ಧಾರ್ಮಿಕ

ಪೂಜೆ, ಶುಭಕಾರ್ಯಗಳಲ್ಲಿ ಇರಲೇ ಬೇಕು ಬಾಳೆ ಎಲೆ, ಗಿಡ; ಅಷ್ಟೊಂದು ಪ್ರಾಮುಖ್ಯತೆ ಕೊಡೋದ್ಯಾಕೆ?..Banana Tree

  • ಬಾಳೆ ಗಿಡದಲ್ಲಿ ಮಹಾವಿಷ್ಣು, ಮಹಾಲಕ್ಷ್ಮೀ ನೆಲೆಸಿದ್ದಾರೆ ಎನ್ನುವುದು ನಂಬಿಕೆ.

  • ಗುರುದೋಷವಿದ್ದವರು ಪ್ರತಿ ಗುರುವಾರ ಬಾಳೆ ಗಿಡ ಪೂಜೆ ಮಾಡುವುದು ಉತ್ತಮ.

  • ಬಾಳೆ ಕಂಬಗಳನ್ನು ಕಟ್ಟುವುದು ವಂಶವೃದ್ಧಿ ಮತ್ತು ಸಮೃದ್ಧಿಯ ಸಂಕೇತವಾಗಿದೆ.

Banana tree pooja in Hinduism: ಗಣೇಶ ಹಬ್ಬ, ವರ ಮಹಾಲಕ್ಷ್ಮಿ, ದಸರಾ, ದೀಪಾವಳಿ, ಯುಗಾದಿ ಯಾವುದೇ ಹಿಂದೂಗಳ ಹಬ್ಬವಿರಲಿ ಅಲ್ಲಿ ಬಾಳೆ ಹಣ್ಣಿನ ಕಂಬ ಇರೋದು ಖಾಯಂ. ಯಾಕೆ ಅನ್ನುವ ಪ್ರಶ್ನೆ ಹಲವರಿಗೆ ಕಾಡೋದು ಸಹಜ. ಅನಾದಿ ಕಾಲದಿಂದಲೂ ಪಾಲನೆ ಮಾಡುತ್ತಾ ಬಂದ ಈ ಸಂಪ್ರದಾಯದ ಬಗ್ಗೆ ಯಾರು ಎಲ್ಲಿಯೂ ಪ್ರಶ್ನೆ ಮಾಡುವುದು ಇಲ್ಲ. ಆದರೆ, ಈ ಬಾಳೆ ಗಿಡ ಇರುವ ಹಿಂದೆ ಪವಿತ್ರವಾದ ಉತ್ತರವಿದೆ.

ಹೌದು, ಬಾಳೆ ಗಿಡವನ್ನು ಗುರುವಾರದ ದೇವಗುರು ಬೃಹಸ್ಪತಿ ಪ್ರಮುಖ ಪ್ರತೀಕವಾಗಿ ವಿಷ್ಣುಮೂರ್ತಿ ಮತ್ತು ಲಕ್ಷ್ಮೀದೇವಿಯೊಂದಿಗೆ ಆಳವಾದ ಅನುಬಂಧವಿರುವ ಪವಿತ್ರವಾದ ಸಸ್ಯವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಗುರುವಾರದಂದು ಬಾಳೆಗಿಡಕ್ಕೆ ಪೂಜೆ ಮಾಡಲಾಗುತ್ತದೆ. ಜೊತೆಗೆ ಗುರು ದೋಷವಿದೆ ಎಂದು ನಂಬಿರುವವರು ಈ ಗಿಡಕ್ಕೆ ಪೂಜೆ ಮಾಡಿ ನಮಿಸಿದರೆ, ಪರಿಹಾರ ಸಿಗುತ್ತದೆ ಎನ್ನುವುದು ನಂಬಿಕೆ.

ಬಾಳೆ ಗಿಡ ದೇವರಿಗೆ ಸಮಾನ ಎನ್ನುವುದು ಯಾಕೆ?

ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಬಾಳೆ ಗಿಡ ಬಳಕೆ ಮಾಡಲಾಗುತ್ತದೆ. ಇದನ್ನು ಸಾಕ್ಷಾತ್ ವಿಷ್ಣುಮೂರ್ತಿ ಹಾಗೂ ಲಕ್ಷ್ಮೀದೇವಿಯ ಕೃಪೆಗೆ ಪಾತ್ರವಾದ ಸಸ್ಯವೆಂದು ನಂಬಲಾಗಿದೆ. ಜೊತೆಗೆ ದೇವಗುರುವಾದ ಬೃಹಸ್ಪತಿ ಅಂದರೆ ಗುರು ಗ್ರಹಕ್ಕೆ ಬಾಳೆ ಮರವನ್ನು ಸಂಕೇತವಾಗಿ ಪರಿಗಣಿಸಲಾಗುತ್ತದೆ.

