Crying In Temple ಸಾಂದರ್ಭಿಕ ಚಿತ್ರ
- ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ
- ಪ್ರತಿಯೊಬ್ಬ ವ್ಯಕ್ತಿಯೂ ದೇವರ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿರುತ್ತಾನೆ
- ಯಾವುದೇ ಕಷ್ಟ ಎದುರು ಬಂದರೆ, ಮೊದಲು ನಾವು ಹೋಗುವುದೇ ದೇವರ ಬಳಿ
- ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಚಂಚಲವಾಗಿರುವ ಮನಸ್ಸು ಶಾಂತವಾಗುತ್ತದೆ
Crying In Temple: ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ದೇವರ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿರುತ್ತಾನೆ. ಆದಾಗ್ಯೂ, ಯಾವುದೇ ಕಷ್ಟ ಎದುರು ಬಂದರೆ, ಮೊದಲು ನಾವು ಹೋಗುವುದೇ ದೇವರ ಬಳಿ. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಚಂಚಲವಾಗಿರುವ ಮನಸ್ಸು ಶಾಂತವಾಗುತ್ತದೆ. ಈ ಸಮಯದಲ್ಲಿ ಕಣ್ಣುಗಳಲ್ಲಿ ತಿಳಿಯದೆಯೇ ಕಣ್ಣೀರು ತುಂಬುತ್ತವೆ. ಇದು ಏಕೆ ಸಂಭವಿಸುತ್ತದೆ ಎಂದು ನೋಡೋಣ ಬನ್ನಿ...
1. ಭಾವನಾತ್ಮಕ ಬಿಡುಗಡೆ
ನಮ್ಮ ದೈನಂದಿನ ಜೀವನದಲ್ಲಿ, ನಾವು ಅನೇಕ ದುಃಖಗಳು, ಒತ್ತಡಗಳನ್ನು ಅನುಭವಿಸಿ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತೇವೆ. ಆದಾಗ್ಯೂ, ನಾವು ದೇವಾಲಯಕ್ಕೆ ಭೇಟಿ ನೀಡಿದಾಗ ಮನಸ್ಸಿನ ರಕ್ಷಣಾತ್ಮಕ ಗೋಡೆಗಳು ಚದುರಿ ಒಳಗೆ ಅವಿತಿಟ್ಟುಕೊಂಡಿರುವ ಭಾವನೆಗಳು ಕಣ್ಣೀರಾಗಿ ಹೊರಹೊಮ್ಮುತ್ತದೆ. ಇದನ್ನು ಭಾವನಾತ್ಮಕ ನಿರ್ವಿಶೀಕರಣ ಎಂದು ಹೇಳಲಾಗುತ್ತದೆ.
2. ಆತ್ಮದ ಜಾಗೃತಿ ಮತ್ತು ಶರಣಾಗತಿ
ನಾವು ಭಕ್ತಿಯ ಅತ್ಯುನ್ನತ ಸ್ಥಿತಿಯನ್ನು ತಲುಪಿದಾಗ, ಮನಸ್ಸು ಸಂಪೂರ್ಣವಾಗಿ ದೇವರಿಗೆ ಶರಣಾಗುತ್ತದೆ. ಈ ಕ್ಷಣದಲ್ಲಿ ಅಹಂಕಾರವು ದಾರಿ ತಪ್ಪಿ ಆತ್ಮವು ಸಾರ್ವತ್ರಿಕ ಶಕ್ತಿಯೊಂದಿಗೆ ಸಂಪರ್ಕಗೊಳ್ಳುತ್ತದೆ. ಈ ತೀವ್ರವಾದ ಅನುಭವವು ಪದಗಳಿಗೆ ಮೀರಿರುವುದರಿಂದ, ದೇಹವು ಕಣ್ಣೀರಿನಿಂದ ಪ್ರತಿಕ್ರಿಯಿಸುತ್ತದೆ.
