Astrology ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ರಾಹು ನಕ್ಷತ್ರ ಸಂಚಾರ 2026: ಆಗಸ್ಟ್ 2 ರಿಂದ ಈ ರಾಶಿಯವರ ಒಲಿಯಲಿದೆ ಕುಬೇರನ ಕೃಪೆ, ಕೈತುಂಬಾ ಹಣ! Astrology

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ನಕ್ಷತ್ರ ಬದಲಾವಣೆಯು ಮಾನವನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪ್ರಸಕ್ತ ವರ್ಷ ಜುಲೈ 30 ರಂದು ಪವಿತ್ರ ಶ್ರಾವಣ ಮಾಸ ಪ್ರಾರಂಭವಾಗಲಿದ್ದು, ಇದರ ಬೆನ್ನಲ್ಲೇ ಕೇವಲ ಎರಡು ದಿನಗಳ ನಂತರ ಅಂದರೆ ಆಗಸ್ಟ್ 2 ರಂದು ನೆರಳು ಗ್ರಹ ಎಂದೇ ಕರೆಯಲ್ಪಡುವ ರಾಹು ತನ್ನ ಪಥವನ್ನು ಬದಲಾಯಿಸಲಿದ್ದಾನೆ.
ಆಗಸ್ಟ್ 2 ರಂದು ರಾಹು ಶತಭಿಷಾ ನಕ್ಷತ್ರದಿಂದ ಧನಿಷ್ಠಾ ನಕ್ಷತ್ರಕ್ಕೆ ಸಂಕ್ರಮಿಸಲಿದ್ದಾನೆ. ಧನಿಷ್ಠಾ ನಕ್ಷತ್ರದ ಅಧಿಪತಿ ಮಂಗಳನಾಗಿದ್ದು, ಜ್ಯೋತಿಷ್ಯದ ಪ್ರಕಾರ ಈ ನಕ್ಷತ್ರಕ್ಕೆ ರಾಹುವಿನ ಪ್ರವೇಶವು 'ಅಂಗಾರಕ ಯೋಗ'ವನ್ನು ಉಂಟುಮಾಡುತ್ತದೆ. ಈ ಸಂಚಾರವು ಪ್ರಮುಖವಾಗಿ ಮೂರು ರಾಶಿಚಕ್ರದ ಚಿಹ್ನೆಗಳಿಗೆ ಅತ್ಯಂತ ಶುಭ ಹಾಗೂ ಲಾಭದಾಯಕವಾಗಿರಲಿದೆ ಎಂದು ಜ್ಯೋತಿಷಿಗಳು ನಂಬಿದ್ದಾರೆ. ರಾಹು ಧನಿಷ್ಠಾ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಂತೆ ಈ ಕೆಳಗಿನ ಮೂರು ರಾಶಿಯವರು ಅದ್ಭುತ ಫಲಿತಾಂಶಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ಮೇಷ ರಾಶಿ

ರಾಹುವಿನ ಈ ಬದಲಾವಣೆಯು ಮೇಷ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡಬಹುದು. ಆದಾಗ್ಯೂ, ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿದ್ದು, ಆದಾಯ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಬಲ್ಲವು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಅರ್ಧದಲ್ಲೇ ನಿಂತಿದ್ದ ಕೆಲಸಗಳು ಪೂರ್ತಿಯಾಗಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ಕನ್ಯಾ ರಾಶಿ

ಧನಿಷ್ಠ ನಕ್ಷತ್ರಕ್ಕೆ ರಾಹುವಿನ ಪ್ರವೇಶವು ಕನ್ಯಾ ರಾಶಿಯವರಿಗೆ ಶುಭವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಆದಾಯ ಹೆಚ್ಚಾಗುವ ಸಾಧ್ಯತೆ ಇದ್ದು, ಬಹುಮೂಲಗಳಿಂದ ಆದಾಯವನ್ನು ಪಡೆಯಲಿದ್ದೀರಿ. ಈ ಸಮಯದಲ್ಲಿ ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಪತ್ನಿಯೊಂದಿಗೆ ದೂರ ಪ್ರಯಾಣವನ್ನು ಸಾಗಲಿದ್ದೀರಿ. ನಿಮ್ಮ ವಿರೋಧಿಗಳ ಮೇಲೆ ಪ್ರಭಾವ ಬೀರುವಲ್ಲಿ ನೀವು ಯಶಸ್ವಿಯಾಗಬಹುದು. ಸವಾಲಿನ ಸಂದರ್ಭಗಳ ಹೊರತಾಗಿಯೂ, ಪ್ರಗತಿ ಮತ್ತು ಆತ್ಮವಿಶ್ವಾಸಕ್ಕೆ ಅವಕಾಶಗಳನ್ನು ನೀವು ಕಂಡುಕೊಳ್ಳುವಿರಿ.

ಧನು ರಾಶಿ

ಈ ಸಂಚಾರವು ಧನು ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ತರುವ ನಿರೀಕ್ಷೆಯಿದೆ. ಧೈರ್ಯ ಮತ್ತು ಸ್ಥೈರ್ಯ ಹೆಚ್ಚಾಗುವ ಲಕ್ಷಣಗಳಿವೆ. ಉದ್ಯಮಿಗಳು ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗಿಗಳು ಕಚೇರಿಯಲ್ಲಿ ಮೇಲಾಧಿಕಾರಿಯಿಂದ ಪ್ರಶಂಸೆ ಪಡೆಯಲಿದ್ದಾರೆ. ನಿಮ್ಮ ಕಠಿಣ ಪರಿಶ್ರಮವು ಉತ್ತಮ ಪ್ರಯೋಜನಕಾರಿ ಫಲಿತಾಂಶವನ್ನು ನೀಡಲಿವೆ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು ಪರಿಹಾರವನ್ನು ಪಡೆಯಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.