Vastu Tips ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ನೀರಿನ ಟ್ಯಾಂಕ್ ದಿಕ್ಕು ಸರಿಯಿಲ್ಲದಿದ್ದರೆ ಬಡತನ ತಪ್ಪಿದ್ದಲ್ಲ!: ಹಣದ ಹರಿವು ಹೆಚ್ಚಿಸಲು ವಾಸ್ತು ತಜ್ಞರ ಪ್ರಮುಖ ಸಲಹೆ! Vastu Tips

Vastu Tips:

ನಾವು ಮನೆ ನಿರ್ಮಿಸುವಾಗ ಒಳಾಂಗಣ ವಿನ್ಯಾಸ (Interior Design) ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತೇವೆ. ಆದರೆ, ಹೆಚ್ಚಾಗಿ ಮನೆಯ ಮೇಲ್ಛಾವಣಿ (Roof) ಅಥವಾ ಟೆರೇಸ್ ಮೇಲಿಡುವ ನೀರಿನ ಟ್ಯಾಂಕ್‌ನ ದಿಕ್ಕನ್ನು ನಿರ್ಲಕ್ಷಿಸಿಬಿಡುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಒಂದು ಸಣ್ಣ ನಿರ್ಲಕ್ಷ್ಯವು ನಿಮ್ಮನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದು. ತಪ್ಪು ದಿಕ್ಕಿನಲ್ಲಿಟ್ಟ ನೀರಿನ ಟ್ಯಾಂಕ್ ಮನೆಗೆ ಬರುವ ಧನ ಹರಿವನ್ನು ತಡೆದು, ನಿಮ್ಮ ಆಸ್ತಿ ಹಾಗೂ ಉಳಿತಾಯವನ್ನು ಕ್ಷಣಮಾತ್ರದಲ್ಲಿ ಕರಗಿಸಿಬಿಡುತ್ತದೆ.

ಈಶಾನ್ಯ ಮೂಲೆಯಲ್ಲಿ ಸಿಂಟೆಕ್ಸ್

ನಿಮ್ಮ ಮನೆಯ ಛಾವಣಿಯ ಈಶಾನ್ಯ ಮೂಲೆಯಲ್ಲಿ ನೀರಿನ ಟ್ಯಾಂಕ್ ಇದ್ದರೆ, ನಿಮ್ಮ ಮನೆಯ ತಿಜೋರಿ ಅಪಾಯದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಈ ದಿಕ್ಕನ್ನು ದೇವರು ಮತ್ತು ದೇವತೆಗಳು, ಲಕ್ಷ್ಮೀ ದೇವಿಯ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಭಾರವಾದ ಟ್ಯಾಂಕ್ ಇದ್ದರೆ ಮನೆಯ ಸಮೃದ್ಧಿ ನಿಲ್ಲುತ್ತದೆ ಜೊತೆಗೆ ವ್ಯವಹಾರದಲ್ಲಿ ನಷ್ಟವಾಗುತ್ತದೆ. ಖರ್ಚುಗಳು ಇದ್ದಕ್ಕಿಂದ್ದಂತರ ಹೆಚ್ಚಾಗುವುದರಿಂದ ನೀವು ಸಾಲ ಮಾಡಬಹುದು.

ಆಗ್ನೇಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್

ಆಗ್ನೇಯ ದಿಕ್ಕು ಅಗ್ನಿ ಅಂಶಕ್ಕೆ ಸೇರಿದೆ. ಈ ದಿಕ್ಕಿನಲ್ಲಿ ನೀರಿನ ಟ್ಯಾಂಕ್​ ಇಡುವುದರಿಂದ ಹಣ ಮತ್ತು ಬೆಂಕಿಯ ನಡುವಿನ ಘರ್ಷಣೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಈ ತಪ್ಪು ತಿಳುವಳಿಕೆ ಅಥವಾ ನಿರ್ಲಕ್ಷ್ಯದಿಂದಾಗಿ, ಉದ್ಯಮಿಗಳು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು. ಹಂಚಿಕೆಯಲ್ಲಿ ವಿವಾದಗಳು ಮತ್ತು ನ್ಯಾಯಾಲಯದ ಪ್ರಕರಣಗಳಿಂದಾಗಿ ಹಣ ವ್ಯರ್ಥವಾಗಬಹುದು.

ಅತ್ಯಂತ ಶುಭ ದಿಕ್ಕು: ನೈಋತ್ಯ

ನಿಮ್ಮ ಮನೆಗೆ ನಿರಂತರವಾಗಿ ಹಣದ ಹರಿವು ಬೇಕು ಮತ್ತು ಹಣದ ಕೊರತೆಯನ್ನು ಎಂದಿಗೂ ಎದುರಿಸಬಾರದು ಎಂದು ನೀವೇನಾದರೂ ಬಯಸಿದರೆ, ಯಾವಾಗಲೂ ನೀರಿನ ಟ್ಯಾಂಕ್ ಅನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿ. ಈ ದಿಕ್ಕಿನಲ್ಲಿ ಟ್ಯಾಂಕ್ ಇರುವುದು ಮನೆಗೆ ಆರ್ಥಿಕ ಸ್ಥಿರತೆಯನ್ನು ತರುತ್ತದೆ. ಮಧ್ಯೆದಲ್ಲಿ ಸಿಲುಕಿಕೊಂಡಿರುವ ಹಣ ಮರಳಿ ಪಡೆಯುತ್ತೀರಿ. ಜೊತೆಗೆ ಲಾಭವನ್ನು ನಿರೀಕ್ಷಿಸಬಹುದು.

ಆರ್ಥಿಕ ನಷ್ಟವನ್ನು ತಪ್ಪಿಸಲು ವಾಸ್ತು ಪರಿಹಾರ

ಬಣ್ಣ ಬದಲಾಯಿಸಿ: ನಿಮ್ಮ ಟ್ಯಾಂಕ್ ತಪ್ಪು ದಿಕ್ಕಿನಲ್ಲಿದ್ದರೆ ಮತ್ತು ಅದನ್ನು ಸರಿಸಲು ಸಾಧ್ಯವಾಗದಿದ್ದರೆ, ತಕ್ಷಣ ಅದಕ್ಕೆ ಬಿಳಿ ಅಥವಾ ತಿಳಿ ಹಳದಿ ಬಣ್ಣವನ್ನು ಬಳಿಯಿರಿ. ಬಿಳಿ ಬಣ್ಣವು ನಕಾರಾತ್ಮಕ ಶಕ್ತಿಯ ಪರಿಣಾಮ ಮತ್ತು ಆರ್ಥಿಕ ನಷ್ಟವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.
ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ: ಕೊಳಕು ಅಥವಾ ಒಡೆದ ತೊಟ್ಟಿಯು ರಾಹುವಿನ ಋಣಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಸಂಕಷ್ಟವನ್ನು ಉಂಟುಮಾಡುತ್ತದೆ. ತೊಟ್ಟಿಯನ್ನು ಯಾವಾಗಲೂ ಸ್ವಚ್ಛವಾಗಿಡಿ ಮತ್ತು ಅದರ ಮುಚ್ಚಳವನ್ನು ಎಂದಿಗೂ ತೆರೆದಿಡಬೇಡಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.