Vastu Tips (ಸಾಂದರ್ಭಿಕ ಚಿತ್ರ)
Vastu Tips: ಪ್ರತಿಯೊಂದು ಮನೆ ಮತ್ತು ಕಚೇರಿಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಶುಚಿಗೊಳಿಸುವುದು ಸಾಮಾನ್ಯ ಕೆಲಸವಾಗಿದೆ. ಇದು ಧೂಳು ಮತ್ತು ಕೊಳೆಯ ನಿವಾರಣೆ, ಮನೆಯ ವಾತಾವರಣವನ್ನು ಶುಚಿಗೊಳಿಸುವುದರ ಜೊತೆಗೆ ಇದು ಸಕರಾತ್ಮಕತೆಯನ್ನು ಬೀರುತ್ತದೆ. ಆದಾಗ್ಯೂ, ಅನೇಕ ಮನೆಗಳಲ್ಲಿ ಹಳೆಯ ಅಥವಾ ಬಿಟ್ಟಂತಹ ಬಟ್ಟೆಗಳನ್ನು ಒರೆಸಲು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ, ಈ ರೀತಿ ಮಾಡುವುದನ್ನು ವಾಸ್ತು ಏನು ಹೇಳುತ್ತದೆ ಎಂದು ನೀವೇನಾದರೂ ಯೋಚಿಸಿದ್ದೀರಾ? ಹಾಗಿದ್ದರೆ, ನಾವಿಂದು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ...
ವಾಸ್ತು ಶಾಸ್ತ್ರದ ಪ್ರಕಾರ, ಈ ಅಭ್ಯಾಸವು ಮನೆಯಲ್ಲಿ ನಕರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ನೀವು ಮನೆಯನ್ನು ಹೇಗೆ ಸ್ವಚ್ಚಗೊಳಿಸುತ್ತೀರೋ ಹಾಗೆಯೇ, ಶುಚಿಗೊಳಿಸುವ ವಸ್ತುಗಳ ಬಗ್ಗೆ ಗಮನ ವಹಿಸುವುದು ಕೂಡಾ ಅಷ್ಟೇ ಮುಖ್ಯ. ಹಳೆಯ ಬಟ್ಟೆಗಳಿಂದ ನೆಲ ಒರೆಸುವುದು ಏಕೆ ಅಶುಭವೆಂದು ಜ್ಯೋತಿಷಿಗಳು ವಿವರಿಸುತ್ತಾರೆ.
ಹಳೆಯ ಬಟ್ಟೆಗಳು ಮತ್ತು ಶಕ್ತಿಯ ಪ್ರಭಾವ
ಜ್ಯೋತಿಷ್ಯದ ಪ್ರಕಾರ, ಬಟ್ಟೆಗಳು ವ್ಯಕ್ತಿಯ ಭಾವನೆಗಳು ಮತ್ತು ಆತನ ಶಕ್ತಿಯನ್ನು ಹೀರಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ದೀರ್ಘಕಾಲದವರೆಗೆ ಧರಿಸುವ ಬಟ್ಟೆಗಳು ಹಿಂದಿನ ಅನುಭವಗಳು, ಅನಾರೋಗ್ಯ ಅಥವಾ ಮಾನಸಿಕ ಒತ್ತಡದ ಕುರುಹುಗಳನ್ನು ಹೊಂದಿರಬಹುದು.
ಆ ರೀತಿಯಂತಹ ಬಟ್ಟೆಗಳಿಂದ ನೀವೇನಾದರೂ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿದರೆ, ಅವು ನಕರಾತ್ಮಕ ಶಕ್ತಿಯನ್ನು ನಿಮ್ಮ ಮನೆ ಮತ್ತು ಕಚೇರಿ ತುಂಬಾ ಹರಡುತ್ತದೆ. ಜೊತೆಗೆ ಅಹಿತಕರ ವಾತಾವರಣವನ್ನು ಸೃಷ್ಟಿಸುತ್ತದೆ.
ಹಳೆಯ ಬಟ್ಟೆಗಳಿಂದ ನೆಲ ಒರೆಸಿದರೆ
ನೆಲ ಒರೆಸುವುದರಿಂದ ಮನೆಯಲ್ಲಿನ ನಕರಾತ್ಮಕ ಶಕ್ತಿಯನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಹಳೆಯ ಬಟ್ಟೆಗಳನ್ನು ಈ ಉದ್ದೇಶಕ್ಕಾಗಿ ಬಳಸಿದರೆ, ನಕರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಬದಲಿಗೆ ಮತ್ತೆ ಮನೆಯೊಳಗೆ ಹರಡುತ್ತದೆ. ಇದು ಮನೆಯಲ್ಲಿ ವಾಸಿಸುವ ಜನರ ಆಲೋಚನೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಎಂದು ಜ್ಯೋತಿಷ್ಯ ತಿಳಿಸುತ್ತದೆ.
ಅದೃಷ್ಟ ಮತ್ತು ಸಂಪತ್ತು
ವಾಸ್ತು ಪ್ರಕಾರ, ಶುಚಿತ್ವವು ಸಂಪತ್ತು ಮತ್ತು ಅದೃಷ್ಟಕ್ಕೆ ನೇರವಾಗಿ ಸಂಬಂಧಿಸಿರುತ್ತದೆ. ಮನೆಯನ್ನು ಸ್ವಚ್ಛಗೊಳಿಸದೇ ಇದ್ದರೆ, ಮನೆಯಲ್ಲಿ ನಕರಾತ್ಮಕ ಪರಿಣಾಮಗಳು ಬೀರಬಹುದು. ಜೊತೆಗೆ ನೀವೇನಾದರೂ ಹಳೆಯ ಮತ್ತು ಹರಿದ ಬಟ್ಟೆಗಳಿಂದ ಮನೆ ಸ್ವಚ್ಛಗೊಳಿಸಿದ್ದರೆ, ಉದ್ಯೋಗ ನಷ್ಟ, ವ್ಯವಹಾರ ನಷ್ಟ ಮತ್ತು ವೆಚ್ಚಗಳು ಹೆಚ್ಚಾಗಿ ಅಶುಭ ಉಂಟಾಗಬಹುದು.
ಸಂಬಂಧಗಳು ಮತ್ತು ಮಾನಸಿಕ ಶಾಂತಿಯ ಮೇಲೆ ಪರಿಣಾಮ
ಮನೆಯ ವಾತಾವರಣವು ಜನರ ಮಾನಸಿಕ ಸ್ಥಿತಿ ಮೇಲೆ ರೂಪುಗೊಳ್ಳುತ್ತದೆ. ಆದಾಗ್ಯೂ, ನಕಾರಾತ್ಮಕತೆ ಹೆಚ್ಚಾದರೆ, ಸಂಬಂಧಗಳಲ್ಲಿ ಬಿರುಕು, ಮಕ್ಕಳ ಶಿಕ್ಷಣದಲ್ಲಿ ಅಡೆತಡೆಗಳು ಮತ್ತು ಕ್ಷುಲ್ಲಕ ವಿಷಯಗಳ ಕಾರಣಕ್ಕೆ ವಾದ-ವಿವಾದ ಉಂಟಾಗುವುದು ಇವೆಲ್ಲಾ ಹಳೆಯ ಬಟ್ಟೆಗಳನ್ನು ಮಾಪ್ ಆಗಿ ಬಳಸುವುದರಿಂದ ಸಮಸ್ಯೆ ಬರುತ್ತವೆ ಎಂದು ಹೇಳಲಾಗುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.