Why You Shouldn't Wash And Dry Clothes At Night 
ಧಾರ್ಮಿಕ

ನಿತ್ಯ ರಾತ್ರಿ ಬಟ್ಟೆ ಒಗೆಯುವ ಅಭ್ಯಾಸವಿದ್ರೆ ತಕ್ಷಣ ನಿಲ್ಲಿಸಿ; ಇಲ್ಲಿದೆ ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕಾರಣ..Washing Dry Clothes At Night

ಪ್ರಮುಖ ಮುಖ್ಯಾಂಶಗಳು

  • ಕತ್ತಲಲ್ಲಿ ಬಟ್ಟೆ ಒಗೆಯುವುದು ಮತ್ತು ಒಣಗಿ ಹಾಕುವುದು ಜ್ಯೋತಿಷ್ಯ ಮತ್ತು ವೈಜ್ಞಾನಿಕವಾಗಿ ತಪ್ಪು
  • ಸೂರ್ಯಸ್ತದ ನಂತರ ಬಟ್ಟೆ ಒರಗೆ ಇರುವುದರಿಂದ ದರಿದ್ರತನ ಹೆಚ್ಚಿ, ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ
  • ಚಂದ್ರನ ಬೆಳಕಿನಲ್ಲಿ ಒಣಗಿದ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಸಿಲಿಂಡ್ರ ಉತ್ಪತ್ತಿಯಾಗುತ್ತದೆ
Why You Shouldn't Wash And Dry Clothes At Night: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ನಾವು ಮಾಡುವಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ನಿಯಮವಿದೆ. ಕೆಲವೊಂದು ಕೆಲಸಕ್ಕೆ ಹೆಚ್ಚಿನ ಮಹತ್ವಿದೆ. ಕೆಲವೊಂದು ಕಾರ್ಯ ಮಾಡುವಾಗ ಚಿಂತಿಸಿ ಹೆಜ್ಜೆ ಇಡಬೇಕು. ಸಾಮಾನ್ಯವಾಗಿ ನಾವು ಮದುವೆ, ಹಬ್ಬಗಳಂದು ಯಾವುದೇ ಕೆಲಸ ಮಾಡುವಾಗ ಯೋಚಿಸಿ ಕೆಲಸ ಕೈಗೊಳ್ಳುತ್ತೇವೆ. ಅದರಂತೆ ಬಟ್ಟೆ ಒಗೆಯುವ ವಿಚಾರದಲ್ಲಿಯೂ ಈ ನಿಯಮವನ್ನು ಪಾಲನೆ ಮಾಡಬೇಕು.
ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಟ್ಟೆಯನ್ನು ಯಾವಾಗ ಒಗೆಯಬೇಕು? ರಾತ್ರಿ ಒಗೆದರೆ ಏನಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಈಲೇಖನದಲ್ಲಿ ಇದೆ.

ರಾತ್ರಿ ಬಟ್ಟೆ ಒಗೆದರೆ ಏನಾಗುತ್ತದೆ?

ಸೂರ್ಯನ ಬೆಳಕಿನಲ್ಲಿ ಬಟ್ಟೆ ಒಣಗಿಸಿದಾಗ ಸೂರ್ಯನ ಕಿರಣಗಳು ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ. ಆದರೆ ರಾತ್ರಿ ವೇಳೆ ಸೂರ್ಯನ ಬೆಳಕು ಇಲ್ಲದಿರುವುದರಿಂದ ನಕಾರಾತ್ಮಕ/ಚಂದ್ರನ ತಂಪಾದ ಶಕ್ತಿಗಳು ಬಟ್ಟೆಯಲ್ಲಿ ಶೇಖರಗೊಂಡು, ಅದನ್ನು ಧರಿಸಿದಾಗ ವ್ಯಕ್ತಿಯ ಮೇಲೆ ಕೆಟ್ಟ ಪ್ರಭಾವ ಬೀರಬಹುದು.
ರಾತ್ರಿ ಸಮಯವು ಚಂದ್ರನ ಶಾಂತ ಶಕ್ತಿಗೆ ಸಂಬಂಧಿಸಿದ್ದು. ಬಟ್ಟೆ ಒಗೆಯುವುದು ಕ್ರಿಯಾಶೀಲ ಶಕ್ತಿ ಬಯಸುವುದರಿಂದ ಶಕ್ತಿಯ ಸಮತೋಲನ ತಪ್ಪುತ್ತದೆ. ಬೆಳಗ್ಗೆ ಬಟ್ಟೆ ಒಗೆದು ಧರಿಸಿದಾಗ ಸೂರ್ಯನ ಬೆಳಕಿನ ಶಕ್ತಿ ಮತ್ತು ಸಕರಾತ್ಮಕತೆಯು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಜೀವನದಲ್ಲಿನ ಅನೇಕ ಕಷ್ಟಗಳಿಗೆ ಸಹ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಆರ್ಥಿಕವಾಗಿ ಸಮಸ್ಯೆ