ಬಾಳೆ ಎಲೆಯಲ್ಲಿ ದೇವರಿಗೆ ನೈವೇದ್ಯ ಇಡೋದ್ಯಾಕೆ

ಬಾಳೆ ಎಲೆ ನೈಸರ್ಗಿಕ ಮತ್ತು ಶುದ್ಧವಾದದ್ದು ಎಂದು ಪರಿಗಣಿಸಲಾಗಿದೆ. ಯಾವುದೇ ಕಲ್ಮಶವಿಲ್ಲದ ಎಲೆಯಲ್ಲಿ ಪ್ರಸಾದವನ್ನು ಬಡಿಸಿ ದೇವರಿಗೆ ಇಡಲಾಗುತ್ತದೆ. ಪ್ರಕೃತಿಗೆ ತೀರಾ ಹತ್ತಿರವಿರುವ ಬಾಳೆ ಎಲೆಯನ್ನು ಸಾತ್ವಿಕತೆ ಹಾಗೂ ಶುದ್ಧತೆಗೆ ಸಂಕೇತ ಎಂದು ಹಲವರು ನಂಬುತ್ತಾರೆ.

ಬಾಳೆ ಎಲೆ ಮತ್ತು ಬಾಳೆಹಣ್ಣುಗಳಿಲ್ಲದೆ ಪೂಜೆ ಅಪೂರ್ಣವೇ?

ಪ್ರತಿ ಪೂಜೆಗೂ ಬಾಳೆಹಣ್ಣು ಕಡ್ಡಾಯವಾಗಿರಬೇಕು ಎಂಬ ಕಠಿಣ ನಿಯಮ ಹಿಂದೂ ಧರ್ಮದ ಎಲ್ಲ ಸಂಪ್ರದಾಯಗಳಲ್ಲಿ ಇಲ್ಲ. ಆಯಾ ಕುಟುಂಬದ ಧಾರ್ಮಿಕ ಆಚರಣೆಗಳ ಮೇಲೆ ಇದು ಉಲ್ಲೇಖವಾಗುತ್ತದೆ. ಬಾಳೆ ಎಲೆ ಹಾಗೂ ಬಾಳೆ ಗಿಡಗಳಿಗೆ ಧಾರ್ಮಿಕ ಪೂಜೆಗಳಲ್ಲಿ ವಿಶೇಷ ಹಾಗೂ ಅಗ್ರಸ್ಥಾನವಿದೆ.

ಇದನ್ನೂ ಓದಿ:

ಬಾಳೆ ಕಂಬ ಕಟ್ಟೋದ್ಯಾಕೆ?

ಮದುವೆ, ಹಬ್ಬ, ಗೃಹ ಪ್ರವೇಶ ಸೇರಿದಂತೆ ಎಲ್ಲ ಪೂಜೆ ಪುನಸ್ಕಾರಕ್ಕೂ ಬಾಳೆ ಕಂಬ ಬಳಕೆ ಮಾಡಲಾಗುತ್ತದೆ. ಬಾಳೆ ಮರವು ಒಮ್ಮೆ ಫಸಲು ನೀಡಿದ ಬಳಿಕವೂ ಅದರ ಸುತ್ತಲೂ ಹೊಸ ಸಸ್ಯಗಳು ಹುಟ್ಟಿಕೊಳ್ಳುವುದರಿಂದ, ಇದನ್ನು ವಂಶವೃದ್ಧಿ, ನಿರಂತರ ಅಭಿವೃದ್ಧಿ ಸಂಕೇತ ಎನ್ನಲಾಗುತ್ತದೆ. ಈ ರೀತಿ ಬಾಳೆ ಕಂಬಗಳನ್ನು ನಿಲ್ಲಿಸುವುದರಿಂದ ಮನೆಯಲ್ಲಿ ಮಂಗಳಕರ ವಾತಾವರಣ ನೆಲೆಸುತ್ತದೆ ಎಂದು ನಂಬಲಾಗಿದೆ.

ಗುರು ದೋಷವಿರುವವರು ಹೀಗೆ ಮಾಡಿ

ಜಾತಜದಕಲ್ಲಿ ಗುರು ದೋಷ ಇದೆ ಎಂದು ನಿಮಗೆ ಗೊತ್ತಾಗಿದ್ದಾರೆ ಪ್ರತಿ ಗುರುವಾರ ಬಾಳೆ ಗಿಡಕ್ಕೆ ನೀರು ಹಾಕಿ ಪೂಜೆ ಮಾಡಿ. ಇದರಿಂದ ದೋಷ ನಿವಾರಣೆಯಾಗಿದೆ. ಮದುವೆಯಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಿ, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ನಂಬಲಾಗುತ್ತದೆ, (ಏಜೆನ್ಸೀಸ್).Banana tree pooja in Hinduism Banana tree pooja in Hinduism

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.