ಜ್ಯೋತಿಷ್ಯ

ಗುರುವಿನ ಅನುಗ್ರಹದಿಂದ ಈ 3 ರಾಶಿಯವರಿಗೆ ಇಂದಿನಿಂದ ಶುಭಫಲ! Astrology

Astrology: ಮಂಗಳವಾರ (ನ.11) ಗುರುವು ಕರ್ಕಾಟಕ ರಾಶಿಯಲ್ಲಿ ಹಿಮ್ಮುಖ ಗತಿಯಲ್ಲಿ ಚಲಿಸುತ್ತಾನೆ. ಅಂದರೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾನೆ ಎಂದರ್ಥ. ಯಾವುದೇ ಗ್ರಹದ ಹಿಮ್ಮುಖ ಚಲನೆಯನ್ನು ಶುಭವೆಂದು ಪರಿಗಣಿಸುವುದಿಲ್ಲ. ಆದರೆ, ಗುರು ಗ್ರಹವನ್ನು ಶುಭ ಎಂದು ಕರೆಯಲಾಗಿದೆ. ಈ ವರ್ಷ ಗುರುವು ಕರ್ಕಾಟಕ ರಾಶಿಯಲ್ಲಿ ನೆಲೆಗೊಂಡಿದ್ದರಿಂದ 3 ರಾಶಿ ಜನರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹಾಗಿದ್ದರೆ, ಅದು ಯಾವ ರಾಶಿ ಎಂದು ನೋಡೋಣ ಬನ್ನಿ...

ವೃಷಭ ರಾಶಿ

ಜ್ಯೋತಿಷ್ಯದ ಪ್ರಕಾರ, ಗುರುವಿನ ಹಿಮ್ಮುಖ ಚಲನೆಯು ವೃಷಭ ರಾಶಿಯವರಿಗೆ ಶುಭವೆಂದು ತಿಳಿಸಿದೆ. ಈ ದಿನಗಳಲ್ಲಿ ನಿಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತೀರಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಲಾಭಗಳನ್ನು ಪಡೆಯಲಿದ್ದೀರಿ. ಒಡಹುಟ್ಟಿದವರಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಬರಬಹುದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಅಡತಡೆಗಳು ಉಂಟಾಗಬಹುದು. ಆದರಿಂದ ಚಿಂತಿಸದೇ ಮುನ್ನುಗ್ಗಲು ಪ್ರಯತ್ನಿಸಿ.

ಕನ್ಯಾ ರಾಶಿ

ಗುರುವಿನ ಹಿಮ್ಮುಖ ಚಲನೆಯಿಂದಾಗಿ, ಈ ರಾಶಿಯವರಿಗೆ ಹೊಸ ಸ್ನೇಹಿತರ ಪರಿಚಯವಾಗಬಹುದು. ಅವರಿಂದ ಬೆಂಬಲವನ್ನೂ ಪಡೆಯಬಹುದು. ವೃತ್ತಿಜೀವನದ ದೃಷ್ಟಿಯಲ್ಲಿ ಎಲ್ಲವೂ ಒಳ್ಳೆಯ ರೀತಿಯಲ್ಲಿಯೇ ನಡೆಯಬಹುದು. ಉದ್ಯಮಿಗಳು ಗುರುವಿನ ಆಶೀರ್ವಾದದಿಂದ ಕೆಲಸ ಕಾರ್ಯಗಳಲ್ಲಿ ಮುನ್ನಣೆ ಪಡೆಯುತ್ತೀರಿ. ಹಾಗೆಯೇ ಸಂಸಾರದಲ್ಲಿ ಮೊದಲಿಗಿಂತ ಸಂಬಂಧ ಉತ್ತಮವಾಗಿರುತ್ತದೆ. ಈ ದಿನಗಳಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರದಿಂದಿರಿ.

ಧನು ರಾಶಿ

ಗುರುವಿನ ಹಿಮ್ಮುಖ ಚಲನೆಯು ಧನು ರಾಶಿಯವರಿಗೆ ಸೌಕರ್ಯ ಮತ್ತು ಐಷಾರಾಮಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಮಾಡುವಂತಹ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಈ ಸಮಯದಲ್ಲಿ ನೀವು ಮಾಡುವಂತಹ ಕೆಲಸಗಳು ಯಶಸ್ಸನ್ನು ಸಾಧಿಸಲು ಅವಕಾಶ ಕಲ್ಪಿಸುತ್ತವೆ. ಈ ಸಮಯವು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಬಹುದು. ಹಾಗಾಗಿ ಚಿಂತಿಸಬೇಡಿ ಜಾಗರೂಕರಾಗಿರಿ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.