3. ಹೆಚ್ಚಿನ ಧನಾತ್ಮಕ ಶಕ್ತಿ
ದೇವಾಲಯಗಳು ಶಕ್ತಿ ಕೇಂದ್ರಗಳಾಗಿರುತ್ತವೆ. ಅಲ್ಲಿ ಮಂತ್ರಗಳ ಪಠಣ, ಗಂಟೆಯ ಶಬ್ಧ ಮತ್ತು ಧೂಪದ್ರವ್ಯದ ಸುಡುವಿಕೆಯು ವಿಶೇಷ ಕಂಪನವನ್ನು ಸೃಷ್ಟಿಸುತ್ತದೆ. ಆದಾಗ್ಯೂ, ಈ ಶಕ್ತಿಯು ನಮ್ಮ ದೇಹದಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೊರಗೆಹಾಕುವುದರಿಂದ ಮನಸ್ಸಿನಲ್ಲಿನ ಬದಲಾವಣೆಯು ಕಣ್ಣೀರಿನ ರೂಪದಲ್ಲಿ ಹೊರಬರುತ್ತದೆ.
4. ಜ್ಯೋತಿಷ್ಯ ಪ್ರಭಾವ
ಜ್ಯೋತಿಷ್ಯದ ಪ್ರಕಾರ, ಆಧ್ಯಾತ್ಮಿಕತೆಯ ಗ್ರಹವಾದ ಕೇತು, ವ್ಯಕ್ತಿಯ ಜಾತಕದಲ್ಲಿ ಒಂಬತ್ತನೇ ಅಥವಾ ಹನ್ನೆರಡನೇ ಮನೆಯಲ್ಲಿ ಬಲವಾಗಿದ್ದರೆ, ಅವರು ಆಧ್ಯಾತ್ಮಿಕ ವಿಚಾರದಲ್ಲಿ ಭಾವನಾತ್ಮಕವಾಗುವುದು ಹೆಚ್ಚು. ಆದರಿಂದ ದೇವಾಲಯಗಳಲ್ಲಿ ಅವರು ಕರ್ಮ ಬಿಡುಗಡೆಯನ್ನು ಅನುಭವಿಸುವುದರಿಂದ ಅವರ ಕಣ್ಣುಗಳು ಕಣ್ಣೀರಿನಲ್ಲಿ ತುಂಬಿರುತ್ತವೆ ಎಂದು ಹೇಳಲಾಗುತ್ತದೆ.
ವೈಜ್ಞಾನಿಕವಾಗಿ ಹೇಳುವುದಾದರೆ, ನಮ್ಮ ಮೆದುಳಿನಲ್ಲಿರುವ ಭಾವನೆಗಳನ್ನು ನಿಯಂತ್ರಿಸುವುದನ್ನು ಲಿಂಬಿಕ್ ವ್ಯವಸ್ಥೆ ಎಂದು ಹೇಳಲಾಗುತ್ತದೆ. ನಾವು ತೀವ್ರ ಶಾಂತಿ ಅಥವಾ ಭಕ್ತಿಯನ್ನು ಅನುಭವಿಸಿದಾಗ ಕಣ್ಣೀರಿನ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಇದು ಬಹಳ ಹತ್ತಿರವಾದ ಪ್ರೀತಿ ಪಾತ್ರರನ್ನು ನೋಡಿದ ತಕ್ಷಣ ಕಣ್ಣಿನಲ್ಲಿ ನೀರನ್ನು ಹರಿಸುತ್ತದೆ.
ದೇವಸ್ಥಾನದಲ್ಲಿ ಅಳುವುದನ್ನು ಎಂದಿಗೂ ಕೆಟ್ಟ ವಿಷಯವೆಂದು ನೋಡಬಾರದು. ಬದಲಾಗಿ, ನೀವು ಅತ್ತಾಗ ನಿಮ್ಮ ಮನಸ್ಸು ಶುದ್ಧವಾಗುತ್ತದೆ. ಜೊತೆಗೆ ನೀವು ಆಧ್ಯಾತ್ಮಿಕವಾಗಿ ಬೆಳೆಯುತ್ತಿದ್ದೀರಿ ಎಂಬುದರ ಸಂಕೇತವನ್ನು ತೋರಿಸುತ್ತದೆ. ಆ ಕ್ಷಣಗಳಲ್ಲಿ, ನಿಮ್ಮ ಕಣ್ಣೀರನ್ನು ತಡೆಹಿಡಿಯಬೇಡಿ ಮತ್ತು ಅವುಗಳನ್ನು ಹರಿಯಲು ಬಿಡಿ ಏಕೆಂದರೆ, ಅದು ನಿಮ್ಮನ್ನು ಶಾಂತಿ ಪಡೆಯುವಂತೆ ಮಾಡುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.