Slippers stolen (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಪಾದರಕ್ಷೆ ಕಳುವಾಗುವುದು ಬರಿ ನಷ್ಟವಲ್ಲ; ಇದರ ಹಿಂದೆ ಅಡಗಿದೆ ಒಂದು ಮರೆಯಾದ ಲಕ್ಕಿ ಚಾರ್ಮ್! Slippers stolen

Slippers stolen: ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅನೇಕರ ಚಪ್ಪಲಿಗಳು ಕಾಣೆಯಾಗುವುದು ಸಾಮಾನ್ಯ ಸಮಸ್ಯೆ. ಹಿಂದೂ ನಂಬಿಕೆಗಳ ಪ್ರಕಾರ, ದೇವಸ್ಥಾನದಲ್ಲಿ ಚಪ್ಪಲಿಗಳು ಕಳೆದು ಹೋದ ನಂತರ ಅವು ಅವರ ದಾರಿದ್ರ್ಯವನ್ನು ಕಳೆಯುತ್ತದೆ ಎಂದು ನಂಬುತ್ತಾರೆ. ಇನ್ನೂ ಕೆಲವರು ಚಪ್ಪಲಿಗಳ ಜೊತೆಗೆ ದುಷ್ಟಶಕ್ತಿ ಮತ್ತು ಪಾಪಗಳು ಕೂಡಾ ಅವರಿಂದ ದೂರ ಹೋಗುತ್ತವೆ ಎಂದು ನಂಬಿರುತ್ತಾರೆ. ಹಾಗಾದ್ರೆ, ನಮ್ಮ ಪಾದರಕ್ಷೆಗಳು ಕಳುವಾದರೆ ನಾವು ಚಿಂತಿಸಬೇಕೇ..ಅಥವಾ ಸಂತೋಷಪಡಬೇಕೇ? ಎಂಬುದನ್ನು ನಾವಿಂದು ತಿಳಿಸಲಿದ್ದೇವೆ.
ಹಿಂದೂ ಸಂಸ್ಕೃತಿಯಲ್ಲಿ, ದೇವಾಲಯವನ್ನು ಪ್ರವೇಶಿಸುವ ಮೊದಲು ನಮ್ಮ ಪಾದರಕ್ಷೆಗಳನ್ನು ತೆಗೆಯುವುದನ್ನು ಶುದ್ಧತೆ ಮತ್ತು ಭಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಾಗೇ ಕೊಳಕು ಮತ್ತು ಕೊಳೆಯನ್ನು ತೆಗೆದುಹಾಕಿ ದೇವರ ಸನ್ನಿಧಿಯನ್ನು ಪ್ರವೇಶಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ನಂಬಿಕೆಗಳು ಏನು ಹೇಳುತ್ತವೆ?

ಶನಿ ದೋಷ ಮುಕ್ತಿ

ಜ್ಯೋತಿಷ್ಯದ ಪ್ರಕಾರ, ಪಾದಗಳು ಮತ್ತು ಪಾದರಕ್ಷೆಗಳು ಶನಿ ಗ್ರಹಕ್ಕೆ ಸಂಬಂಧಿಸಿವೆ. ಆದರಿಂದ ದೇವಾಲಯದಲ್ಲಿ ಚಪ್ಪಲಿ ಕಳೆದುಕೊಂಡ ನಂತರ ನಿಮ್ಮ ಶನಿಯ ದೋಷಗಳ ತೀವ್ರತೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ದುಷ್ಟತನ ಮಾಯ

ಕೆಲವರು ಪಾದರಕ್ಷೆಗಳು ಕಳೆದು ಹೋದಾಗ, ಅವುಗಳ ಜೊತೆಗೆ ನಕರಾತ್ಮಕ ಶಕ್ತಿಗಳು ಕೂಡಾ ಮಾಯವಾಗುತ್ತವೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಶನಿವಾರದಂದು ಶೂಗಳನ್ನು ಕಳೆದುಕೊಳ್ಳುವುದನ್ನು ಒಳ್ಳೆಯ ಶಕುನ ಎಂದು ಪರಿಗಣಿಸಲಾಗುತ್ತದೆ.
ಆದಾಗ್ಯೂ, ಚಪ್ಪಲಿಗಳು ಕಳೆದು ಹೋದರೆ, ಹಳೆಯ ತೊಂದರೆಗಳು ಬದಲಾಗಿ, ಹೊಸ ತೊಂದರೆಗಳು ಜೀವನಕ್ಕೆ ಎದುರಾಗುತ್ತವೆ ಎಂದು ಕೆಲವರು ಅರ್ಥೈಸುತ್ತಾರೆ.
ನಂಬಿಕೆಗಳನ್ನು ಬದಿಗಿಟ್ಟು ನೋಡುವುದಾದರೆ, ದುಬಾರಿ ಪಾದರಕ್ಷೆಗಳನ್ನು ಕಳೆದುಕೊಳ್ಳುವುದು ಯಾರಿಗೂ ಇಷ್ಟವಾಗುವುದಿಲ್ಲ. ದೇವಾಲಯದಲ್ಲಿ ಪಾದರಕ್ಷೆಗಳನ್ನು ಕಳೆದುಕೊಳ್ಳುವುದನ್ನು ದೈವಿಕ ಸಂಕೇತ ಎಂಬುದನ್ನು ಯಾವುದೇ ಸಾಕ್ಷಿಗಳಿಲ್ಲ. ಆದರೆ, ಈ ನಂಬಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅವು ಶಾಂತಿಗೆ ಸಹಾಯ ಮಾಡುತ್ತದೆ.

ಇದನ್ನು ತಪ್ಪಿಸಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು!

ಎರಡೂ ಪಾದರಕ್ಷೆಗಳನ್ನು ಒಂದೇ ಸ್ಥಳದಲ್ಲಿ ಇಡುವ ಬದಲು ಸ್ವಲ್ಪ ದೂರದಲ್ಲಿ ಇಡುವುದರಿಂದ ಕಳ್ಳತನದ ಅಪಾಯ ಕಡಿಮೆಯಾಗುತ್ತದೆ
ದೇವಾಲಯಗಳಲ್ಲಿ ಲಭ್ಯವಿರುವ ಶೂ ಸ್ಟ್ಯಾಂಡ್‌ಗಳನ್ನು ಬಳಸುವುದರಿಂದ ಚಪ್ಪಲಿ ಕಳ್ಳತನ ಕಡಿಮೆಯಾಗಬಹುದು
ದೇವಸ್ಥಾನಗಳಿಗೆ ಹೋಗುವಾಗ, ದುಬಾರಿ ಬ್ರಾಂಡ್ ಪಾದರಕ್ಷೆಗಳನ್ನು ತಪ್ಪಿಸಿ ಮತ್ತು ಸಾಮಾನ್ಯ ಚಪ್ಪಲಿಗಳನ್ನು ಬಳಸಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.