Astrology ಸಾಂದರ್ಭಿಕ ಚಿತ್ರ
Astrology: ಜ್ಯೋತಿಷ್ಯದಲ್ಲಿ ಶುಕ್ರನ ಸಂಚಾರ ಎಷ್ಟು ಮುಖ್ಯವೋ ಅದರ ನಕ್ಷತ್ರ ಬದಲಾವಣೆಯೂ ಅಷ್ಟೇ ಮುಖ್ಯ. ಪ್ರಸ್ತುತ, ಶುಕ್ರನು ತನ್ನದೇ ಆದ ರಾಶಿ ವೃಷಭದಲ್ಲಿದ್ದಾನೆ. ಅದು ತನ್ನ ಪ್ರಭಾವವನ್ನು ಬಹಳ ಬಲವಾಗಿ ಮಾಡುತ್ತದೆ. ಆದಾಗ್ಯೂ, ಏಪ್ರಿಲ್ 27 ರಂದು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ರೋಹಿಣಿ ನಕ್ಷತ್ರವನ್ನು ಚಂದ್ರನು ಆಳಲ್ಪಡುವುದರಿಂದ ಪ್ರೀತಿ, ಆಕರ್ಷಣೆ ಮತ್ತು ಸೃಜನಶೀಲತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಶುಕ್ರನು ಸಂತೋಷ, ಸಮೃದ್ಧಿ ಮತ್ತು ಸಂಬಂಧಗಳನ್ನು ಪ್ರತಿನಿಧಿಸುವ ಗ್ರಹವಾಗಿರುವುದರಿಂದ, ಈ ನಕ್ಷತ್ರ ಬದಲಾವಣೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಶುಭವನ್ನು ತರಲಿದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ರಾಶಿಯವರಿಗೆ ಉತ್ತಮ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ...
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸಮಯ ತುಂಬಾ ಶುಭ. ಹೊಸ ಉದ್ಯೋಗಾವಕಾಶಗಳು ಸಿಗುತ್ತವೆ. ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವ್ಯವಹಾರದಲ್ಲಿ ಇರುವವರಿಗೆ ಲಾಭಗಳಿಸಲು ಈ ಸಮಯ ಒಳ್ಳೆಯದಾಗಲಿದೆ. ಕಚೇರಿಗಳಲ್ಲಿ ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆಯನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಶುಕ್ರ ಸಂಚಾರವು ಬಹಳ ಮುಖ್ಯವಾಗಿರುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭವಾಗುತ್ತದೆ. ಆರೋಗ್ಯ ಸಮಸ್ಯೆಗಳು ಸಹ ಸುಧಾರಿಸುತ್ತವೆ. ನಿಮ್ಮ ಗುರಿಗಳತ್ತ ಗಮನಹರಿಸಲು ಈ ಸಮಯವು ಒಳ್ಳೆಯದಾಗಲಿದೆ. ತಂದೆ-ತಾಯಿ ಆಶೀರ್ವಾದದೊಂದಿಗೆ ಎಲ್ಲಾ ಕೆಲಸಗಳು ಬರದಿಂದ ಸಾಗಲಿವೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಪ್ರಗತಿಗೆ ಹೊಸ ಅವಕಾಶಗಳು ಸಿಗುತ್ತವೆ. ಸರ್ಕಾರಿ ಅಥವಾ ಕಾನೂನು ವಿಷಯಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ನೋಡಬಹುದು. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಉಪಯಕ್ತವಾಗಲಿದೆ. ಪಿತ್ರಾರ್ಜಿತ ಆಸ್ತಿಗಳಿಂದ ಲಾಭವನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ಸಂತೋಷವಾಗಿ ಕಾಲ ಕಳೆಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.