Nose Shape Reveals About Your Personality
- ಮೂಗಿನ ಆಕಾರದ ಮೇಲೆ ಮನುಷ್ಯರ ವ್ಯಕ್ತಿತ್ವ ಅಥವಾ ಸ್ವಭಾವ ತಿಳಿಯೋದು ಹೇಗೆ?.
- ನೇರ ಹಾಗೂ ದಪ್ಪ, ಗಿಳಿಯಂತೆ ಮೂಗು ಹೊಂದಿರುವವರ ಸ್ವಭಾವ ಏನು ಹೇಳುತ್ತದೆ.
- ದಪ್ಪ ಮೂಗಿನವರು ಸ್ವತಂತ್ರ್ಯವಾಗಿ ಬದುಕಲು ಇಚ್ಛಿಸುತ್ತಾರೆ,
Nose Shape Reveals About Personality: ಸಾಮಾನ್ಯವಾಗಿ ಯಾರ ಬಗ್ಗೆಯಾದರೂ ಮಾತನಾಡುವಾಗ ಅವರ ನಡವಳಿಕೆ ಹಾಗೂ ಅವ ಮಾತು ನೋಡಿ ಒಳ್ಳೆಯವರೋ, ಕೆಟ್ಟವರೋ ಅನ್ನೋದನ್ನ ನಿರ್ಧರಿಸಿ ಮಾತನಾಡುತ್ತೇವೆ. ಆದರೆ, ಅದನ್ನು ಹೊರೆತು ಪಡಿಸಿಯೂ ನಿಮಗಿಷ್ಟವಾದ ವ್ಯಕ್ತಿಯ ಬಗ್ಗೆ ಅಥವಾ ಬೇರೆಯವರ ಬಗ್ಗೆ ಕೈ, ಹಸ್ತ, ಮುಖ ನೋಡಿ ಅವರ ಸ್ವಭಾವ ತಿಳಿದುಕೊಳ್ಳಬಹುದು.
ಜ್ಯೋತಿಷ್ಯ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಮೂಗಿನ ಆಕಾರದ ಆಧಾರದ ಮೇಲೆ ಅವರು ಯಾವ ರೀತಿಯ ಜನ, ಹೇಗಿದ್ದಾರೆ. ಅವರ ಮನಸ್ಸಿನಲ್ಲಿ ಇರೋದು ಏನು ಎನ್ನುವುದರ ಮಾಹಿತಿ ಪಡೆದುಕೊಳ್ಳಬಹುದು.
ನೇ , ಚೂಪಾದ ಮೂಗು
ಕೆಲವರಿಗೆ ನೇರ ಮೂಗಿದ್ದು, ಕೆಳಗಿನ ಭಾಗ ಕೆಳಮುಖವಾಗಿ ಇಳಿಜಾರಿನಂತಿರುತ್ತದೆ. ಅವರು ಸ್ವಾಭಾವಿಕವಾಗಿ ಕುತೂಹಲಿಗಳು. ಹೊಸ ವಿಚಾರ ಕಲಿಯಲು ಸಿದ್ಧರಿರುತ್ತಾರೆ. ಹೊಸದನ್ನು ಅನ್ವೇಷಿಸುತ್ತಾರೆ. ಮಾತಿನಲ್ಲಿ ನಿಪುಣರು. ಬೇರೆಯವರನ್ನು ಬೇಗನೆ ಆಕರ್ಷಿಸುತ್ತಾರೆ. ತೀಕ್ಷ್ಣ ಬುದ್ಧಿ. ಹೇಳಿದ್ದನ್ನು ಸರಿಯಾಗಿ ಗ್ರಹಿಸುವ ಶಕ್ತಿ ಇವರಲ್ಲಿದೆ.
ಗಿಳಿಯ ಮೂಗು
ಈ ರೀತಿ ಆಕಾರದ ಮೂಗು ಹೊಂದಿದ ಜನರು ಅಪಾಯದಲ್ಲಿ ಬೇಗನೆ ಸಿಲುಕೋದಿಲ್ಲ. ಬುದ್ಧಿಜೀವಿಗಳು. ಪ್ರಾಮಾಣಿರು. ಏನೇ ಕೆಲಸ ಕೊಟ್ಟರು ಅದನ್ನು ಶ್ರದ್ಧೆ, ನಿಷ್ಠೆಯಿಂದ ಮಾಡುತ್ತಾರೆ. ಯಾರು ಏನೇ ಕೇಳಲಿ ಕೊಟ್ಟು ಬಿಡುತ್ತಾರೆ. ಇವರು ತ್ಯಾಗಿಗಳು ಹೌದು. ಎಷ್ಟಿದೆಯೋ ಅಷ್ಟರಲ್ಲೇ ಸಂತೃಪ್ತ ಜೀವನ ನಡೆಸಲು ಬಯಸುತ್ತಾರೆ.
ಅಗಲವಾದ ಮೂಗು
ಅಗಲ ಅಥವಾ ದಪ್ಪ ಮೂಗು ಉಳ್ಳವರು ನಾಯಕತ್ವ ಗುಣ ಸ್ವಭಾವದವರು. ಯಾವಾಗಲು ಕಮಾಂಡಿಂಗ್ ಸ್ವಭಾವ ಹೊಂದಿರುತ್ತಾರೆ. ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವ ಸಾಧ್ಯತೆ ಇದೆ. ಬಹಳ ಸ್ವತಂತ್ರ್ಯರು ಕೊಂಚ ಅಹಂಕಾರ ಇರುತ್ತದೆ. ಇದನ್ನು ತಗ್ಗಿಸಿಕೊಂಡರೆ ಒಳ್ಳೆಯದು.
ತೀಕ್ಷ್ಣವಾದ ಮೂಗು
ಕೆಲವರ ಮೂಗಿನ ತುದಿಯಲ್ಲಿ ತೀಕ್ಣವಾಗಿರುತ್ತದೆ. ಅಂತವರು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಅನ್ನೋದನ್ನ ಬಯಸುತ್ತಾರೆ. ತಮ್ಮ ಎಲ್ಲ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಹಾಗೆಯೇ ನಡೆದುಕೊಳ್ಳುತ್ತಾರೆ. ಇವರ ಸ್ವಭಾವ ಹೇಗೆ ಎಂದರೆ, ಇವರಿಗೆ ದ್ರೋಹ ಮಾಡಿದವರಿಗೆ ಎಂದು ಕ್ಷಮೆ ಕೊಡೋದಿಲ್ಲ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.