Astrology: 2026 ರ ಮೊದಲ ಸೂರ್ಯಗ್ರಹಣ ಫೆಬ್ರವರಿ 17 ರಂದು ಮಂಗಳವಾರ ಸಂಭವಿಸಲಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಣವು ಕುಂಭ ರಾಶಿಯಲ್ಲಿ ನೆಲೆಸುತ್ತದೆ. ಈ ಸಮಯದಲ್ಲಿ ಸೂರ್ಯನು ಕುಂಭ ರಾಶಿಯಲ್ಲಿ ನೆಲೆಗೊಳ್ಳುತ್ತಾನೆ. ಆದರಿಂದ ಈ ವರ್ಷದ ಮೊದಲ ಸೂರ್ಯ ಗ್ರಹಣವು ಮೂರು ದೃಷ್ಟಿಕೋನಗಳಾದ ಜ್ಯೋತಿಷ್ಯ, ವೈಜ್ಞಾನಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಲಾಗಿದೆ.
ಇದು ಫೆಬ್ರವರಿ 16 ರಿಂದ ಫೆಬ್ರವರಿ 22 ರವರೆಗೆ ಗ್ರಹಣದ ವರ್ಚಸ್ಸು ಇರುವುದರಿಂದ ಮುಂದಿನ ಏಳು ದಿನಗಳು ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯ ವಿಷಯದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಕೆಲವೊಂದು ರಾಶಿಯವರಿಗೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...
ಮೇಷ ರಾಶಿ
ಸೂರ್ಯ ಗ್ರಹಣದಿಂದ ಮೇಷ ರಾಶಿಯವರ ಆತಂಕ ಕಡಿಮೆಯಾಗಲಿದ್ದು, ನಿಮ್ಮ ಕೆಲಸದಲ್ಲಿ ಬಲಗೊಳ್ಳುತ್ತದೆ. ಕುಟುಂಬದ ಸಹಾಯದಿಂದ ಮುನ್ನಡೆ ಸಾಧಿಸಲಿದ್ದೀರಿ. ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿದ್ದು, ಬುದ್ದಿವಂತಿಕೆಯಿಂದ ಕಾರ್ಯ ಸಾಧಿಸಲಿದ್ದೀರಿ.
ವೃಷಭ ರಾಶಿ
ವೃಷಭ ರಾಶಿಯವರು ಈ ಸಮಯದಲ್ಲಿ ಆತುರದಿಂದ ನಿರ್ಧಾರ ತೆಗೆದುಕೊಳ್ಳುವುದು ನಿಲ್ಲಿಸುವುದು ಉತ್ತಮ. ವ್ಯವಹಾರದಲ್ಲಿ ಹಣ ಹಾಕುವವರು ಸ್ವಲ್ಪ ಯೋಚಿಸಿ ಹಾಕುವುದರಿಂದ ಲಾಭವನ್ನು ಪಡೆಯಬಹುದು. ಕಚೇರಿಯಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದ್ದು, ಅಧಿಕಾರಿಗಳು ನಿಮ್ಮೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ. ಈ ವೇಳೆ ಹೂಡಿಕೆಗಳು ಲಾಭವನ್ನು ನೀಡಲಿವೆ.
ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ಕೆಲಸದ ಮೇಲೆ ಗಮನ ಹರಿಸುವುದರಿಂದ ವೃತ್ತಿಜೀವನದ ಪ್ರಗತಿಯನ್ನು ಕಾಣಬಹುದಾಗಿದೆ.ವ್ಯವಹಾರದಲ್ಲಿರುವವರು ಅಧಿಕ ಹಣ ವ್ಯಯ ಮಾಡುವುದನ್ನು ನಿಲ್ಲಿಸುವುದು ಒಳ್ಳೆಯದು. ಈ ಸಮಯದಲ್ಲಿ ಆದಷ್ಟು ದೀರ್ಘ ಪ್ರಯಾಣವನ್ನು ತಪ್ಪಿಸುವುದು ಉತ್ತಮವಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.