Vastu tips (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಚಪಾತಿ ಮಾಡುವಾಗ ಎಣಿಸ್ತೀರಾ? ತಕ್ಷಣ ನಿಲ್ಲಿಸಿ! ಈ ತಪ್ಪು ನಿಮ್ಮ ಮನೆಯ ಸುಖ-ಶಾಂತಿಗೆ ಕುತ್ತು ತರಬಹುದು! Vastu tips

ಭಾನುಪ್ರಿಯ ಡಿ.ಕೆ
Vastu tips: ಪ್ರತಿಯೊಂದು ಮನೆಯಲ್ಲಿಯೂ ಅಡುಗೆ ಮಾಡುವಾಗ ಎಷ್ಟು ಜನರರಿದ್ದೇವೆ, ಎಷ್ಟು ಪ್ರಮಾಣದಲ್ಲಿ ಆಹಾರ ಬೇಕು ಎಂಬುದರ ಮೇಲೆ ಲೆಕ್ಕ ಮಾಡಿ ಆಹಾರವನ್ನು ತಯಾರಿಸಲಾಗುತ್ತದೆ. ಅದೇ ರೀತಿ ಚಪಾತಿ, ರೊಟ್ಟಿಯಂತಹ ಘನ ಪದಾರ್ಥವನ್ನು ಮಾಡುವಾಗ ಲೆಕ್ಕಹಾಕಿ ಮಾಡಲಾಗುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಚಪಾತಿಗಳನ್ನು ಎಣಿಸುವುದು ಸೂಕ್ತವಲ್ಲ. ಹಾಗೆ ಮಾಡುವುದರಿಂದ ಮನೆಯ ಸಕರಾತ್ಮಕ ಶಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. 
ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಚಪಾತಿ ಎಣಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಇದು ಯಾವ ರೀತಿಯಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ ಎಂದು ನೋಡೋಣ ಬನ್ನಿ...
ವಾಸ್ತು ಶಾಸ್ತ್ರವು ಆಹಾರವನ್ನು ಎಣಿಸುವುದು ಕೊರತೆಯನ್ನು ಸೂಚಿಸುತ್ತದೆ. ಇದು ಒಬ್ಬ ವ್ಯಕ್ತಿಗೆ ಕೊರತೆಯ ಮೇಲೆ ಭಯವಿದೆ ಎಂಬುದನ್ನು ವಿವರಿಸುತ್ತದೆ. ಚಪಾತಿಗಳನ್ನು ಎಣಿಸುವುದುರಿಂದ ಆಹಾರದ ದೇವತೆ ಅನ್ನಪೂರ್ಣೆಯನ್ನು ಅಗೌರವಿಸಿದಂತೆ ಸೂಚಿಸಲಾಗುತ್ತದೆ. ಹಾಗಾಗಿ ಆಹಾರವನ್ನು ಎಣಿಸಿದ ನಂತರ ಚಪಾತಿಗಳನ್ನು ಬಡಿಸುವುದು ಅಶುಭವೆಂದು ಹೇಳಲಾಗುತ್ತದೆ.

ಚಪಾತಿಗಳನ್ನು ಎಣಿಸುವುದರಿಂದ ಏನು ಹಾನಿ?

ವಾಸ್ತು ಪ್ರಕಾರ, ಚಪಾತಿಯನ್ನು ಎಣಿಸುವುದರಿಂದ ಇದು ಆದಾಯ ಕಡಿಮೆಯಾಗುತ್ತದೆ ಎಂದು ಸೂಚಿಸಲಾಗುತ್ತದೆ. ಇದು ಮನೆಯಲ್ಲಿರುವ ಆರ್ಥಿಕ ಸ್ಥಿತಿಗೆ ತೊಂದರೆಯನ್ನು ನೀಡುತ್ತದೆ. ಇದು ಆಹಾರದ ಮೇಲೆ ಆಸೆ ಕಡಿಮೆಯಾಗುವುದು ಹಾಗೂ ಧಾನ್ಯಗಳ ಸಮೃದ್ಧಿಯ ನಷ್ಟಕ್ಕೆ ಕಾರಣವಾಗುತ್ತದೆ. ಈ ಅಭ್ಯಾಸದಿಂದ ಮನೆಯಲ್ಲಿ ಜಗಳ, ಗಲಾಟೆ, ವಾದ-ವಿವಾದ ಸಂಭವಿಸಬಹುದು.

ಚಪಾತಿ ತಯಾರಿಸುವಾಗ ಹಾಗೂ ಬಡಿಸುವಾಗ ಈ ಅಂಶವನ್ನು ನೆನಪಿಟ್ಟುಕೊಳ್ಳಿ!

ಮೊದಲು ಯಾವುದೇ ವ್ಯಕ್ತಿಯು ಅಡುಗೆ ಮಾಡುವಾಗ ಶಾಂತ ಮನಸ್ಸನ್ನು ಇಟ್ಟುಕೊಳ್ಳಬೇಕು. ಹಾಗೆಯೇ ಒತ್ತಡವನ್ನು ತಪ್ಪಿಸಿಕೊಳ್ಳಬೇಕು. ನಿಮಗೆ ಎಷ್ಟು ಪ್ರಮಾಣದಲ್ಲಿ ಆಹಾರ ಬೇಕೋ ಅಷ್ಟನ್ನು ಮಾತ್ರ ಮಾಡಿಕೊಳ್ಳಿ. ಉಳಿದ ಚಪಾತಿಗಳನ್ನು ಬಿಸಾಕುವ ಬದಲಿಗೆ ಯಾವುದಾದರೂ ಪ್ರಾಣಿಗಳಿಗೆ ನೀಡಿ. ಅಡುಗೆಯನ್ನು ಬಹಳ ಗೌರವದಿಂದ ಸೇವಿಸಿ.
ಈ ಎಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ, ನಿಮ್ಮ ಮನೆಯಲ್ಲಾಗುವ ವಾಸ್ತು ದೋಷವನ್ನು ತಪ್ಪಿಸಬಹುದು. ಇದು ನಿಮ್ಮ ಜೀವನದಲ್ಲಾಗುವ ಎಲ್ಲಾ ಸಮಸ್ಯೆಯನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
ನಿಮ್ಮ ಮನೆಯಲ್ಲಿ ಮಾಡಿದ ಮೊದಲ ಚಪಾತಿಯನ್ನು ಹಸುವಿಗೆ ಅರ್ಪಿಸುವುದರಿಂದ ಶುಭವೆಂದು ಪರಿಗಣಿಸಲಾಗುತ್ತದೆ. ಇದರ ನಂತರ ಮಾಡುವ ಚಪಾತಿಯನ್ನು ನೀವು ಸೇವಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ ಸಮೃದ್ಧವಾಗಿ ಉಳಿಯುತ್ತದೆ. ಹಾಗೆಯೇ ಕುಟುಂಬದ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.