ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ತುಳಸಿ ಗಿಡಕ್ಕೆ ಅಪ್ಪಿ-ತಪ್ಪಿಯೂ ಈ 3 ದಿನ ನೀರನ್ನು ಹಾಕಲೇಬೇಡಿ! Basil plant

Basil plant: ಹಿಂದೂ ಧರ್ಮದಲ್ಲಿ, ತುಳಸಿಯನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಒಂದು ಸಸ್ಯವಲ್ಲ, ಬದಲಾಗಿ ಲಕ್ಷ್ಮೀ ದೇವಿಯ ರೂಪ ಎಂದು ಕರೆಯಲಾಗುತ್ತದೆ. ಯಾರ ಮನೆಯಲ್ಲಿ ತುಳಸಿಯನ್ನು ಪ್ರತಿನಿತ್ಯ ಪೂಜಿಸಲಾಗುತ್ತದೆಯೋ ಅವರ ಮನೆಯಲ್ಲಿ ಸಂಪತ್ತು, ಸಮೃದ್ಧಿಯ ಕೊರತೆ ಎಂದಿಗೂ ಇರುವುದಿಲ್ಲ ಎಂದು ನಂಬಲಾಗುತ್ತದೆ.
ಆದರೆ, ತುಳಸಿ ಸಸ್ಯಕ್ಕೆ ನೀರು ಅರ್ಪಿಸುವುದು ಯಾವಾಗಲೂ ಶುಭವಲ್ಲ. ತುಳಸಿಗೆ ನೀರು ಹಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಕೆಲವು ಸಂದರ್ಭಗಳಿವೆ. ಹಾಗೆ ಮಾಡುವುದರಿಂದ ಮನೆಯಲ್ಲಿ ಪ್ರಗತಿ, ಆರ್ಥಿಕ ಲಾಭಗಳು ಹಾಗೂ ಸಕರಾತ್ಮಕ ಶಕ್ತಿಯ ಮೇಲೆ ನಕರಾತ್ಮಕ ಶಕ್ತಿ ಪರಿಣಾಮ ಬೀರುತ್ತದೆ. ಹಾಗಿದ್ದರೆ, ತುಳಸಿಗೆ ಯಾವ ಸಂದರ್ಭದಲ್ಲಿ ನೀರನ್ನು ಅರ್ಪಿಸಬಾರದು ಎಂದು ನೋಡೋಣ ಬನ್ನಿ...

ಗ್ರಹಣ ಸಮಯದಲ್ಲಿ ತುಳಸಿಗೆ ನೀರು ಅರ್ಪಿಸಬೇಡಿ

ಗ್ರಹಣದ ಸಮಯದಲ್ಲಿ ತುಳಸಿಗೆ ನೀರನ್ನು ಎಂದಿಗೂ ಅರ್ಪಿಸಬೇಡಿ. ಈ ಸಮಯವನ್ನು ಆಧ್ಯಾತ್ಮಿಕವಾಗಿ ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಮನೆಗೆ ಯಾವುದೇ ರೀತಿಯಲ್ಲೂ ಸಕರಾತ್ಮಕವಾಗಿ ಪರಿಣಾಮ ಬೀರುವುದಿಲ್ಲ. ಗ್ರಹಣದ ಸಮಯದಲ್ಲಿ ಎಲೆಗಳನ್ನು ಕೀಳುವುದು ಅಥವಾ ಪೂಜಿಸುವುದನ್ನು ಕಟುನಿಟ್ಟಾಗಿ ನಿಷೇಧಿಸಬೇಕು.
ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚು ಸಕ್ರಿಯವಾಗಿರುತ್ತದೆ. ಈ ಸಮಯದಲ್ಲಿ ತುಳಸಿಯ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ತಡೆಯಿರಿ.

