Chanakya Niti: ಆಚಾರ್ಯ ಚಾಣುಕ್ಯರನ್ನು ಇತಿಹಾಸದಲ್ಲಿ ಅತ್ಯಂತ ಬುದ್ಧಿವಂತ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ನೀತಿ ನಿಯಮಗಳನ್ನು ರೂಪಿಸಿದ್ದಾರೆ. ಇವರ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಹೊಂದಲು ಜ್ಞಾನ ಅಥವಾ ಕಠಿಣ ಪರಿಶ್ರಮ ಮಾತ್ರ ಸಾಕಾಗುವುದಿಲ್ಲ, ಬದಲಿಗೆ ಸರಿಯಾದ ನಿರ್ದೇಶನ ಮತ್ತು ಬುದ್ಧಿವಂತಿಕೆಯ ಅಗತ್ಯ ಇದೆ. ಹಾಗೆಯೇ ಜೀವನದ ವೇಗವು ಜನರ ಸಹವಾಸ, ಪರಿಸರ ಮತ್ತು ಆಲೋಚನೆಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಕೆಲವು ಸ್ಥಳಗಳು ಮತ್ತು ಜನರ ಸಂಪರ್ಕದಿಂದ ದೂರವಿರಲು ಅವರು ಎಚ್ಚರಿಸಿದ್ದಾರೆ.
ಚಾಣಕ್ಯನ ಪ್ರಕಾರ, ಯಾವುದೇ ವ್ಯಕ್ತಿಯು ಗೌರವ ಇಲ್ಲದ ಸ್ಥಳಗಳಿಗೆ ಭೇಟಿ ನೀಡಬಾರದು. ಗೌರವವಿಲ್ಲದ ವಾತಾವರಣದಲ್ಲಿ ಪ್ರತಿಭೆ ಬೆಳೆಯುವುದಿಲ್ಲ. ಆ ಸ್ಥಳದಲ್ಲಿ ಇರುವುದರಿಂದ ಮಾನಸಿಕ ಆಯಾಸ ಹೆಚ್ಚಾಗುತ್ತದೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ ಎಂದಿದ್ದಾರೆ.
ಯಾವ ವ್ಯಕ್ತಿ ಅತಿಯಾಗಿ ಹೊಗಳುತ್ತಾನೋ ಆತನಿಂದ ಆದಷ್ಟು ದೂರ ಇರುವಂತೆ ಚಾಣಕ್ಯ ಎಚ್ಚರಿಕೆ ನೀಡಿದ್ದಾನೆ. ಏಕೆಂದರೆ, ಈ ರೀತಿಯ ಜನರು ಎಂದಿಗೂ ಪ್ರಾಮಾಣಿಕ ಸ್ನೇಹ ಅಥವಾ ನಿಜವಾದ ಸಂಬಂಧಗಳನ್ನು ಸೃಷ್ಟಿಸುವುದಿಲ್ಲ. ಇಂತಹ ಹೇಳಿಕೆಗಳು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.
ಚಾಣಕ್ಯನ ಪ್ರಕಾರ ಯಾವ ವ್ಯಕ್ತಿ ವಾಸ್ತವವನ್ನು ನಂಬುವುದಿಲ್ಲವೋ ಅವನಿಂದ ದೂರ ಇರಬೇಕು. ಏಕೆಂದರೆ, ವಾಸ್ತವವನ್ನು ನಿರಾಕರಿಸುವ ವ್ಯಕ್ತಿಯು ಸ್ವತಃ ತನ್ನ ಜೀವನಕ್ಕೆ ಹಾನಿ ಮಾಡಿಕೊಳ್ಳುತ್ತಾನೆ. ಅವರ ಪ್ರಕಾರ, ತರ್ಕ ಮತ್ತು ವಾಸ್ತವ ಯಶಸ್ವಿ ಜೀವನದ ಅಡಿಪಾಯ ಎಂದು ತಿಳಿಸಲಾಗಿದೆ.
ಯಾವುದೇ ವ್ಯಕ್ತಿಯು ಏಕಾಗ್ರತೆ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಅಸಾಧ್ಯವಾದುದನ್ನು ಜಯಿಸಬಹುದು ಎಂದು ತಿಳಿಸಿದ್ದಾನೆ. ಒಮ್ಮೆ ಗುರಿಯನ್ನು ಹೊಂದಿದ ನಂತರ ಯಾವುದೇ ಅಡ್ಡಿಗಳು ಆಗಬಾರದು ಎಂದು ಕಲಿಸಿದ್ದಾನೆ.
ಇದನ್ನೂ ಓದಿ: ವೆನೆಜುವೆಲಾದ ವಿಪಕ್ಷ ನಾಯಕಿಗೆ ಒಲಿದ ನೊಬೆಲ್ ಶಾಂತಿ ಪ್ರಶಸ್ತಿ: ಸ್ವಯಂ ಘೋಷಿತ ಶಾಂತಿದೂತನಿಗೆ ನಿರಾಸೆ! Nobel Peace Prize
ಯಾವುದೇ ವ್ಯಕ್ತಿಯು ಸ್ವಂತ ಬುದ್ಧಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಹಾಗೇ ತಪ್ಪು ನಿರ್ಧಾರಗಳು ನಿಮ್ಮ ಮೇಲಲ್ಲದೇ ಸುತತಮುತ್ತಲಿನ ಜನರ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.