ಜ್ಯೋತಿಷ್ಯ

ನೀವು ಪೂಜೆ ಮಾಡಲು ಶಂಖ ಬಳಸುತ್ತೀರಾ? ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ Vastu Tips

Vastu Tips: ಹಿಂದೂ ಧರ್ಮದಲ್ಲಿ, ಶಂಖವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಪೂಜಾ ಕೋಣೆಯಲ್ಲಿ ಮಾತ್ರವಲ್ಲದೇ, ಮನೆಯ ಸಮೃದ್ಧಿ, ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಇರಿಸಲಾಗುತ್ತದೆ. ಹಾಗೆಯೇ ಇದನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ಶಂಖದಿಂದ ಹೊರಸೂಸುವ ಸ್ವರವು ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ತರುತ್ತದೆ. ಇದು ನೀರು, ಗಾಳಿ ಮತ್ತು ಆಕಾಶ ಎಂಬ ಮೂರು ಅಂಶಗಳ ಅದ್ಭುತ ಸಂಗಮ ಎಂದು ಕರೆಯಲಾಗಿದೆ. ಆದರೆ, ಶಂಖಗಳನ್ನು ಸಂಗ್ರಹಿಸಲು ಮತ್ತು ಬಳಸಲು ನಿರ್ದಿಷ್ಟ ನಿಯಮಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಇವುಗಳನ್ನು ನಿರ್ಲಕ್ಷಿಸಿದರೆ ನೀವು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತೀರಿ..

ಶಂಖವನ್ನು ಇಡಲು ಸರಿಯಾದ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಿ

ಮನೆಯ ಈಶಾನ್ಯ ದಿಕ್ಕಿನಲ್ಲಿ ಶಂಖವನ್ನು ಇಡುವುದು ಯಾವಾಗಲು ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ವಿಷ್ಣುವಿಗೆ ಸಂಬಂಧಿಸಿದ್ದರಿಂದ ಇದು ಮನೆಗೆ ಶಾಂತಿ ಮತ್ತು ನೆಮ್ಮದಿಯನ್ನು ತರುತ್ತದೆ. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ ಏಕೆಂದರೆ ಇದು ನಿಮ್ಮ ಮನೆಗೆ ತೊಂದರೆ ನೀಡಬಹುದು.

ಶಂಖದ ಶುದ್ಧೀಕರಣ ಮಾಡಿ

ಶಂಖವನ್ನು ಪ್ರತಿದಿನ ಅಥವಾ ಕನಿಷ್ಠ ವಾರಕ್ಕೊಮ್ಮೆ ಗಂಗಾ ಜಲ ಅಥವಾ ಶುದ್ಧ ನೀರಿನಿಂದ .ತೊಳೆಯಿರಿ. ನಂತರ ಅದನ್ನು ಶುಭ್ರವಾದ ಬಟ್ಟೆಯಿಂದ ಒರೆಸಿ, ಪವಿತ್ರ ಸ್ಥಳದಲ್ಲಿ ಇರಿಸಿ. ಧೂಳಿನಿಂದ ಕೂಡಿದ ಪ್ರದೇಶದಲ್ಲಿ ಶಂಖವನ್ನು ಇರಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಕಡಿಮೆಯಾಗುತ್ತದೆ.

ಎರಡು ಶಂಖಗಳನ್ನು ಇರಿಸಿ

ಮನೆ ಅಥವಾ ದೇವಾಲಯದಲ್ಲಿ ಎರಡು ಶಂಖಗಳನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಒಂದು ಪೂಜೆಗೆ ಮತ್ತೊಂದು ವಿಷ್ಣುವಿಗೆ ಅರ್ಪಿಸಲು ಎಂದು ತಿಳಿಸಲಾಗಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಹಾಗೆಯೇ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಪೂಜೆ ವೇಳೆ ಶಂಖವನ್ನು ಊದಬಾರದು

ಪೂಜೆಗೆ ಬಳಸುವ ಶಂಖವನ್ನು ಎಂದಿಗೂ ಊದಬಾರದು. ಏಕೆಂದರೆ, ಈ ಶಂಖವನ್ನು ನೀರು ಅರ್ಪಿಸಲು, ಅಭಿಷೇಕ ಮಾಡಲು ಅಥವಾ ಆರತಿ ಮಾಡಲು ಮಾತ್ರ ಬಳಸಲಾಗುತ್ತದೆ. ಹಾಗಾಗಿ ಪೂಜೆಗೆ ಬಳಸುವ ಶಂಖವನ್ನು ಊದುವುದರಿಂದ ಅಶುಭ ಹಾಗೂ ಮನೆಗೆ ಅಪಾಯ ಎಂದು ಗುರುತಿಸಲಾಗಿದೆ.

ಶಿವನ ಪೂಜೆಯಲ್ಲಿ ಶಂಖಗಳನ್ನು ಬಳಸಬೇಡಿ

ಶಿವನ ಪೂಜೆಯ ಸಂದರ್ಭದಲ್ಲಿ ಶಂಖದ ಬಳಕೆಯನ್ನು ನಿಷೇಧಿಸಬೇಕು. ಏಕೆಂದರೆ, ಶಂಖವು ಸಾಗರವನ್ನು ಒಳಗೊಂಡಿದೆ ಎಂದು ನಂಬಲಾಗಿದೆ. ಸಮುದ್ರ ದೇವರೊಂದಿಗೆ ಶಿವನ ಸಂಬಂಧವು ವಿಷದೊಂದಿಗೆ ಸಂಬಂಧಿಸಿದೆ. ಶಂಖದ ಚಿಪ್ಪಿಗೆ ನೀರನ್ನು ಅರ್ಪಿಸುವುದರಿಂದ ಅಶುಭ ಎಂದು ಪರಿಗಣಿಸಲಾಗುತ್ತಿದೆ.

ಶಂಖವನ್ನು ಯಾವಾಗಲೂ ಸ್ವಲ್ಪ ನೀರು ಅಥವಾ ಗಂಗಾ ನೀರಿನಿಂದ ಭರ್ತಿ ಮಾಡಬೇಕು. ಖಾಲಿ ಶಂಖವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದರಿಂದ ನೀರಿನಿಂದ ತುಂಬಿದ ಶಂಖವು ಸಕರಾತ್ಮಕ ಶಕ್ತಿಯನ್ನು ಹೊಂದುತ್ತದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.