ಭಾನುವಾರ

ಭಾನುವಾರವನ್ನು ವಿಷ್ಣು ದೇವ ಹಾಗೂ ತುಳಸಿಯ ವಿಶೇಷ ದಿನ ಎಂದು ಕರೆಯಲಾಗುತ್ತದೆ. ಈ ವಾರದಂದು ತುಳಸಿಯು ನೀರಿಲ್ಲದೇ ಉಪವಾಸ ಆಚರಿಸುತ್ತಾಳೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗುತ್ತದೆ. ಹಾಗಾಗಿ ನೀವೇನಾದರೂ, ಈ ದಿನದಂದು ತುಳಸಿಗೆ ನೀರು ಅರ್ಪಿಸಿದರೆ, ಉಪವಾಸವನ್ನು ಮುರಿಯುವಂತಾಗುತ್ತದೆ. ಹಾಗಾಗಿ ಇದನ್ನು ಅಶುಭ ಎಂದು ಕರೆಯಲಾಗುತ್ತದೆ.

ಏಕಾದಶಿ ದಿನ

ಏಕಾದಶಿ ವಿಷ್ಣು ಮತ್ತು ತುಳಸಿ ಇಬ್ಬರಿಗೂ ಪವಿತ್ರವಾದ ದಿನ. ಪ್ರತಿ ಏಕಾದಶಿಯಂದು ತುಳಸಿಯು ನೀರಿಲ್ಲದೆ ಉಪವಾಸ ಮಾಡುತ್ತಾಳೆ. ಈ ದಿನದಂದು ತುಳಸಿಗೆ ನೀರನ್ನು ಅರ್ಪಿಸುವುದರಿಂದ ಉಪವಾಸ ಕೊನೆಗೊಳ್ಳುತ್ತದೆ. ಈ ಆಚರಣೆಯನ್ನು ಆಚರಿಸದಿದ್ದರೆ, ಮನೆಯ ಶಾಂತಿ, ನೆಮ್ಮದಿ, ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಏಕಾದಶಿಯ ದಿನದಂದು ತುಳಸಿಯ ಮುಂದೆ ದೀಪವನ್ನು ಬೆಳಗಿರಿ. ಇದು ನಿಮಗೆ ಒಳ್ಳೆಯದನ್ನು ಮಾಡುತ್ತದೆ.

ತುಳಸಿ ಪೂಜೆಯ ಕೆಲವು ನಿಯಮಗಳು

ತುಳಸಿಯು ಸೂರ್ಯ ದೇವರಿಗೆ ಸಂಬಂಧಿಸಿದ್ದು, ಆದರಿಂದ ರಾತ್ರಿ ವೇಳೆಯಲ್ಲಿ ನೀರನ್ನು ಹಾಕುವುದನ್ನು ತಪ್ಪಿಸಿ. ಈ ಸಸ್ಯವು ರಾತ್ರಿಯಿಡೀ ವಿಶ್ರಾಂತಿಯನ್ನು ಪಡೆಯುತ್ತದೆ. ಚಾಕು, ಕತ್ತರಿ ಅಥವಾ ಯಾವುದೇ ಹರಿತವಾದ ಉಪಕರಣದಿಂದ ತುಳಸಿಯನ್ನು ಕೀಳಬೇಡಿ. ಸೋಮವಾರ, ಬುಧವಾರ ಮತ್ತು ಗುರುವಾರ ತುಳಸಿಯನ್ನು ಪೂಜಿಸಲು ಮತ್ತು ನೀರು ಅರ್ಪಿಸಲು ಬಹಳ ಶುಭ ದಿನವೆಂದು ಪರಿಗಣಿಸಲಾಗಿದೆ.
ತುಳಸಿ ಸಸ್ಯದ ಬಳಿ ಮಣ್ಣು, ಕಸ ಅಥವಾ ಪಾದರಕ್ಷೆಗಳನ್ನು ಎಂದಿಗೂ ಇಡಬೇಡಿ. ಇದು ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸುವುದರಿಂದ ಇದನ್ನು ಶುಭವೆಂದು ಕರೆಯಲಾಗುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.