Office Desk Vastu: ಇಂದಿನ ವೃತ್ತಿಪರ ಜೀವನದಲ್ಲಿ, ಆಫೀಸ್ ಎಂಬುದು ಕೇವಲ ಒಂದು ಸ್ಥಳವಲ್ಲ. ಇದು ಶಕ್ತಿ, ಏಕಾಗ್ರತೆ ಮತ್ತು ವೃತ್ತಿ ಪ್ರಗತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಕಚೇರಿಗೆ ಹೋಗುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದಿನದ ಹೆಚ್ಚಿನ ಸಮಯವನ್ನು ಅಲ್ಲಿ ಕಳೆಯುತ್ತಾನೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಆಫೀಸ್ ಡೆಸ್ಕ್ ಮೇಲೆ ಇಡುವ ಕೆಲವೊಂದು ವಸ್ತುಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಜನರು ಹೆಚ್ಚಾಗಿ ತಮ್ಮ ಟೇಬಲ್ ಮೇಲೆ ಕ್ಯಾಲೆಂಡರ್ ಇಟ್ಟುಕೊಂಡಿರುತ್ತಾರೆ. ಇದು ಸರಿಯೇ ತಪ್ಪು ಎಂದು ನೋಡೋಣ ಬನ್ನಿ..
ಆಫೀಸ್ ಡೆಸ್ಕ್ ಮೇಲೆ ಕ್ಯಾಲೆಂಡರ್ ಇಡುವುದು ಸರಿಯೇ?
ಕ್ಯಾಲೆಂಡರ್ ಅನ್ನು ಸಮಯ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವರು ಆಫೀಸ್ನಲ್ಲಿ ತಮ್ಮ ಡೆಸ್ಕ್ಗಳ ಮೇಲೆ ಇಟ್ಟುಕೊಳ್ಳುತ್ತಾರೆ. ಇದು ಜ್ಯೋತಿಷ್ಯದ ಪ್ರಕಾರ, ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ನೀವು ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಅದು ಶುಭವೆಂದು ಕರೆಯಲಾಗುತ್ತದೆ. ಆದಾಗ್ಯೂ, ನೀವೇನಾದರೂ ತಪ್ಪಾದ ದಿಕ್ಕಿನಲ್ಲಿ ಇರಿಸುವುದರಿಂದ ಇದನ್ನು ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.
ಕ್ಯಾಲೆಂಡರ್ ಯಾವ ದಿಕ್ಕಿನಲ್ಲಿಟ್ಟರೆ ಶುಭ?
ಕಚೇರಿಯಲ್ಲಿ ಟೇಬಲ್ ಮೇಲೆ ಕ್ಯಾಲೆಂಡರ್ ಇಡಬೇಕು ಎಂದು ಬಯಸಿದರೆ, ನೀವು ಉತ್ತರ ದಿಕ್ಕು ಮತ್ತು ಪೂರ್ವ ದಿಕ್ಕಿನಲ್ಲಿ ಇಡುವುದನ್ನು ಉತ್ತಮ ಎಂದು ಕರೆಯಲಾಗುತ್ತದೆ. ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನೀವು ಕ್ಯಾಲೆಂಡರ್ ಉತ್ತರ ದಿಕ್ಕಿನಲ್ಲಿ ಇರಿಸಿದರೆ, ಅದು ಆರ್ಥಿಕ ಸಮೃದ್ಧಿ, ಹೊಸ ಅವಕಾಶಗಳು, ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಪೂರ್ವ ದಿಕ್ಕಿನ್ನು ಸೂರ್ಯ, ಶಕ್ತಿ ಮತ್ತು ಜ್ಞಾನದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುವುದರಿಂದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.
ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಇಡಬೇಡಿ
ನೀವೇನಾದರೂ, ನಿಮ್ಮ ಟೇಬಲ್ ಮೇಲೆ ದಕ್ಷಿಣ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುತ್ತಿದ್ದರೆ, ಇಂದೇ ದಿಕ್ಕು ಬದಲಿಸಿ. ಈ ದಿಕ್ಕಿನಲ್ಲಿ ಇಡುವುದರಿಂದ ಇದು ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ. ಇದು ನೀವು ಕೆಲಸವನ್ನು ಮಾಡುವಾಗ ಒತ್ತಡ, ಅಡೆತಡೆಯನ್ನು ಉಂಟು ಮಾಡುತ್ತದೆ.
ನಿಮ್ಮ ಕಚೇರಿಯ ಮೇಜಿನ ಮೇಲೆ ಕ್ಯಾಲೆಂಡರ್ ಹೇಗಿರಬೇಕು?
ನೀವು ನಿಮ್ಮ ಕಚೇರಿಯ ಮೇಜಿನ ಮೇಲೆ ಕ್ಯಾಲೆಂಡರ್ ಯಾವಾಗಲೂ ಹಸಿರು ಅಥವಾ ಬಿಳಿ ಬಣ್ಣದ್ದಾಗಿರಬೇಕು. ಇದು ನಿಮ್ಮ ಕೆಲಸದಲ್ಲಿ ಧೈರ್ಯವನ್ನು ಹೆಚ್ಚಿಸುವುದರ ಜೊತೆಗೆ ಸ್ಥಿರತೆಯನ್ನು ಕಾಪಾಡುತ್ತದೆ. ಇದು ಮನಸ್ಥಿತಿಯನ್ನು ನಕರಾತ್ಮಕಗೊಳಿಸುತ್ತದೆ.
ಕ್ಯಾಲೆಂಡರ್ಗಳಲ್ಲಿ ಯುದ್ಧ, ಉದ್ವೇಗ ಅಥವಾ ಹಿಂಸೆಯ ತೋರಿಸುವ ಚಿತ್ರಗಳು ಇರುವುದನ್ನು ನಿಮ್ಮ ಸ್ಥಳದಲ್ಲಿ ಇರಿಸಿಕೊಳ್ಳಬೇಡಿ. ಇದು ನಿಮಗೆ ಒತ್ತಡವನ್ನು ಹೆಚ್ಚಿಸುತ್ತದೆ, ಜೊತೆಗೆ ಕಚೇರಿಯ ವಾತಾವರಣದಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಕ್ಯಾಲೆಂಡರ್ ಹಾಕುವ ಮುನ್ನ ಸ್ವಲ್ಪ ಎಚ್ಚರದಿಂದಿರುವುದು ಬಹಳ ಉಪಯುಕ್ತ.
ಯಾವುದೇ ಚಿತ್ರಗಳು ಇರಬಾರದು, ಏಕೆಂದರೆ ಅವು ಕೆಲಸದ ಸ್ಥಳದಲ್ಲಿ ನಕಾರಾತ್ಮಕತೆ ಮತ್ತು ಒತ್ತಡವನ್ನು ಹೆಚ್ಚಿಸಬಹುದು. ಸರಿಯಾದ ದಿಕ್ಕಿನಲ್ಲಿ ಇರಿಸಲಾದ ಸ್ವಚ್ಛ, ಅಚ್ಚುಕಟ್ಟಾದ ಕ್ಯಾಲೆಂಡರ್ ನಿಮ್ಮ ವೃತ್ತಿಜೀವನದಲ್ಲಿ ಸ್ಥಿರವಾದ ಪ್ರಗತಿಯನ್ನು ತರುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.