Why men dress up as women to enter this Kerala temple
- ಕೇರಳದ ಕೊಲ್ಲಂ ಜಿಲ್ಲೆಯ ಚವರದಲ್ಲಿರುವ ಕೊಟ್ಟಂಕುಕಂಗರ ಶ್ರೀ ದೇವಿ ದೇವಸ್ಥಾನ.
- ಚಮಯವಿಳಕ್ಕು ಉತ್ಸವಕ್ಕೆ ಬರುವ ಪುರುಷರು ಮಹಿಳೆಯರಂತೆ ವೇಷ ಧರಿಸಿ ಪೂಜಿಸುತ್ತಾರೆ.
- ಉತ್ಸವದಲ್ಲಿ ಲೈಂಗಿಕ ಅಲ್ಪ ಸಂಖ್ಯಾತರು ಸೇರಿದಂತೆ ಹರಕೆ ಹೊತ್ತ ಪುರಷರು ಭಾಗಿಯಾಗಿರುತ್ತಾರೆ.
Why men dress up as women to enter this Kerala temple:
ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಸಾಮಾನ್ಯವಾಗಿ ಆಯಾ ದೇಗುಲದ ಆಡಳಿತ ಮಂಡಳಿಯ ಡ್ರೆಸ್ ಕೋಡ್ ನಿಯಮವಿರುತ್ತದೆ. ಪಂಚೆ ತೊಡಬೇಕು. ಪುರುಷರು ಅರೆಬೆತ್ತಲೆಯಾಗಿ ಪ್ರವೇಶಿಸಬೇಕು. ಮಹಿಳೆಯರು ವೆಸ್ಟರ್ನ್ ಬಟ್ಟೆ ಧರಿಸಕೂಡದು ಎಂದು. ಆದರೆ, ಪುರುಷರು ಮಹಿಳೆಯರಂತೆ ಬಟ್ಟೆ ಧರಿಸಿ ದೇವರಿಗೆ ಪೂಜೆ ಮಾಡುತ್ತಾರೆ, ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ ಎನ್ನುವುದನ್ನು ಎಲ್ಲಿಯಾದರೂ ನೋಡಿದ್ದೀರಾ?. ಆದರೆ ಇಂತಹ ಒಂದು ವಿಚಿತ್ರ ಪೂಜಾ ವಿಧಾನವು ಕೇರಳದಲ್ಲಿ ನಡೆಯುತ್ತದೆ.
ಕೇರಳದ ಕೊಲ್ಲಂ ಜಿಲ್ಲೆಯ ಚವರದಲ್ಲಿರುವ ಕೊಟ್ಟಂಕುಕಂಗರ ಶ್ರೀ ದೇವಿ ದೇವಸ್ಥಾನದ ಪೂಜಾ ವಿಧಾನವು ಇಡೀ ದೇಶವನ್ನೇ ಗಮನ ಸೆಳೆಯುವಂತೆ ಮಾಡುತ್ತದೆ. ವರ್ಷಕ್ಕೊಮ್ಮೆ ನಡೆಯುವ ಚಮಯವಿಳಕ್ಕು ಉತ್ಸವಕ್ಕೆ ಬರುವ ಪುರುಷರು ಮಹಿಳೆಯರಂತೆ ಸೀರೆ ಧರಿಸಿ, ಅಲಂಕರಿಸಿಕೊಂಡು ದೀಪ ಹಿಡಿದು ದೇವಿ ಮುಂದೆ ನಿಲ್ಲುವ ಆಚರಣೆ ಈ ಊರಿನಲ್ಲಿ ಇದೆ ಎನ್ನುತ್ತಾರೆ.
ಪುರಾಣವು ಏನನ್ನು ಹೇಳುತ್ತದೆ?
ಪುರಣಾಗಳ ಪ್ರಕಾರ, ಹಸು ಮೇಯಿಸುವ ಬಾಲಕರು ತೆಂಗಿನ ಕಾಯಿ ಹೊಡೆಯಲು ಯತ್ನಿಸುತ್ತಿರುತ್ತಾರೆ. ಈ ವೇಳೆ ಆಯತಪ್ಪಿ ತೆಂಗು ಕಲ್ಲಿನ ತಲೆ ಮೇಳೆ ಬೀಳುತ್ತದೆ. ಈ ವೇಳೆ ದಿಕ್ಕೇ ತೋಚದೆ ಪೇಚಿಗೆ ಸಿಲುಕಿದ ಮಕ್ಕಳು, ಅಲ್ಲೇ ಇದ್ದ ಮಹಿಳೆಯರ ಬಟ್ಟೆಧರಿಸಿ, ಪೂಜೆ ಸಲ್ಲಿಸಿದರು. ಅಂದಿನಿಂದ ಇಲ್ಲಿಯವರೆಗೂ ಯಾವುದಾದರೂ ಶುಭಕಾರ್ಯ ಕೈಗೊಂಡರೆಪುರುಷರು ಸ್ತ್ರೀ ವೇಷ ಧರಿಸಿ ಪೂಜೆ ಮಾಡುವ ಪ್ರತೀತಿ ಇದೆ.
