- ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
- ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
- ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
- ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಜಗತ್ತಿನ ಎಲ್ಲಾ ಜೀವಿಗಳಿಗೂ ಆಹಾರ ತುಂಬಾನೇ ಮುಖ್ಯ. ಆದರೆ, ಅದು ಮಿತವಾಗಿದ್ದರೆ ಒಳ್ಳೆಯದು. ಆಹಾರ ವಿಚಾರದಲ್ಲಿ ಕಂಟ್ರೋಲ್ ಆಗಿರುವುದು ತುಂಬಾನೇ ಕಷ್ಟ. ನೆಚ್ಚಿನ ಆಹಾರ ಎದುರುಗಡೆ ಇದ್ದರೆ ಬಾಯಿ ಸುಮ್ಮನೇ ಇರುವುದಿಲ್ಲ. ಆದರೆ, ಕೆಲವರು ಆಹಾರ ವಿಚಾರದಲ್ಲಿ ತುಂಬಾ ಕಟ್ಟು ನಿಟ್ಟಾಗಿ ಇರುತ್ತಾರೆ. ತಮ್ಮ ದೇಹದ ಫಿಟ್ನೆಸ್ ಕಾಯ್ದುಕೊಳ್ಳಲು ಆಹಾರದ ಮೇಲೆ ನಿಯಂತ್ರಣ ಹೇರಿರುತ್ತಾರೆ. ಆದರೆ, ಕೆಲವರು ತಾವು ತಿನ್ನುವುದಕ್ಕೆಂದೇ ಹುಟ್ಟಿರುವಂತೆ ವರ್ತಿಸುತ್ತಾರೆ. ಇಂಥವರನ್ನು ಆಹಾರ ಪ್ರಿಯರು ಎನ್ನುತ್ತಾರೆ.
ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ವಿಪರೀತ ಆಹಾರಪ್ರಿಯರಾಗಿದ್ದು, ತಿನ್ನುವುದಕ್ಕಾಗಿಯೇ ಬದುಕುತ್ತಾರಂತೆ. ಬಗೆ ಬಗೆಯ ಆಹಾರವನ್ನು ತಿನ್ನಬೇಕೆಂಬ ಅತಿಯಾದ ಬಯಕೆಯನ್ನು ಹೊಂದಿರುತ್ತಾರಂತೆ. ಎಲ್ಲೇ ಹೋಗಲಿ ಯಾವುದಾದರೂ ಫುಡ್ ಐಟಂ ನೋಡಿದರೆ ಸಾಕು ಅದನ್ನು ತಿಂದು ಮುಗಿಸುವವರೆಗೂ ಈ ರಾಶಿಯವರಿಗೆ ಸಮಾಧಾನ ಆಗುವುದಿಲ್ಲವಂತೆ.
ಹಾಗಾದರೆ, ಯಾವ ರಾಶಿಯವರು ತಮ್ಮ ಜೀವನದಲ್ಲಿ ಆಹಾರಕ್ಕೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡುತ್ತಾರೆ ಅಂತ ನಾವೀಗ ತಿಳಿದುಕೊಳ್ಳೋಣ.
ವೃಷಭ ರಾಶಿ
ಪ್ರೀತಿ ಮತ್ತು ಐಷಾರಾಮಿ ಗ್ರಹವಾದ ಶುಕ್ರನ ಆಳ್ವಿಕೆಯಡಿಯಲ್ಲಿ, ವೃಷಭ ರಾಶಿಯವರು ಯಾವಾಗಲೂ ಲೌಕಿಕ ಸುಖಗಳನ್ನು ಅನುಭವಿಸಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರು ಸ್ವಾಭಾವಿಕವಾಗಿ ಖಾರದ ಆಹಾರವನ್ನು ಸವಿಯಲು ಹೆಚ್ಚು ಒಲವು ತೋರುತ್ತಾರೆ. ರುಚಿಯ ವಿಷಯಕ್ಕೆ ಬಂದಾಗ ಅವರು ಒಂದು ಚಿಟಿಕೆ ಉಪ್ಪನ್ನು ಸಹ ರಾಜಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ಹೆಚ್ಚಾಗಿ ಆಹಾರಪ್ರಿಯರಾಗಿದ್ದಾರೆ. ಹೀಗಾಗಿಯೇ ಈ ರಾಶಿಯವರು ಸ್ವಲ್ಪ ಕೊಬ್ಬಿದ ಮತ್ತು ಆಕರ್ಷಕ ನೋಟವನ್ನು ಹೊಂದಿರುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಗೆ ಶುಕ್ರ ಅಧಿಪತಿಯಾಗಿರುವುದರಿಂದ, ಅವರು ಲೌಕಿಕ ಸುಖಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಅವರು ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಆಹಾರವನ್ನು ಗೌರವಿಸುತ್ತಾರೆ ಮತ್ತು ಅವರ ಆಹಾರದಲ್ಲಿ ರುಚಿಯ ಕೊರತೆಯನ್ನು ಎಂದಿಗೂ ಸಹಿಸುವುದಿಲ್ಲ. ಈ ರಾಶಿಯವರು ಹೆಚ್ಚಾಗಿ ಹೊಟ್ಟೆಯಲ್ಲಿ ಸಣ್ಣ ಅಥವಾ ದೊಡ್ಡ ಮಚ್ಚೆಗಳನ್ನು ಹೊಂದಿರುತ್ತಾರೆ ಏಕೆಂದರೆ, ಅವರು ಆಹಾರವನ್ನು ತುಂಬಾ ಇಷ್ಟಪಡುತ್ತಾರೆ.
ಸಿಂಹ ರಾಶಿ
ಕರ್ಕಾಟಕ ರಾಶಿಯವರಿಗಿಂತ ಭಿನ್ನವಾಗಿ, ಸಿಂಹ ರಾಶಿಯವರು ಆಹಾರದ ವಿಷಯಕ್ಕೆ ಬಂದಾಗ ಪ್ರಮಾಣಕ್ಕಿಂತ ಗುಣಮಟ್ಟವನ್ನು ಬಯಸುತ್ತಾರೆ. ಅವರಿಗೆ ತಮ್ಮ ನೆಚ್ಚಿನ ಆಹಾರವನ್ನು ಉತ್ತಮ ರುಚಿಯಲ್ಲಿ ತಿನ್ನುವ ಬಯಕೆ ಇರುತ್ತದೆ. ಊಟ ಕಡಿಮೆ ಪ್ರಮಾಣದಲ್ಲಿದ್ದರೂ ರುಚಿ ಮುಖ್ಯವಾಗಿರುತ್ತದೆ. ಮೇಜಿನ ಮೇಲಿರುವ ಎಲ್ಲ ಆಹಾರವನ್ನೂ ಆನಂದಿಸುತ್ತಾರೆ. ಈ ರಾಶಿಯವರಿಗೆ ಖಂಡಿತವಾಗಿಯೂ ಆಹಾರದ ಮೇಲೆ ಬಲವಾದ ಒಲವು ಇರುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.