Hastasamudrika Shastra 
ಧಾರ್ಮಿಕ

ಅಂಗೈನಲ್ಲಿ ಈ ಗುರುತಿದೆಯಾ ನೋಡಿಕೊಳ್ಳಿ?; ಮಹಾದೇವನ ಕೃಪೆ ನಿಮ್ಮ ಮೇಲಿರೋದು ಗ್ಯಾರಂಟಿ..Hastasamudrika Shastra

ಪ್ರಮುಖ ಮುಖ್ಯಾಂಶಗಳು

  • ನಿಮ್ಮ ಅಂಗೈನಲ್ಲಿ ತ್ರಿಶೂಲ ಆಕಾರದ ಚಿಹ್ನೆ ಇದೆಯೇ, ನೀವು ಶಿವನ ಕೃಪೆ ಹೊಂದಿದ್ದೀರಿ
  • ತ್ರಿಶೂಲ ಆಕಾರದ ಚಿಹ್ನೆ ಹೊಂದಿರುವವರು ಸಮಾಜದಲ್ಲಿ ಅಪಾರ ಗೌರವ ಹೊಂದಿರುವವರು
  • ಅಂಗೈನಲ್ಲಿ ತ್ರಿಶೂಲ ಆಕಾರದ ಚಿಹ್ನೆ ಉತ್ತಮ ವ್ಯಾಪಾರ ಬುದ್ಧಿ, ಆರ್ಥಿಕ ಲಾಭವನ್ನು ಸಂಕೇತಿಸುತ್ತದೆ.
Hastasamudrika Shastra: ಹಿಂದೂ ಸಂಪ್ರದಾಯದಲ್ಲಿ ಹಸ್ತ ಸಾಮುದ್ರಿಕ ಶಾಸ್ತ್ರಕ್ಕೆ ಭಾರಿ ಪ್ರಾಮುಖ್ಯತೆ ಇದೆ. ಕೈನಲ್ಲಿ ಕಾಣಿಸುವ ಗೆರೆಗಳು ಒಂದೊಂದು ಒಂದೊಂದರ ಮಹತ್ವವನ್ನು ಸಾರುತ್ತದೆ. ಅನ್ನದ ಋಣ, ಪ್ರೀತಿ, ದಾಂಪತ್ಯ, ಆರ್ಥಿಕ, ಸ್ನೇಹ ಹೀಗೆ ನಾನಾ ವಿಚಾರಗಳನ್ನು ಬಿಚ್ಚಿಡುತ್ತದೆ.
ಹಾಗೆಯೇ ನಿಮ್ಮ ಅಂಗೈನಲ್ಲಿ ತ್ರಿಶೂಲದ ಆಕಾರದಲ್ಲಿ ಗೆರೆ ಇದ್ದರೆ ಇದು ನಿಮ್ಮ ಪಾಲಿನ ಭಾರೀ ಅದೃಷ್ಟವನ್ನು ಸೂಚಿಸುತ್ತದೆ ಎಂದು ಆಧ್ಯಾತ್ಮಿಕ ವಿದ್ವಾಂಸರು ಹೇಳುತ್ತಾರೆ. ಹಾಗಾದ್ರೆ ಇಂದು ತ್ರಿಶೂಲದಂತೆ ಕಾಣುವ ಅದೃಷ್ಟ ಹೇಗೆಲ್ಲ ನಿಮ್ಮ ಭವಿಷ್ಯಕ್ಕೆ ಸಹಕಾರಿ ಎನ್ನುವುದನ್ನು ತಿಳಿದುಕೊಳ್ಳೋಣ.

ಶಿವನ ಅನುಗ್ರಹ ನಿಮ್ಮ ಮೇಲಿದೆ

ಅಂಗೈನಲ್ಲಿ ತ್ರಿಶೂಲ ಚಿಹ್ನೆ ಇದ್ದರೆ, ಇದನ್ನು ನಿಮ್ಮ ಮೇಲೆ ಶಿವನ ಅನುಗ್ರಹವಿದೆ ಎಂದೇ ನಂಬಲಾಗುತ್ತದೆ. ತ್ರಿಶೂಲದ ಗುರುತು ಹೊಂದಿರುವವರು ಶಿವನ ಕೃಪೆ ಹೊಂದಿರುತ್ತಾರೆ ಎಂದು ನಂಬಲಾಗುತ್ತದೆ. ಅಲ್ಲದೇ ಸಮಾಜದಲ್ಲಿ ಅಪಾರ ಗೌರವ ಹೊಂದಿರುವವರು ಮತ್ತು ಶ್ರೀಮಂತರು ಎಂದು ನಂಬಲಾಗುತ್ತದೆ.
ತ್ರಿಶೂಲ ಆಕಾರ ಹೊಂದಿರುವ ಜನರು ತಮ್ಮ ಜೀವನದಲ್ಲಿ ಯಾವುದೇ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸೋದಿಲ್ಲ. ಸಾಧ್ಯವಾದಷ್ಟು ಸಂತೋಷದ ಜೀವನವನ್ನೇ ಅನುಭವಿಸುತ್ತಾರೆ. ಇದು ತೃಪ್ತಿ, ಸಂತೋಷ ಹಾಗೂ ಸಂಪತ್ತಿನ ಸಂಕೇತ ಎಂದು ನಂಬಲಾಗಿದೆ.

