Dream Meanings (ಸಾಂದರ್ಭಿಕ ಚಿತ್ರ)
- ಪ್ರತಿಯೊಬ್ಬ ಮನುಷ್ಯನು ಮಲಗಿದಾಗ ಕನಸುಗಳು ಕಂಡುಬರುವುದು ಸಹಜ ಪ್ರಕ್ರಿಯೆ
- ಕನಸುಗಳು ಕೆಲವೊಂದು ಬಾರಿ ಸಂತೋಷ ನೀಡಿದರೆ, ಇನ್ನೂ ಕೆಲವು ಭಯವನ್ನು ಸೃಷ್ಟಿಸುತ್ತವೆ
- ಕೆಲವೊಮ್ಮೆ ರಾತ್ರಿ ವೇಳೆ ಬೀಳುವಂತಹ ಕನಸುಗಳು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ
- ಕನಸಿನಲ್ಲಿ ಕುದುರೆ ಕಂಡರೆ ಜೀವನದಲ್ಲಿ ಗೌರವ, ಪ್ರತಿಷ್ಠೆ, ಒಳ್ಳೆಯ ಹೆಸರು ಮತ್ತು ಸಾಮಾಜಿಕ ಮನ್ನಣೆ ಹೆಚ್ಚು
Dream Meanings: ಪ್ರತಿಯೊಬ್ಬ ಮನುಷ್ಯನು ಮಲಗಿದಾಗ ಕನಸುಗಳು ಕಂಡುಬರುವುದು ಸಹಜ ಪ್ರಕ್ರಿಯೆ. ಆದಾಗ್ಯೂ, ಆ ಕನಸುಗಳು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದ್ದಾಗಿರಬಹುದು. ಇವು ಕೆಲವೊಂದು ಬಾರಿ ಸಂತೋಷ ನೀಡಿದರೆ, ಇನ್ನೂ ಕೆಲವು ಭಯವನ್ನು ಸೃಷ್ಟಿಸುತ್ತವೆ.
ವಿಜ್ಞಾನದ ಪ್ರಕಾರ, ಎಲ್ಲಾ ಕನಸುಗಳು ಕೇವಲ ಕಲ್ಪನೆಯಲ್ಲ. ಕೆಲವೊಮ್ಮೆ ರಾತ್ರಿ ವೇಳೆ ಬೀಳುವಂತಹ ಕನಸುಗಳು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇವು ಪ್ರಗತಿ, ಸಂಪತ್ತು ಮತ್ತು ಒಳ್ಳೆಯ ಸುದ್ದಿಯನ್ನು ಸೂಚಿಸುತ್ತದೆ. ಹಾಗಿದ್ದರೆ, ಯಾವ ಕನುಸುಗಳು ಶುಭವನ್ನು ಸೂಚಿಸುತ್ತವೆ ಎಂದು ನೋಡೋಣ ಬನ್ನಿ...
ಕನಸಿನಲ್ಲಿ ಮಳೆ ಕಾಣಿಸುವುದು
ಕನಸಿನಲ್ಲಿ ಮಳೆಯನ್ನು ಕಾಣುವುದನ್ನು ತುಂಬಾ ಶುಭವೆಂದು ಕರೆಯಲಾಗುತ್ತದೆ. ಇದರರ್ಥ ಮುಂದಿನ ದಿನಗಳಲ್ಲಿ ಬಾಕಿ ಇರುವಂತಹ ಕೆಲಸಗಳು ಪೂರ್ಣಗೊಳ್ಳುತ್ತವೆ. ಜೊತೆಗೆ ವ್ಯವಹಾರಲ್ಲಿ ಪ್ರಗತಿ ಕಾಣುವ ಸಾಧ್ಯತೆ ಇರುತ್ತದೆ. ಆದಾಗ್ಯೂ, ಹಳೆಯ ಸಮಸ್ಯೆಗಳು ಕೊನೆಗೊಂಡು ಹೊಸ ಅವಕಾಶಗಳು ತೆರೆಯುತ್ತವೆ. ಜೊತೆಗೆ ಉದ್ಯೋಗದಲ್ಲಿ ಬಡ್ತಿ, ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ. ಮಳೆಯ ಜೊತೆಗೆ ಮಳೆಬಿಲ್ಲನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಅದೃಷ್ಟ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ.
ಕನಸಿನಲ್ಲಿ ಕುದುರೆಯನ್ನು ನೋಡುವುದು
ಕನಸಿನಲ್ಲಿ ಕುದುರೆ ಕಂಡರೆ ಜೀವನದಲ್ಲಿ ಗೌರವ, ಪ್ರತಿಷ್ಠೆ, ಒಳ್ಳೆಯ ಹೆಸರು ಮತ್ತು ಸಾಮಾಜಿಕ ಮನ್ನಣೆ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಬಡ್ತಿ ಅಥವಾ ಮನ್ನಣೆ ಸಿಗುವ ಸೂಚನೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ನೀವೇನಾದರೂ ಬಿಳಿ ಕುದುರೆಯನ್ನು ನೋಡಿದರೆ ಯಶಸ್ಸು, ಶಾಂತಿ, ಆಧ್ಯಾತ್ಮಿಕ ಪ್ರಗತಿ ಮತ್ತು ದೊಡ್ಡ ಅದೃಷ್ಟದ ಸಂಕೇತವಾಗಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ ಎಂದು ತಿಳಿಸುತ್ತದೆ.
ದೇವಾಲಯದ ನೋಟ
ಕನಸಿನಲ್ಲಿ ದೇವಸ್ಥಾನ ನೋಡುವುದನ್ನು ದೇವರ ಆಶೀರ್ವಾದದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಬಾಕಿ ಇರುವ ಕೆಲಸಗಳು ಪೂರ್ಣವಾಗಲಿವೆ. ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವ ಕನಸು ಕಂಡರೆ, ಆರ್ಥಿಕವಾಗಿ ಸಂಪನ್ನರಾಗುತ್ತೀರಿ ಜೊತೆಗೆ ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ ಎಂದು ಹೇಳಲಾಗುತ್ತದೆ.
ಚಿನ್ನ ಅಥವಾ ಆಭರಣಗಳನ್ನು ನೋಡುವುದು
ಕನಸಿನಲ್ಲಿ ಚಿನ್ನ, ಆಭರಣ ಅಥವಾ ನಿಧಿಯನ್ನು ನೋಡುವುದರಿಂದ ಸಂಪತ್ತು ಮತ್ತು ಸಮೃದ್ದಿಯ ಸಂಕೇತ ಎಂದು ಗುರುತಿಸಲಾಗುತ್ತದೆ. ಇದರರ್ಥ ಶೀಘ್ರದಲ್ಲೇ ಹಣವನ್ನು ಪಡೆಯುವ ಅವಕಾಶವನ್ನು ಪಡೆಯುವುದರ ಜೊತೆಗೆ ಬಾಕಿ ಸಿಲುಕಿದ್ದ ಹಣ ಮರಳಿ ಬರುತ್ತದೆ. ಹಾಗೂ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ ಎಂದು ಹೇಳಲಾಗುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.