಮ ವಾತಾವರಣವನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಉದಾಹರಣೆ ಮನೆಯಲ್ಲಿ ನೆಡುವ ಮನಿಪ್ಲಾಂಟ್. ಈ ಸಸ್ಯವು ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ.
ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮನಿ ಪ್ಲಾಂಟ್
ವಾಸ್ತು ಪ್ರಕಾರ, ಮನಿ ಪ್ಲಾಂಟ್ ನೆಡುವುದರಿಂದ ಇದು ಮನೆಗೆ ಸಂತೋಷ, ಶಾಂತಿ ಮತ್ತು ಸಂಪತ್ತನ್ನು ನೀಡುತ್ತದೆ. ಈ ಗಿಡವು ನಕರಾತ್ಮಕ ಶಕ್ತಿಯನ್ನು ನಿವಾರಿಸಿ, ಮನೆಗೆ ಧನಾತ್ಮಕ ವಾತಾವರಣವನ್ನು ಒದಗಿಸುತ್ತದೆ. ಆರೋಗ್ಯಕರ ಮತ್ತು ಸಮೃದ್ಧವಾಗಿ ಬೆಳೆದ ಈ ಸಸ್ಯವು ಮನೆಗೆ ಆರ್ಥಿಕ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
ಮಣ್ಣಿಗೆ ಹಾಲು ಸೇರಿಸಿ
ಮನಿ ಪ್ಲಾಂಟ್ ನ ಮಣ್ಣಿಗೆ ಸ್ವಲ್ಪ ಹಾಲು ಸೇರಿಸುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಹಾಲು ಶುದ್ಧತೆ ಮತ್ತು ಸಮೃದ್ಧಿಯ ಸಂಕೇತವಾಗಿರುತ್ತದೆ. ಇದು ಸಸ್ಯವನ್ನು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಜೊತೆಗೆ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಈ ಸಸ್ಯವನ್ನು ನೆಡುವುದರಿಂದ ಮನೆಯ ಸಾಲವನ್ನು ತೊಡೆದು ಹಾಕಲು ಉಪಯೋಗವಾಗುತ್ತದೆ.
ಮಣ್ಣಿಗೆ ಸಕ್ಕರೆ ಸೇರಿಸಿ
ಮಣ್ಣಿಗೆ ಸ್ವಲ್ಪ ಸಕ್ಕರೆ ಹಾಕುವುದರಿಂದ ಮನಿ ಪ್ಲಾಂಟ್ ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ. ವಾಸ್ತು ಪ್ರಕಾರ, ಸಕ್ಕರೆ ಮನೆಯಲ್ಲಿ ಮಾಧುರ್ಯ ಮತ್ತು ಸಂಪತ್ತಿನ ಬೆಳವಣಿಗೆಯನ್ನು ಸೂಚಿಸುತ್ತದೆ. ಇದನ್ನು ಸಸ್ಯಕ್ಕೆ ಸುರಿಯುವುದರಿಂದ ಇದು ಮನೆಯ ವಾತಾವರಣವನ್ನು ಧನಾತ್ಮಕವಾಗಿ ಸೃಷ್ಟಿಸುತ್ತದೆ. ಹಾಗೆಯೇ ಆರ್ಥಿಕ ನಷ್ಟವನ್ನು ತಡೆದು ಮನೆಯಲ್ಲಾಗುವ ತೊಂದರೆಗಳನ್ನು ನಿವಾರಿಸುತ್ತದೆ.
ಕೆಂಪು ದಾರವನ್ನು ಕಟ್ಟಿಕೊಳ್ಳಿ
ಮನಿ ಪ್ಲಾಂಟ್ ಸುತ್ತಲೂ ಕೆಂಪು ದಾರವನ್ನು ಕಟ್ಟುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಸಸ್ಯದ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಮನೆಗೆ ಸಂಪತ್ತಿನ ಹೊಳೆಯನ್ನು ಹರಿಸುತ್ತದೆ. ಈ ಸರಳ ಪರಿಹಾರವು ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಆರ್ಥಿಕ ಸಮೃದ್ಧಿಯನ್ನು ಉ್ತತೇಜನಗೊಳಿಸುತ್ತದೆ.
ಬಿಳಿ ಗಂಟೆಗಳು ಅಥವಾ ಹರಳುಗಳ ಬಗ್ಗೆ ಎಚ್ಚರದಿಂದಿರಿ
ಮನಿ ಪ್ಲಾಂಟ್ ಬಳಿ ಸಣ್ಣ ಬಿಳಿ ಗಂಟೆಗಳು ಮತ್ತು ಹರಳುಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಇದನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯ ಸಂಪತ್ತು ದುಪ್ಪಟ್ಟಾಗಲಿದೆ. ಹಾಗೆಯೇ ಈ ದಿಕ್ಕನ್ನು ಅತ್ಯಂತ ಮಂಗಳಕರನೆಂದು ಕರೆಯಲಾಗುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.