ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಹೊಸ ವರ್ಷದಂದು ಈ ತಪ್ಪುಗಳನ್ನು ಅಪ್ಪಿ-ತಪ್ಪಿಯೂ ಮಾಡಬೇಡಿ! ಇದು ನಿಮ್ಮನ್ನು ವರ್ಷ ಪೂರ್ತಿ ಕೊರಗುವಂತೆ ಮಾಡುತ್ತದೆ...New year

New year: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಈ ವರ್ಷವನ್ನು ಅನೇಕರು ಉತ್ಸಾಹದಿಂದ ಬರಮಾಡಿಕೊಳ್ಳಲು ತುದಿಕಾಲಿನಲ್ಲಿ ನಿಂತಿದ್ದಾರೆ. ಹಿಂದೂ ನಂಬಿಕೆಗಳ ಪ್ರಕಾರ, ಜ್ಯೋತಿಷ್ಯವು ಹೊಸ ವರ್ಷದ ಮೊದಲ ದಿನದಂದು ಅನೇಕ ಶುಭ ವಿಷಯಗಳನ್ನು ಸೂಚಿಸುತ್ತದೆ. ಕೆಲವೊಂದು ಕೆಲಸಗಳನ್ನು ಮಾಡುವುದನ್ನು ತಪ್ಪಿಸುವುದರಿಂದ ಹೊಸ ವರ್ಷದಲ್ಲಿ ನೀವು ಅದೃಷ್ಟವನ್ನು ತರಬಹುದು ಎಂದು ಸೂಚಿಸಲಾಗುತ್ತದೆ. 
ಹೊಸ ವರ್ಷವು ಪ್ರತಿಯೊಬ್ಬರ ಜೀವನಕ್ಕೂ ಹೊಸ ಭರವಸೆಗಳು, ಹೊಸ ನಿರ್ಣಯಗಳು ಮತ್ತು ಹೊಸ ಆರಂಭಗಳನ್ನು ತರುತ್ತದೆ ಎಂದು ನಂಬಲಾಗಿದೆ. ಇದರ ಪ್ರಕಾರ, ಜನವರಿ 1 ಕೇವಲ ಕ್ಯಾಲೆಂಡರ್ ದಿನಾಂಕವಲ್ಲ, ಬದಲಿಗೆ ಇಡೀ ವರ್ಷಕ್ಕೆ ದಿಕ್ಕನ್ನು ನಿಗದಿಪಡಿಸುವ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ಪೂರ್ತಿ ವರ್ಷಗಳ ತನಕವೂ ಒಳ್ಳೆಯ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.
ವೇದಗಳು ಮತ್ತು ಜನಪ್ರಿಯ ನಂಬಿಕೆಗಳು ಹೊಸ ವರ್ಷದ ಮೊದಲ ದಿನದಂದು ಕೆಲವು ವಿಷಯಗಳನ್ನು ನಿಷೇಧಿಸುತ್ತವೆ. ಈ ವಿಷಯಗಳನ್ನು ನಿರ್ಲಕ್ಷಿಸುವುದರಿಂದ ವರ್ಷವಿಡೀ  ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳು ಅಥವಾ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ನೀವೇನಾದರೂ 2026 ರ ವರ್ಷ ಪೂರ್ತಿ ಖುಷಿಯಾಗಿರಬೇಕೆಂದರೆ, ಈ ವಿಷಯಗಳನ್ನು ತಪ್ಪಿಸಿ.

ಮನೆಯಲ್ಲಿ ಜಗಳ ಮಾಡುವುದನ್ನು ನಿಷೇಧಿಸಿ

ಹೊಸ ವರ್ಷದ ಮೊದಲ ದಿನದಂದು ಮನೆಯಲ್ಲಿ ವಾತಾವರಣವು ಹರ್ಷಚಿತ್ತದಿಂದ ಇರಬೇಕು. ಈ ದಿನಗಳಲ್ಲಿ ಜನರು ಅನಗತ್ಯ ವಾದಗಳು, ಚರ್ಚೆಗಳು ಅಥವಾ ಕೂಗಾಟಗಳನ್ನು ತಪ್ಪಿಸಬೇಕು. ಜ್ಯೋತಿಷ್ಯದ ಪ್ರಕಾರ, ಹೊಸ ವರ್ಷದ ಆರಂಭದಲ್ಲಿ ಈ ರೀತಿಯ ಸಮಸ್ಯೆಗಳೇನಾದರೂ ಆದಲ್ಲಿ ವರ್ಷವಿಡೀ ಮಾನಸಿಕ ಕಿರಿಕಿರಿ, ಒತ್ತಡ ಮುಂದುವರೆಯುತ್ತವೆ.

