ಜ್ಯೋತಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನುಕೂಲ

ಮೇಷ: ಕ್ರಯ ವಿಕ್ರಯಗಳಲ್ಲಿ ಲಾಭ ಬರುವುದು. ಪಾರಂಪರಿಕ ವ್ಯವಹಾರದಲ್ಲಿ ನಷ್ಟವಾಗುವ ಸಂಭವ. ಬಂಧುಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 5

ವೃಷಭ: ಕೃಷಿಯಲ್ಲಿ ನಷ್ಟವಾಗುವ ಅಪಾಯವಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ. ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿಯಾಗುವ ಯೋಗವಿದೆ. ಶುಭಸಂಖ್ಯೆ: 3

ಮಿಥುನ: ದಾಯಾದಿಗಳಲ್ಲಿ ಕಲಹ, ಉಂಟಾಗುವುದು. ಉದ್ಯೋಗಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ. ವಸ್ತ್ರ ವಿನ್ಯಾಸಕರಿಗೆ ಹೆಚ್ಚು ಬೇಡಿಕೆ. ಶುಭಸಂಖ್ಯೆ: 6

ಕಟಕ: ಕಾರ್ಯಸಾಧನೆಗಾಗಿ ತಿರುಗಾಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನುಕೂಲ. ಮನೆಯಲ್ಲಿ ಧಾರ್ವಿುಕ ಸಮಾರಂಭ. ಶುಭಸಂಖ್ಯೆ: 4

ಸಿಂಹ: ವಿದೇಶ ಪ್ರವಾಸದ ಯೋಜನೆ ಸಿದ್ಧ. ಉದ್ಯೋಗ ಬದಲಿಸುವ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ಎಚ್ಚರವಹಿಸುವುದು ಮುಖ್ಯ. ಶುಭಸಂಖ್ಯೆ: 3

ಕನ್ಯಾ: ಅವಿವಾಹಿತರಿಗೆ ವಿವಾಹಯೋಗ. ದಿನಸಿ ವ್ಯಾಪಾರಸ್ಥರಿಗೆ ಹೆಚ್ಚು ಲಾಭ ಬರಲಿದೆ. ಮೂಳೆಗಳ ಸಮಸ್ಯೆ ಬಾಧಿಸಬಹುದು. ಶುಭಸಂಖ್ಯೆ: 2

ತುಲಾ: ವೈದ್ಯರಿಗೆ ಶುಭದಾಯಕ ದಿನ. ಮಾನಸಿಕ ಒತ್ತಡ ಅನುಭವಿಸುವಿರಿ. ಪಾಲುದಾರಿಕೆ ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ ಸಿಗಲಿದೆ. ಶುಭಸಂಖ್ಯೆ: 8

ವೃಶ್ಷಿಕ: ದಾಂಪತ್ಯದಲ್ಲಿ ಕಲಹ ಸಾಧ್ಯತೆ, ಸಮಾಧಾನಚಿತ್ತ ರಾಗಿರಿ. ಪತಿಗೆ ಅನಾರೋಗ್ಯ ಕಾಡಬಹುದು. ಉದ್ಯಮಿಗಳಿಗೆ ಯಶಸ್ಸು. ಶುಭಸಂಖ್ಯೆ: 1

ಧನಸ್ಸು: ಮಿತ್ರರ ಆಗಮನದಿಂದ ಸಂತಸವಾಗುವುದು. ವೈಯಕ್ತಿಕ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಮಿತ್ರರೊಂದಿಗೆ ವಾಗ್ವಾದ. ಶುಭಸಂಖ್ಯೆ: 7

ಮಕರ: ಕಾನೂನು ವ್ಯಾಜ್ಯದಲ್ಲಿ ಅಪಜಯ. ತೀರ್ಪು ಗೌರವಿಸಿ. ಭೂವ್ಯವಹಾರದಲ್ಲಿ ಆದಾಯ. ವೈರಿಗಳಿಂದ ದೂರವಿದ್ದಷ್ಟು ಒಳ್ಳೆಯದು. ಶುಭಸಂಖ್ಯೆ: 6

ಕುಂಭ: ತಂದೆಯಿಂದ ಹೊಸ ವ್ಯಾಪಾರಕ್ಕೆ ಆರ್ಥಿಕ ಸಹಾಯ. ಸಮಾಜದಲ್ಲಿ ಗೌರವ ಲಭ್ಯ. ವಾದ ವಿವಾದದಿಂದ ಮನಶ್ಯಾಂತಿಗೆ ಧಕ್ಕೆ. ಶುಭಸಂಖ್ಯೆ: 9

ಮೀನ: ಶಿಕ್ಷಣ ಸಂಸ್ಥೆಯಲ್ಲಿ ಇರುವವರಿಗೆ ಅನುಕೂಲವಿದೆ. ರಕ್ತದೊತ್ತಡದ ಸಮಸ್ಯೆ ಕಾಣಿಸಬಹುದು. ಹೊಸ ಒಪ್ಪಂದಗಳಿಂದ ಲಾಭ. ಶುಭಸಂಖ್ಯೆ: 8