ಜ್ಯೋತಿಷ್ಯ

ನೆಲವರೆಸುವಾಗ ಈ ನಿಯಮಗಳನ್ನು ಪಾಲಿಸಿ... ಇದು ನಿಮ್ಮ ಮನೆಗೆ ಸಕರಾತ್ಮಕ ಶಕ್ತಿಯನ್ನು ತರುತ್ತದೆ Vastu Shastra

Vastu Shastra: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಶುಚಿತ್ವ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನೀವು ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ, ಮನೆಯ ಸಕರಾತ್ಮಕ ಶಕ್ತಿ ಉಳಿಯುತ್ತದೆ. ಇಲ್ಲದಿದ್ದರೆ ನಕರಾತ್ಮಕ ಶಕ್ತಿಯು ನಿಮ್ಮ ಮನೆಯಲ್ಲಿ ತಾಂಡವವಾಡಲು ಪ್ರಾರಂಭಿಸಿ, ಮನೆಯ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಸ್ವಚ್ಛತೆಯನ್ನು ಬಯಸಿ ನೆಲವನ್ನು ಒರೆಸುತ್ತೇವೆ.

ವಾಸ್ತು ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ನೆಲವನ್ನು ಒರೆಸಿದರೆ, ಧನಾತ್ಮಕ ಶಕ್ತಿಯು ಮನೆಯಲ್ಲಿ ಉಳಿಯುತ್ತದೆ ಮತ್ತು ಅದೇ ಸಮಯದಲ್ಲಿ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಮೇಲುಗೈ ಸಾಧಿಸುತ್ತದೆ ಹಾಗೆಯೇ ಮನೆಯ ಸದಸ್ಯರು ತೃಪ್ತರಾಗುತ್ತಾರೆ ಎಂದು ತಿಳಿದಿದೆ. ಹಾಗಾಗಿ ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ನೆಲವನ್ನು ಹೇಗೆ ಒರೆಸುವುದು ಎಂಬುದನ್ನು ತಿಳಿಯಿರಿ..

ನೆಲ ಒರೆಸಲು ಸಮಯ ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯನ್ನು ಸ್ವಚ್ಛಗೊಳಿಸಲು ಉತ್ತಮ ಸಮಯವೆಂದರೆ ಬ್ರಹ್ಮ ಮುಹೂರ್ತ ಎಂದು ತಿಳಿಸಲಾಗುತ್ತದೆ. ಬ್ರಹ್ಮ ಮುಹೂರ್ತವು ಸೂರ್ಯೋದಯಕ್ಕಿಂತ ಮುಂಚಿನ ಸಮಯ, ಅಂದರೆ ಬೆಳಿಗ್ಗೆ 4 ರಿಂದ 5:30 ರವರೆಗೆ ಇರುತ್ತದೆ. ಆದರಿಂದ ಮನೆಯವರು ಈ ಸಮಯದಲ್ಲಿ ಕಸ ಹೊಡೆದು ನೆಲ ಒರೆಸುವುದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ತಿಳಿಯಲಾಗುತ್ತದೆ. ಇದು ಎಲ್ಲಾ ಸದಸ್ಯರ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ.

ನೆಲ ಒರೆಸುವುದು ಹೀಗೆ...

ನೆಲವನ್ನು ಒರೆಸುವಾಗ, ಯಾವಾಗಲು ಮನೆಯ ಮುಖ್ಯದ್ವಾರದಿಂದ ಪ್ರಾರಂಭಿಸಿ ನಂತರ ಮನೆಯ ಇತರ ಕೊಠಡಿಗಳನ್ನು ಒರೆಸಬೇಕು. ಹೀಗೆ ಮಾಡುವುದರಿಂದ ನೈಸರ್ಗಿಕ ಶಕ್ತಿಯು ಹರಿವು ಮುಂದುವರಿಯುವಂತೆ ಮಾಡುತ್ತದೆ. ಆದರಿಂದ ನೀವು ನೆಲವರೆಸುವಾಗ ಮುಖ್ಯ ದ್ವಾರದಿಂದ ಪ್ರಾರಂಭಿಸಿ ಅಲ್ಲಿಯೇ ಕೊನೆಗೊಳಿಸಬೇಕು.

ಈ ಸಮಯದಲ್ಲಿ ನೆಲವನ್ನು ಒರೆಸಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಮಧ್ಯಾಹ್ನ ಸಮಯದಲ್ಲಿ ಎಂದಿಗೂ ನೆಲವನ್ನು ಒರಿಸಬಾರದು. ಈ ರೀತಿ ಮಾಡಿದದ್ಲ್ಲಿ ನಿಮ್ಮ ಮನೆಗೆ ನಕರಾತ್ಮಕ ಶಕ್ತಿಯು ಒಳಬರಲಾರಂಭಿಸುತ್ತದೆ. ನೆಲವನ್ನು ಒರೆಸಲು ಉತ್ತಮ ಸಮಯ ಬ್ರಹ್ಮ ಮುಹೂರ್ತ. ಮಧ್ಯಾಹ್ನ, ಸೂರ್ಯಾಸ್ತದ ಸಮಯದಲ್ಲಿ ಅಥವಾ ಸಂಜೆ ಸಹ ನೆಲವನ್ನು ಒರಿಸಿದ್ದಲ್ಲಿ ನಿಮ್ಮ ಮನೆಗೆ ಯಾವುದೇ ಧನಾತ್ಮಕ ಪರಿಣಾಮ ಬೀರುವುದಿಲ್ಲ. ಈ ಅಜಾಗರೂಕತೆಯಿಂದ ಮನೆಯೊಳಗೆ ಕೆಟ್ಟ ಶಕ್ತಿ ಬಂದು ಕುಟುಂಬ ಸದಸ್ಯರಿಗೆ ಹಾನಿಯಾಗಬಹುದು.

ನೆಲ ಒರೆಸುವಾಗ ನೆನಪಿನಲ್ಲಿಡಬೇಕಾದ ವಿಷಯಗಳೇನು?

ಅನೇಕ ಜನರು ನೆಲ ಒರೆಸಲು ಬಳಸಿದ ಹಳೆಯ ಬಟ್ಟೆಗಳನ್ನು ಬಳಸುತ್ತಾರೆ. ಇದು ಅವನ ಶಕ್ತಿಯು ಬಟ್ಟೆಗಳಿಗೆ ಹೋಗುತ್ತದೆ. ಈ ಬಟ್ಟೆಗಳಿಂದ ನೀವು ನೆಲ ವರೆಸುವುದರಿಂದ ಅದರಲ್ಲಿರುವ ಶಕ್ತಿಯು ನಕರಾತ್ಮಕವಾಗಿರುತ್ತದೆ. ಅಲ್ಲದೇ ಆ ವ್ಯಕ್ತಿಗೂ ತೊಂದರೆಯಾಗಬಹುದು. ನೀವು ನೆಲವರೆಸುವಾಗ ನೀರಿಗೆ ಉಪ್ಪು ಹಾಗೂ ನಿಂಬೆ ಹುಳಿಯನ್ನು ಹಾಕಿ ನೆಲವರೆಸಿ ಇದು ನಿಮ್ಮ ಮನೆಯ ಮೇಲೆ ಬೀಳುವ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.