Astrology ಸಾಂದರ್ಭಿಕ ಚಿತ್ರ
Astrology: ವಿಶ್ವಪ್ರಸಿದ್ಧ ಬಲ್ಗೇರಿಯನ್ ಅಂಧ ಪ್ರವಾದಿ ಬಾಬಾ ವಂಗಾ ಅವರ ಹೆಸರು ಕೇಳದವರೇ ಇಲ್ಲ. ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಈ ನಿಗೂಢ ದರ್ಶಕಿಯ ಹಲವು ಮುನ್ಸೂಚನೆಗಳು ಕಾಲಕಾಲಕ್ಕೆ ನಿಜವಾಗುತ್ತಲೇ ಬಂದಿವೆ ಎಂಬುದು ಅಪಾರ ಜನರ ನಂಬಿಕೆ. ಅವರ ಸಂವೇದನಾಶೀಲ ಭವಿಷ್ಯವಾಣಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಆಗಸ್ಟ್ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೇ, ಬಾಬಾ ವಂಗಾ ಅವರ ಹೆಸರಿನಲ್ಲಿ ಹೊಸ ಜ್ಯೋತಿಷ್ಯ ಲೆಕ್ಕಾಚಾರವೊಂದು ಭಾರೀ ಪ್ರಸಾರವಾಗುತ್ತಿದೆ.
ಪ್ರಸ್ತುತ ಪವಿತ್ರ ಶ್ರಾವಣ ಮಾಸ ನಡೆಯುತ್ತಿದ್ದು, ಪರಮಶಿವನ ಕೃಪೆಯ ಜೊತೆಗೆ ಬಾಬಾ ವಂಗಾ ಅವರ ಲೆಕ್ಕಾಚಾರಗಳ ವಿಚಿತ್ರ ಸಮಾಗಮ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆಗಸ್ಟ್ ಮೊದಲ ವಾರದಲ್ಲಿ (ಆಗಸ್ಟ್ 3 ರಿಂದ 9) ಶಿವನ ವಿಶೇಷ ಅನುಗ್ರಹ ಹಾಗೂ ಶುಭ ಗ್ರಹಗಳ ಚಲನೆಯಿಂದಾಗಿ 3 ರಾಶಿಚಕ್ರ ಚಿಹ್ನೆಗಳ ಭಾಗ್ಯ ಸಂಪೂರ್ಣವಾಗಿ ಬದಲಾಗಲಿದೆ. ದೀರ್ಘಕಾಲದಿಂದ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದವರು, ರಾಜಮನೆತನದ ಮಟ್ಟದ ಯಶಸ್ಸು ಮತ್ತು ಸಂಪತ್ತನ್ನು ಪಡೆಯುವ ಸುಯೋಗ ಒದಗಿಬರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...
ಮೇಷ ರಾಶಿ
ಈ ಸಮಯದಲ್ಲಿ ಈ ರಾಶಿಯವರ ಆತ್ಮವಿಶ್ವಾಸ ಉತ್ತುಂಗದಲ್ಲಿರುತ್ತದೆ. ಕೆಲಸದಲ್ಲಿನ ನಿಮ್ಮ ಹಳೆಯ ತೊಡಕುಗಳೆಲ್ಲವೂ ಕ್ಷಣಾರ್ಧದಲ್ಲಿ ಮಾಯವಾಗುತ್ತವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಪ್ರಶಂಸೆಯನ್ನು ಪಡೆಯುತ್ತಾರೆ. ನಿಮಗೆ ಉನ್ನತ ಹುದ್ದೆಗೆ ಬಡ್ತಿ ಅಥವಾ ಹೊಸ ದೊಡ್ಡ ಉದ್ಯೋಗದ ಪ್ರಸ್ತಾಪ ಸಿಗಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
ಕರ್ಕಾಟಕ ರಾಶಿ
ಹಣಕಾಸಿನ ಸಮಸ್ಯೆಗಳನ್ನು ತ್ವರಿತವಾಗಿ ಕೊನೆಗೊಳಿಸುತ್ತದೆ. ಹೊಸ ವ್ಯವಹಾರ ಮಾಡಲು ಇಚ್ಛಿಸುವವರಿಗೆ ಈ ಸಮಯ ಬಹಳ ಶುಭವಾಗಲಿದೆ. ಅರ್ಧದಲ್ಲೇ ಸಿಲುಕಿಕೊಂಡಿದ್ದ ಹಣವನ್ನು ಮತ್ತೆ ಮರಳಿ ಪಡೆಯಲಿದ್ದೀರಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಾಧಿಕಾರಿಯಿಂದ ಪ್ರಶಂಸೆ ಪಡೆಯಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ.
ಕನ್ಯಾ ರಾಶಿ
ಈ ಸಮಯವು ನಿಮ್ಮ ತಲೆಯ ಮೇಲಿರುವ ಚಿಂತೆಗಳನ್ನು ದೂರ ಮಾಡಿ, ಮನಸ್ಸಿಗೆ ನೆಮ್ಮದಿ ನೀಡುತ್ತದೆ. ದೀರ್ಘಕಾಲದಿಂದ ಸ್ವಂತ ಕಾರು ಅಥವಾ ಮನೆ ಖರೀದಿಸುವ ಕನಸನ್ನು ಕಾಣುತ್ತಿದ್ದರೆ ಈ ಸಮಯ ಶುಭವಾಗಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಉತ್ತಮ ಮೆಚ್ಚುಗೆ ದೊರೆಯಲಿದೆ. ಸಂಗಾತಿಯೊಂದಿಗಿನ ಸಂಬಂಧವು ಮೊದಲಿಗಿಂತ ಹೆಚ್ಚು ಮಧುರವಾಗಲಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.