ವಿಶೇಷ ವ್ಯಕ್ತಿತ್ವ

ಮೇಲಿನ ಚಿತ್ರದಲ್ಲಿ ಕಾಣುವಂತೆ ನಿಮ್ಮ ಅಂಗೈನಲ್ಲಿ ತ್ರಿಶೂಲ ಆಕಾರದಲ್ಲಿ ಗುರುತು ಇದ್ದರೆ ನೀವು ವಿಶೇಷವಾದ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ ಎಂದು ಅರ್ಥ. ನೀವು ಯಾವ ಕ್ಷೇತ್ರಕ್ಕೆ ಕಾಲಿಡುತ್ತಿರೋ ಅಲ್ಲಿ ಎಲ್ಲ ನಿಮಗೆ ಅದೃಷ್ಟದ ಕದ ಎಂದು ತೆರೆದಿರುತ್ತದೆ ಎನ್ನುತ್ತದೆ ಈ ಹಸ್ತ ಸಾಮುದ್ರಿಕ ಶಾಸ್ತ್ರ.

ರಾಜಯೋಗ ನಿಶ್ಚಿತ

ವಿಧಿ ರೇಖೆ ಮತ್ತು ಸೂರ್ಯ ರೇಖೆಯನ್ನು ಸೂಚಿಸುವ ಈ ತ್ರಿಶೂಲ ರೇಖೆಯನ್ನು ಹೊಂದಿರುವ ವ್ಯಕ್ತಿ ರಾಜಯೋಗ ಹೊಂದಿರುತ್ತಾನೆ ಎನ್ನಲಾಗಿದೆ. ಅತ್ಯುನ್ನತ ಮಟ್ಟದ ಗುರಿ ತಲುಪುತ್ತಾನೆ. ಎಲ್ಲವೂ ಶುಭ ಸಂಗತಿ ಕೇಳಿ ಬರುತ್ತದೆ. ಅಲ್ಲದೆ ಆ ವ್ಯಕ್ತಿ ಅದೃಷ್ಟವಂತ ಎನ್ನುವುದನ್ನು ಉಲ್ಲೇಖಿಸಲಾಗಿದೆ.

ವ್ಯಾಪಾರ ಬುದ್ಧಿ

ಉತ್ತಮ ವ್ಯಾಪಾರ ಬುದ್ಧಿ, ಸಂವಹನ ಕೌಶಲ್ಯ ಮತ್ತು ಅದ್ಭುತ ಆರ್ಥಿಕ ಲಾಭವನ್ನು ಸಂಕೇತಿಸುತ್ತದೆ.

ಎಂ ಅಕ್ಷರವಿದ್ರೆ ಏನರ್ಥ

ಕೈನಲ್ಲಿ ತ್ರಿಕೋನ ಗುರುತು ಅಥವಾ ಎಂ ಅಕ್ಷರದಂತೆ ಗುರುತು ಕಾಣಿಸಿಕೊಂಡರೆ ಆ ವ್ಯಕ್ತಿಗಳು ಗುಣವಂತರು. ವೃತ್ತಿ ಹಾಗೂ ಶಿಕ್ಷಣದ ಬಗ್ಗೆ ಸರಿಯಾದ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಈ ರೇಖೆ ಹೊಂದಿರುವವರು ಅದೃಷ್ಟಶಾಲಿಗಳು ಎಂದು ಗುರುತಿಸಲಾಗಿದೆ. ಯಾವುದೇ ಕಷ್ಟದ ಸಮಯದಲ್ಲಿಯೂ ಪರಿಸ್ಥಿತಿ ಎದುರಿಸಲು ಹಿಂದೇಟು ಹಾಕೋದಿಲ್ಲ ಎನ್ನಲಾಗಿದೆ.
ದೇವಾಲಯದ ಚಿಹ್ನೆ
ನಿಮ್ಮ ಅಂಗೈನಲ್ಲಿ ದೇವಾಲಯದ ಚಿಹ್ನೆ ಇದ್ದರೆ ಅದು ಬಹಳ ಮಂಗಳಕರ ಎಂದು ನಂಬಲಾಗುತ್ತದೆ. ಈ ಚಿಹ್ನೆಯು ಜೀವನದಲ್ಲಿ ಉನ್ನತ ಮಟ್ಟದ ಜ್ಞಾನ ಹೊಂದಿರುತ್ತಾರೆ ಎನ್ನುವ ನಂಬಿಕೆ ಇದೆ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.