Chanakya Niti (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಶ್ರೀಮಂತರಾಗುವುದು ಇನ್ಮುಂದೆ ಕನಸಲ್ಲ: ಯುವಜನತೆಗಾಗಿ ಚಾಣಕ್ಯನ ಅತಿ ದೊಡ್ಡ ಆರ್ಥಿಕ ರಹಸ್ಯಗಳು ಇಲ್ಲಿವೆ! Chanakya Niti

Chanakya Niti: ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲು ಕೆಲವು ಮೂಲಭೂತ ತತ್ವಗಳನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಎಲ್ಲಾ ತಂತ್ರಗಳನ್ನು ಮನುಷ್ಯನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಯಶಸ್ಸನ್ನು ಸಾಧಿಸಲು ಸಹಾಯವಾಗುತ್ತದೆ ಎಂದು ಚಾಣಕ್ಯ ನಂಬಿದ್ದಾರೆ. ಹಾಗಿದ್ದರೆ, ಅವರ ತತ್ವಗಳೇನು ಎಂದು ನೋಡೋಣ ಬನ್ನಿ...

ಅನಗತ್ಯವಾಗಿ ಹಣ ಖರ್ಚು ಮಾಡಬೇಡಿ.

ಆಚಾರ್ಯರ ಪ್ರಕಾರ, ಉತ್ತಮ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯು ಸಂತೋಷ ಮತ್ತು ನೆಮ್ಮದಿಯ ಬದುಕನ್ನು ನಡೆಸುತ್ತಾರೆ. ಹಾಗಾಗಿ ಯಾರು ಅಧಿಕ ಹಣವನ್ನು ದುಂದುವೆಚ್ಚ ಮಾಡುತ್ತಾರೋ ಅಂತಹ ವ್ಯಕ್ತಿಗಳು ಬಡತನ ಮತ್ತು ದುಃಖಕ್ಕೆ ಸಿಲುಕಿಕೊಳ್ಳುತ್ತಾರೆ ಎಂದು ಚಾಣಕ್ಯ ವಿವರಿಸುತ್ತಾರೆ.
ಆದಾಗ್ಯೂ, ಕಷ್ಟದ ಸಮಯದಲ್ಲಿ ಪ್ರಯೋಜನ ಪಡೆಯಲು ಒಬ್ಬ ವ್ಯಕ್ತಿಯು ತನ್ನ ಆದಾಯದಲ್ಲಿ ಒಂದು ಭಾಗವನ್ನು ಯಾವಾಗಲು ಉಳಿಸಿಕೊಳ್ಳಬೇಕು. ಇದು ಅವರ ಮುಂದಿನ ಜೀವನದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ ಎಂದು ಹೇಳುತ್ತಾರೆ.

ಕಠಿಣ ಪರಿಶ್ರಮ

ಯಶಸ್ಸಿನ ಏಕೈಕ ಕೀಲಿಕೈ ಎಂದರೆ ಅದು ಕಠಿಣ ಪರಿಶ್ರಮ ಎಂದು ಚಾಣಕ್ಯ ನಂಬಿದ್ದಾರೆ. ಆದಾಗ್ಯೂ, ಕಷ್ಟಪಟ್ಟು ದುಡಿಯುವವರಿಗೆ ಜೀವನದಲ್ಲಿ ಐಷಾರಾಮಿ ಬದುಕು ಸಿಗುತ್ತದೆ. ಇದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟು ಬೇಗ ಲಾಭವನ್ನು ನಿರೀಕ್ಷಿಸಬಹುದು ಎಂದು ಹೇಳುತ್ತಾರೆ. ಅಂದಹಾಗೇ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸನ್ನು ಪಡೆಯಬಹುದು. ಜೊತೆಗೆ ಲಕ್ಷ್ಮೀ ದೇವಿಯು ಸದಾ ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದು ಹೇಳುತ್ತಾರೆ.

ದಾನ ಮಾಡುವುದು

ಯಾವ ವ್ಯಕ್ತಿ ತಾನು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಮಾಡುತ್ತಾನೋ ಅವರು ಜೀವನದಲ್ಲಿ ಎಂದಿಗೂ ಸಂಪತ್ತು ಮತ್ತು ಸಮೃದ್ಧಿಯ ಕೊರತೆಯನ್ನು ಹೊಂದುವುದಿಲ್ಲ ಎಂದು ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಕಾರಣವಿಲ್ಲದೆ ದಾನವನ್ನು ಶ್ರೇಷ್ಠವೆಂದು ಪರಿಗಣಿಸಲಾಗುವುದಿಲ್ಲ. ದಾನ ಮಾಡುವ ವ್ಯಕ್ತಿ ನಿಜವಾಗಿಯೂ ಶ್ರೀಮಂತ ಎಂದು ಚಾಣಕ್ಯ ಹೇಳಿದ್ದಾನೆ.
ಕಷ್ಟದ ಸಮಯದಲ್ಲಿ ನಿರ್ಗತಿಕರಿಗೆ ಸಹಾಯ ಮಾಡುವವರನ್ನು ದೇವರು ಸ್ವತಃ ರಕ್ಷಿಸುತ್ತಾನೆ. ಅಂತಹ ಜನರು ಎಂದಿಗೂ ಸಂತೋಷ ಮತ್ತು ಸಮೃದ್ಧಿಯ ಕೊರತೆಯನ್ನು ಎದುರಿಸುವುದಿಲ್ಲ. ಹಾಗಾಗಿ ನಿಮ್ಮಿಂದ ಸಾಧ್ಯವಾದಷ್ಟು ದಾನವನ್ನು ಮಾಡಿ ಎಂದು ಚಾಣಕ್ಯ ವಿವರಿಸುತ್ತಾರೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.