ಜ್ಯೋತಿಷ್ಯ

ನಿತ್ಯಭವಿಷ್ಯ: ವಿದೇಶಿ ವ್ಯಾಪಾರಸ್ಥರಿಗೆ ಅಭಿವೃದ್ಧಿ, ರಾಜಕೀಯ ನಾಯಕರಿಗೆ ಶುಭದಾಯಕ ದಿನ

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಸಮಯ. ಹೊಸ ಉದ್ಯಮದ ಯೋಚನೆ ಬರುವುದು. ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಶುಭಸಂಖ್ಯೆ:5

ವೃಷಭ: ರಾಜಕಾರಣಿಗಳು ಕೆಲಸದಲ್ಲಿ ಎಚ್ಚರದಿಂದಿರಿ. ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ. ವಜ್ರದ ವ್ಯಾಪಾರಿಗಳಿಗೆ ಶುಭ. ಶುಭಸಂಖ್ಯೆ:6

ಮಿಥುನ:ಕಲೆ, ಚಿತ್ರಕಲೆಯ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಿ. ನೀರಿನಿಂದ ಆರೋಗ್ಯದಲ್ಲಿ ವ್ಯತ್ಯಾಸ. ವಿದೇಶಿ ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ: 6

ಕಟಕ:ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಕಮಿಷನ್ ವ್ಯವಹಾರ ಅಬಾಧಿತವಾಗಿರಲಿದೆ. ತಾಂತ್ರಿಕ ಪರಿಣಿತರಿಗೆ ಶುಭ. ಶುಭಸಂಖ್ಯೆ:3

ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ. ವಾಹನ ಚಲಾಯಿಸುವಲ್ಲಿ ಎಚ್ಚರ ತೀರ ಅಗತ್ಯ. ಅಪರಿಚಿತರ ಬಗ್ಗೆ ಎಚ್ಚರವಿರಲಿ. ಶುಭಸಂಖ್ಯೆ: 8

ಕನ್ಯಾ: ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭವಾಗುವುದು. ವಿದೇಶಿ ವ್ಯಾಪಾರಸ್ಥರಿಗೆ ಅಭಿವೃದ್ಧಿ. ರಾಜಕೀಯ ನಾಯಕರಿಗೆ ಶುಭದಾಯಕ ದಿನ. ಶುಭಸಂಖ್ಯೆ:1

ತುಲಾ: ಕೃಷಿಯಲ್ಲಿ ತೊಡಗಿಕೊಂಡವರಿಗೆ ಉತ್ತಮ ದಿನ. ಆಭರಣ ವ್ಯಾಪಾರಸ್ಥರಿಗೆ ಲಾಭ. ನೌಕರರಿಗೆ ಕಾರ್ಯದೊತ್ತಡ ಇರಲಿದೆ. ಶುಭಸಂಖ್ಯೆ:5

ವೃಶ್ಷಿಕ: ಸ್ಥಿರಾಸ್ತಿಯನ್ನು ಹೊಂದುವ ಅವಕಾಶವಿದೆ. ಮಹಿಳೆಯರಿಗೆ ಒಳ್ಳೆಯ ಶುಭದಾಯಕ ದಿನ. ಟೆಕ್ನಾಲಜಿ ಪರಿಣಿತರಿಗೆ ಲಾಭ. ಶುಭಸಂಖ್ಯೆ: 7

ಧನಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ ಬರಲಿದೆ. ಹಿರಿಯರ ಮಾರ್ಗದರ್ಶನವಿರುತ್ತದೆ. ತಂದೆಯಿಂದ ಧನಸಹಾಯ ಒದಗಿ ಬರಲಿದೆ. ಶುಭಸಂಖ್ಯೆ:4

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ. ಧಾನ್ಯ ಮಾರಾಟಸ್ಥರಿಗೆ ಆದಾಯ ಬರಲಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಶುಭಸಂಖ್ಯೆ:1

ಕುಂಭ: ದೂರ ಪ್ರಯಾಣ ಮಾಡಬೇಕಾಗುವುದು.ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗುವ ಸಾಧ್ಯತೆ. ದೈನಂದಿನ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ:6

ಮೀನ: ಉಪನ್ಯಾಸಕರಿಗೆ ವೃತ್ತಿಯಲ್ಲಿ ಗೌರವ. ಈ ರಾಶಿಯ ಮಹಿಳೆಯರು ಕೋಪ ನಿಯಂತ್ರಿಸಿಕೊಳ್ಳಿ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ. ಶುಭಸಂಖ್ಯೆ:9