2026ರ ರಾಮನವಮಿ ಆಚರಣೆ ಯಾವಾಗ? ಪೂಜಾ ಸಮಯ ಹಾಗೂ ಯಾವ ಆಹಾರ ಸೇವಿಸಬೇಕು? ಇಲ್ಲಿದೆ ಮಾಹಿತಿ... Rama Navami
- 2026ರಲ್ಲಿ ಕೋದಂಡ ರಾಮನ ಜನ್ಮದಿನೋತ್ಸವ ಎಂದು ಆಚರಿಸಲಾಗುತ್ತದೆ
- ರಾಮನವಮಿಯಂದು ಭಕ್ತಾದಿಗಳು ಎಂತಹ ಆಹಾರವನ್ನು ಸೇವಿಸಬೇಕಾಗುತ್ತದೆ?
- ವಿಷ್ಣುವಿನ 7ನೇ ಅವತಾರವಾದ ರಾಮನ ಜನ್ಮೋತ್ಸವ ಸಂಭ್ರಮ
Rama Navami : ಮರ್ಯಾದ ಪುರುಷೋತ್ತಮ, ಏಕ ಪತ್ನಿ ವ್ರತಸ್ತನೆಂದು ಕರೆಯಲ್ಪಡುವ ಕಲ್ಯಾಣ ರಾಮ, ಜಾನಕಿ ರಾಮ, ಬಲರಾಮನು ಹಿಂದೂ ಸಂಪ್ರದಾಯದ ಮುಖ್ಯ ಆರಾಧ್ಯ ದೈವ. ವಿಷ್ಣುವಿನ 7ನೇ ಅವತಾರವಾದ ರಾಮನ ಜನ್ಮೋತ್ಸವ ಭಾರತದ ಪವಿತ್ರ ಹಬ್ಬಗಳಲ್ಲಿ ಒಂದು. ಆತನ ಜನ್ಮದಿನದಂದು ಭಾರತದಲ್ಲಿ ಹಿಂದೂಗಳು ಆತನಿಗೆ ಪೂಜೆ ಸಲ್ಲಿಸಿ, ಪಾನಕದಂತಹ ಪೇಯಗಳನ್ನು ಹೀರುತ್ತಾರೆ.
2026ರಲ್ಲಿ ರಾಮ ನವಮಿಯನ್ನು ಯಾವ ದಿನದಂದು ಆಚರಿಸಲಾಗುತ್ತದೆ? ಪೂಜೆ ಪುನಸ್ಕಾರ ಹೇಗಿರಲಿದೆ? ಎಂಬುದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ದೃಕ್ ಪಂಚಾಂಗದ ಪ್ರಕಾರ, ಈ ಬಾರಿ ರಾಮ ನವಮಿಯನ್ನು(Ram Navami 2026) ಮಾರ್ಚ್ 26 ರಂದು ಆಚರಿಸಲಾಗುತ್ತದೆ. ರಾಷ್ಟ್ರದ ಅನೇಕ ಭಾಗದಲ್ಲಿ ಚೈತ್ರ ಮಾಸದ ಪ್ರತಿಪಾದದ ಒಂಬತ್ತು ದಿನಗಳವರೆಗೆ ರಾಮನವಮಿ ಆಚರಿಸಲಾಗುತ್ತದೆ. ದುರ್ಗಾ ದೇವಿಯ ಒಂಬತ್ತನೇ ರೂಪವಾದ ಸಿದ್ಧಿದಾತ್ರಿ ದೇವಿಗೆ ಈ ಪೂಜೆ ಅರ್ಪಿಸಲಾಗುತ್ತದೆ. ಅನೇಕರು ಈ 9 ದಿನ ರಾಮನ ಭಜನೆ ಮಾಡುವುದು, ದೇವಸ್ಥಾನಕ್ಕೆ ಭೇಟಿ ನೀಡುವುದು ಸೇರಿದಂತೆ ವಿಶೇಷ ಆಚರಣೆಗಳಲ್ಲಿ ಭಾಗಿಯಾಗುತ್ತಾರೆ.