ಸಾಲದ ವಹಿವಾಟುಗಳು

ನಿಮ್ಮ ಆರ್ಥಿಕತೆಯನ್ನು ಸಮೃದ್ಧವಾಗಿ ಇಟ್ಟುಕೊಳ್ಳಲು ವರ್ಷದ ಮೊದಲ ದಿನವೇ ಸಾಲವನ್ನು ಪಡೆಯುವುದನ್ನು ಬಿಡಿ, ಹಾಗೆಯೇ ಸಾಲವನ್ನು ನೀಡಬೇಡಿ. ಮೊದಲ ದಿನ ಹಣವನ್ನು ನೀಡುವುದು ಹಾಗೂ ತೆಗೆದುಕೊಳ್ಳುವುದರಿಂದ ವರ್ಷ ಪೂರ್ತಿ ಸಾಲದ ಭಾದೆಯನ್ನು ಹೊಂದಬೇಕಾಗುತ್ತದೆ. ಇದು ಹಣದ ಹರಿವನ್ನು ನಿಲ್ಲಿಸುತ್ತದೆ.

ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ

ಹೊಸ ವರ್ಷವು ಹೊಸ ಶಕ್ತಿಯನ್ನು ಸಂಕೇತಿಸುತ್ತದೆ. ಹಾಗಾಗಿ ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ಕಡಿಮೆ ಮಾಡಿ. ಕಪ್ಪು ಬಣ್ಣವು ಹೆಚ್ಚಾಗಿ ನಕಾರಾತ್ಮಕತೆಯನ್ನು ಹೊಂದುತ್ತದೆ. ಬದಲಾಗಿ, ಹಳದಿ, ಬಿಳಿ, ನೀಲಿಯಂತಹ ಪ್ರಕಾಶಮಾನವಾದ ಬಣ್ಣವನ್ನು ಧರಿಸುವುದರಿಂದ ಇದು ಸಕರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಮನೆಯನ್ನು ಕತ್ತಲೆಯಲ್ಲಿ ಇಡಬೇಡಿ

ಬೆಳಕು ಅದೃಷ್ಟ ಮತ್ತು ಲಕ್ಷ್ಮಿಯನ್ನು ಸಂಕೇತಿಸುತ್ತದೆ. ಹೊಸ ವರ್ಷದ ದಿನದಂದು ಆದಷ್ಟು ಮನೆಯಲ್ಲಿ ಬೆಳಕನ್ನು ಒದಗಿಸಿ. ಮುಖ್ಯದ್ವಾರದಲ್ಲಿ, ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸಿ ಇದು ಕತ್ತಲೆ, ಬಡತನ ಮತ್ತು ಸೋಮಾರಿತನವನ್ನು ಓಡಿಸಲು ಸಹಾಯ ಮಾಡುತ್ತದೆ.

ಅಳುವುದು ಅಥವಾ ದುಃಖಿಸುವುದು

ಹೊಸ ವರ್ಷದ ದಿನದಂದು ಆದಷ್ಟು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಯಾವುದಕ್ಕೂ ಚಿಂತಿಸಬೇಡಿ ಅಥವಾ ಕಣ್ಣಿರು ಹಾಕಬೇಡಿ. ವರ್ಷದ ಮೊದಲ ದಿನದಂದು ಆದಷ್ಟು ಮನಸ್ಥಿತಿಯನ್ನು ಸುಧಾರಿಸಿಕೊಳ್ಳಿ. ಸಂತೋಷದಿಂದ ಹೊಸ ವರ್ಷವನ್ನು ಆಗಮಿಸಿರಿ. ಇದರಿಂದ ಮನೆಯು ಸಂತೋಷದಿಂದ ಕಳೆಯಲು ಸಾಧ್ಯವಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.