ಸೀರೆ, ಬೊಟ್ಟು, ಕೂದಲು ಧರಿಸಿ ಪೂಜೆ
ಈ ದೇವಿಗೆ ಪೂಜೆ ಮಾಡುವ ದಿನವು ಪುರುಷರು ಹೆಣ್ಣಿನಂತೆ ಹಣೆಗೆ ಬಿಂದಿ, ಲಿಪ್ಸ್ಟಿಕ್, ಕೃತಕ ಕೂದಲು ಧರಿಸಿ ಸಜ್ಜಾಗುತ್ತಾರೆ. ನಂತರ ದೊಡ್ಡ ದೊಡ್ಡ ಆರತಿ ಮಾಡುವ ವಸ್ತುವನ್ನು ಕೈನಲ್ಲಿ ಹಿಡಿದು ಸಾಲಾಗಿ ನಿಂತು ದೇವರಿಗೆ ಪೂಕೆ ಮಾಡುತ್ತಾರೆ. ದೀಪ ಹಿಡಿದು ಪ್ರದರ್ಶನ ಹಾಕುವ ವೇಳೆ, ಸಂಕಷ್ಟಗಳು ದೂರಾಗಲಿ ಎಂದು ಬೇಡಿಕೊಳ್ಳುತ್ತಾರೆ ಎನ್ನಲಾಗಿದೆ. ಇಂತಹ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಹಲವರು ದೂರದ ಊರುಗಳಿಂದ ಕೇರಳಕ್ಕೆ ಪ್ರಯಾಣ ಬೆಳಸುತ್ತಾರೆ ಎನ್ನುವ ಮಾಹಿತಿ ಇದೆ.
ಈ ಉತ್ಸವವು ಮಾರ್ಚ್ ಮಾಸದಲ್ಲಿ 10ರಿಂದ 12 ದಿನಗಳ ಕಾಲ ನೆರವೇರುತ್ತದೆ. ಪುರುಷರು ತಮ್ಮ ವಯಸ್ಸಿನ ಹೊರತಾಗಿ ಮಹಿಳೆಯರಂಯರಂತೆ ವೇಷಧಿಸಿ ಬತ್ತಿ ಇರುವ ದೀಪಗಳನ್ನು ಬೆಳಗುತ್ತಾರೆ. ಇಲ್ಲಿ ಜಾತಿ-ಧರ್ಮ ಯಾವುದೂ ಗಣನೆಗೆ ಬರುವುದಿಲ್ಲ. ಇಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಹಲವರು ಹಂಗು ಬಿಟ್ಟು ಪೂಜೆಯಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿದೆ.
ಕಕ್ಕವಿಳಕ್ಕುಎಂದರೆ ಏನು
ಕಕ್ಕವಿಳಕ್ಕು ಎನ್ನುವುದು ಇದೇ ಉತ್ಸವದ ಒಂದು ಭಾಗ. ಇಲ್ಲಿ ಹಗಲು ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ಹುಡುಗಿಯರಂತೆ ಉಡುಗೆ ತೊಟ್ಟು ದೀಪಗಳನ್ನು ಬೆಳಗಿಸುತ್ತಾರೆ. ಮುಖ್ಯ ಕಾರ್ಯಕ್ರಮವಾದ ಚಮಯವಿಳಕ್ಕು ಸಂಜೆ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ಮುಂದುವರಿಯುತ್ತದೆ
ಬೆಳಗಿನ ಜಾವ 2 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಶುಭ ಸಮಯದಲ್ಲಿ ದೇವಾಲಯವು ಭಕ್ತರಿಗೆ ತೆರೆದಿರುತ್ತದೆ. ಅನೇಕರು ಈ ದೇಗುಲದ ವೈಭೋಗ, ಪುರುಷರು ಹೆಣ್ಣಿನಂತೆ ಬಟ್ಟೆ ಧರಿಸುವುದನ್ನು ನೋಡಲು ದೂರದ ಊರುಗಳಿಂದ ಪ್ರಯಾಣ ಬೆಳೆಸುತ್ತಾರೆ. ದೇವಾಲಯದ ಬಳಿ ಪುಟ್ಟ ಗುಡಿಸಲು ನಿರ್ಮಿಸಿ, ಮಹಿಳೆಯರಂತೆ ಮೇಕಪ್ ಮಾಡಿಸಲು ಜನರನ್ನು ಇಟ್ಟಿರುತ್ತಾರೆ ಎನ್ನಲಾಗಿದೆ, (ಏಜೆನ್ಸೀಸ್).