ಸೂರ್ಯಾಸ್ತದ ನಂತರ ತೇವದ ಬಟ್ಟೆಗಳನ್ನು ಹೊರಗೆ ಒಣಗಿಸುವುದರಿಂದ ಅಥವಾ ಬಟ್ಟೆ ಒಗೆಯುವುದರಿಂದ ಮನೆಯಲ್ಲಿ ದರಿದ್ರತನ ಹೆಚ್ಚಿ, ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ ಹಾಗೂ ಶಾಂತಿ-ಸಮೃದ್ಧಿ ಕಡಿಮೆಯಾಗುತ್ತದೆ ಎಂದು ನಂಬಲಾಗುತ್ತದೆ.

ಬ್ಯಾಕ್ಟೀರಿಯಾ ಉತ್ಪತ್ತಿ

ಚಂದ್ರನ ಬೆಳಕಿನಲ್ಲಿ ಒಣಗಿದ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಸಿಲಿಂಡ್ರ ಉತ್ಪತ್ತಿಯಾಗುವಂತೆ ಮಾಡುತ್ತದೆ. ಗಾಳಿಯಲ್ಲಿ ತೇವಾಂಶ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಇದರಿಂದ ಬ್ಯಾಕ್ಟೀರಿಯಾ ಹೆಚ್ಚಾಗಿ ಚರ್ಮದ ಅಲರ್ಜಿ ಅಥವಾ ದುರ್ವಾಸನೆ ಬರಬಹುದು ಎನ್ನಲಾಗಿದೆ. ಕತ್ತಲಲ್ಲಿ ಬಟ್ಟೆ ಒಣಗಿಸುವುದರಿಂದ ಕ್ರಿಮಿ ಕೀಟಗಳು, ಜೇಡ ಹಾಗೂ ನೊಣಗಳು ಬಟ್ಟೆ ಮೇಲೆ ಕುಣಿತು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದನ್ನೇ ಧರಿಸುವ ನಾವು ಚರ್ಮದ ಸೋಂಕಿಗೆ ಒಳಗಾಗುತ್ತೇವೆ.

ಯಾವುದು ಸರಿ?

  • ಬಟ್ಟೆಗಳನ್ನು ಒಗೆಯಲು ಮತ್ತು ಒಣಗಿಸಲು ಬೆಳಗಿನ ಸಮಯ ಸೂರ್ಯೋದಯದ ನಂತರ ಅತ್ಯಂತ ಶ್ರೇಷ್ಠ.
  • ಒಂದು ವೇಳೆ ರಾತ್ರಿ ಒಗೆಯಲೇಬೇಕಾದ ಅನಿವಾರ್ಯತೆ ಇದ್ದರೆ, ಬಟ್ಟೆಗಳನ್ನು ಹೊರಾಂಗಣದಲ್ಲಿ ಹಾಕದೆ ಮನೆಯ ಒಳಗಡೆಯೇ ಸೂಕ್ತ ಗಾಳಿ ಬೆಳಕಿರುವ ಜಾಗದಲ್ಲಿ ಒಣಗಿಸುವುದು ಒಳಿತು.