2026ರ ಪೂಜಾ ಮುಹೂರ್ತ
ದೃಕ್ ಪಂಚಾಗದ ಪ್ರಕಾರ, ಮಾರ್ಚ್ 26ರ ಬೆಳಗ್ಗೆ 11:46ಕ್ಕೆ ಚೈತ್ರ ಮಾಸದ ಶುಕ್ಲ ಪಕ್ಷ್ ನವಮಿ ತಿಥಿಯು ಆರಂಭವಾಗುತ್ತದೆ. ಇದರ ಆಧಾರದ ಮೇಲೆ ಈ ಬಾರಿ ರಾಮನ ಜನ್ಮದಿನೋತ್ಸವವನ್ನು ಗುರುವಾರದಂದು ಆಚರಣೆ ಮಾಡಲಾಗುತ್ತದೆ. ಸೂರ್ಯೋದಯದ ತಿಥಿಯ ಪ್ರಕಾರ ನವಮಿ ತಿಥಿಯು ಮಾರ್ಚ್ 27ರಂದು ಮುಂದುವರೆಯುವ ಕಾರಣ, ಆ ದಿನವೂ ಪೂಜೆಗೆ ಶುಭ ಮುಹೂರ್ತ ಎಂದು ಹೇಳಲಾಗಿದೆ.
* ರಾಮ ನವಮಿ ತಿಥಿ ಆರಂಭ: ಮಾರ್ಚ್ 26ರಂದು ಬೆಳಗ್ಗೆ 11:48 ಗಂಟೆಗೆ.
* ನವಮಿ ತಿಥಿ ಅಂತ್ಯ: ಮಾರ್ಚ್ 27 ರ ಬೆಳಗ್ಗೆ 10:06 ಗಂಟೆಗೆ
* ಮಧ್ಯಾಹ್ನದ ಪೂಜಾ ಮುಹೂರ್ತ: ಬೆಳಗ್ಗೆ 11:15 ರಿಂದ ಮಧ್ಯಾಹ್ನ 01:43 ರವರೆಗೆ. ಮಾರ್ಚ್ 27, ಶುಕ್ರವಾರವೂ ರಾಮನಿಗೆ ಸೇವೆ ಸಲ್ಲಿಸಬಹುದು.
* ಮಧ್ಯಾಹ್ನದ ಮುಹೂರ್ತ: ಬೆಳಗ್ಗೆ 11:14 ರಿಂದ ಮಧ್ಯಾಹ್ನ 01:43 ರವರೆಗೆ ಪೂಜಾ-ಕೈಂಕರ್ಯ ಕೈಗೊಳ್ಳಬಹುದು ಎಂದು ದೃಕ್ ಪಂಚಾಂಗದ ಪ್ರಕಾರ ಹೇಳಲಾಗಿದೆ.
ರಾಮನವಮಿಯಂದು ತಯಾರಿಸುವ ಆಹಾರ
ರಾಮನವಮಿಯಂದು ಸಾಮಾನ್ಯವಾಗಿ ಹಲವರು ಮಧ್ಯಾಹ್ನದವರೆಗೂ ಆಹಾರ ಸೇವನೆ ಮಾಡೋದಿಲ್ಲ. ಇನ್ನೂ ಕೆಲವರು ಮುಂಜಾನೆ ಒಂದೊತ್ತಿನ ಉಪವಾಸ ಮಾಡುತ್ತಾರೆ. ಹೀಗಾಗಿ, ಹಣ್ಣು, ಹಾಲು ಮತ್ತು ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಮಾತ್ರ ಸೇವಿಸಬೇಕಾಗುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯುಳ್ಳ ಮಸಾಲೆ ಪದಾರ್ಥವನ್ನು ಮುಟ್ಟೋದೆ, ಸೂಜಿ ಹಲ್ವಾ, ಪೂರಿಯಂತಹ ಸಾತ್ವಿಕ ಆಹಾರವನ್ನು ಸೇವಿಸಬಹುದಾಗಿದೆ, (ಏಜೆನ್ಸೀಸ್).