Vastu Dosha: ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಅಡುಗೆ ಮಾಡುವ ಸ್ಥಳ ಮಾತ್ರವಲ್ಲದೆ ಮನೆಯ ಶಕ್ತಿ ಮತ್ತು ಆರೋಗ್ಯದ ಕೇಂದ್ರ ಎಂದು ನಂಬಲಾಗಿದೆ. ಅಡುಗೆ ಮನೆಯ ಪ್ರತಿಯೊಂದು ವಸ್ತುವು ಕೂಡಾ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಅಡುಗೆ ಮನೆಯ ಒಂದು ನಿರ್ಣಾಯಕ ಅಂಶಗಳಲ್ಲಿ ಸಿಂಕ್ ಕೂಡ ಒಂದು. ಇದರ ಸರಿಯಾದ ದಿಕ್ಕು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ, ವಾಸ್ತು ಪ್ರಕಾರ, ಸಿಂಕ್ನ್ನು ಎಲ್ಲಿ ಇಡಬೇಕು ಎಂದು ನೋಡೋಣ ಬನ್ನಿ...
ಅಡುಗೆಮನೆಯ ಸಿಂಕ್ ನ ಶುಭ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ, ನೀವು ಮನೆ ಕಟ್ಟುವಾಗ ಮೊದಲು ಅಡುಗೆ ಮನೆಯ ಸಿಂಕ್ನ್ನು ಯಾವ ದಿಕ್ಕಿನಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳಿ. ಸಿಂಕ್ ಇರಿಸುವಾಗ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇರಿಸಿ. ಇದು ಸಮೃದ್ಧಿ ಮತ್ತು ಸಕರಾತ್ಮಕ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ, ಪಾತ್ರೆ ತೊಳೆಯುವಾಗ ವ್ಯಕ್ತಿಯು ಉತ್ತರಕ್ಕೆ ಎದುರಾಗಿ ನಿಂತು ತೊಳಿಯಬೇಕು. ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ ಜೊತೆಗೆ ಮನೆಗೆ ಸಮೃದ್ಧಿಯನ್ನು ತರುತ್ತದೆ.
ವಾಸ್ತು ಪ್ರಕಾರ, ಅಡುಗೆಮನೆಯ ಸಿಂಕ್ ಅನ್ನು ನೈಋತ್ಯ ದಿಕ್ಕಿನಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಸಿಂಕ್ ಇರಿಸುವುದರಿಂದ ಕೌಟುಂಬಿಕ ಉದ್ವಿಗ್ನತೆಗಳು ಹೆಚ್ಚಾಗುತ್ತದೆ. ಜೊತೆಗೆ ಸಂಸಾರದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಗ್ಯಾಸ್ ಸ್ಟೌವ್ ಬಳಿ ಸಿಂಕ್ ಇಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಬೆಂಕಿ ಮತ್ತು ನೀರು ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ ಎಂದು ಹೇಳಲಾಗುತ್ತದೆ. ಇದು ಗ್ಯಾಸ್ ಸ್ಟವ್ ಬೆಂಕಿಯನ್ನು ಹೊಂದಿದ್ದರೆ, ಸಿಂಕ್ ನೀರಿನ ಅಂಶವನ್ನು ಸಂಕೇತಿಸುತ್ತದೆ. ಸಿಂಕ್ ಹತ್ತಿರದಲ್ಲಿ ಸ್ಟವ್ ಇಡುವುದರಿಂದ ಇದು ಮನೆಗೆ ನಕರಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರಿಂದ ಈ ಎರಡೂ ವಸ್ತುಗಳನ್ನು ಒಟ್ಟಿಗೇ ಇಡುವ ಅಭ್ಯಾಸವನ್ನು ಬಿಡಿ.
ಸಿಂಕ್ ಅಡಿ ಕಸದ ರಾಶಿ ಇಡಬೇಡಿ!
ವಾಸ್ತು ಪ್ರಕಾರ, ಅಡುಗೆಮನೆಯ ಸಿಂಕ್ ಅಡಿಯಲ್ಲಿ ಕಸದ ಡಬ್ಬಿಯನ್ನು ಇಡುವುದು ಅನುಚಿತ ವರ್ತನೆ ಎಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ಇದು ಮನೆಗೆ ನಕರಾತ್ಮಕ ಪರಿಣಾಮವನ್ನು ಬೀರುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಕಸದ ಡಬ್ಬಿಯನ್ನು ಬೇರೆ ಪ್ರದೇಶದಲ್ಲಿ ಇಡುವುದರಿಂದ ಉತ್ತಮ ಎಂದು ತಿಳಿಸಲಾಗಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.