ಸಾಂದರ್ಭಿಕ ಚಿತ್ರ 
ಧಾರ್ಮಿಕ

ಪರೀಕ್ಷೆಯಲ್ಲಿ ಟಾಪರ್ ಆಗಬೇಕೆ? ಓದಿಗೆ ಕುಳಿತುಕೊಳ್ಳುವ ಮುನ್ನ ಈ ಮಂತ್ರ ಪಠಿಸಿ; ಜ್ಞಾನದೇವಿಯ ಕೃಪೆಯಿಂದ ಮೆಮೊರಿ ಡಬಲ್ ಆಗೋದು ಗ್ಯಾರಂಟಿ! Saraswati Mantra

Saraswati Mantra: ಈಗೀನ ಕಾಲದ ಪಾಲಕರದ್ದು ಯಾವತ್ತು ಒಂದೇ ದೂರು, ನಮ್ಮ ಮಗ/ಮಗಳು ಹೇಳಿದ ಮಾತನ್ನು ಕೇಳುವುದಿಲ್ಲ, ಅವರಿಗೆ ಓದಿನಲ್ಲಿ ಆಸಕ್ತಿಯೇ ಇಲ್ಲ. ಓದದೆ ಒಳ್ಳೆಯ ಅಂಕ ಪಡೆಯಲು ಸಾಧ್ಯವೇ? ಅವರಿಗೆ ಓದಿನ ಕಡೆ ಆಸಕ್ತಿ ಮೂಡಿಸಲು ಏನು ಮಾಡಬೇಕೆಂದು ಬಹಳ ಜನ ಕೇಳುವುದುಂಟು. ಇದಕ್ಕೆ ಪರಿಹಾರ ನಮ್ಮ ಧಾರ್ಮಿಕ ಗ್ರಂಥಗಳಲ್ಲಿಯೇ ತಿಳಿಸಿದ್ದಾರೆ.

ಸರಸ್ವತಿ ಮಂತ್ರ ಪಠಿಸಿ; ಯಶಸ್ಸನ್ನ ಗಳಿಸಿ

ಹೌದು, ನಾವೀಗ ಆಧುನಿಕ ಅಥವಾ ಪಾಶ್ಚಾತ್ಯ ಶಿಕ್ಷಣ ಪದ್ಧತಿಯನ್ನು ಅಧ್ಯಯನ ಮಾಡುತ್ತಿರಬಹುದು. ಆದರೆ ನಮ್ಮ ಮೂಲ ಭಾರತದ್ದು ಎಂದು ನಾವು ಮರೆತರೂ ನಮ್ಮ ಡಿಎನ್ಎ ಮರೆಯುವುದಿಲ್ಲ.
ಹಾಗಾಗಿ ನಮ್ಮ ಪೂರ್ವಜರು ಅಧ್ಯಯನ ಮಾಡುತ್ತಿದ್ದ ಗುರುಕುಲದಲ್ಲಿ, ಅದಂರೆ ಗುರುಕುಲ ಪದ್ಧತಿಯಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳು ಹಾಗೂ ಓದಿದ ಪಾಠವು ದೀರ್ಘಕಾಲದ ವರೆಗೆ ನೆನಪಿನಲ್ಲಿರಲು ಅವರು ವಿದ್ಯಾ ದೇವಿ ಸರಸ್ವತಿಯ ಮಂತ್ರವನ್ನು ದಿನನಿತ್ಯ ಪಠಿಸುತ್ತಿದ್ದಾಗಿ ತಿಳಿದುಬರುತ್ತದೆ.

ಏನಿದು ಮಂತ್ರ?

ಆದ್ದರಿಂದ ಈ ಮಂತ್ರ ಕೇವಲ ಆಗಿನ ಕಾಲದವರಿಗೆ ಸೀಮಿತವಾಗಿಲ್ಲ. ನಿಮ್ಮ ಮಕ್ಕಳು ಓದಿನಲ್ಲಿ ಏಕಾಗ್ರತೆ ಹಾಗೂ ಆಸಕ್ತಿಯನ್ನು ಬೆಳೆಸಿಕೊಳ್ಳ ಬೇಕೆಂದರೆ ತಾಯಿ ಸರಸ್ವತಿಯ "ಓಂ ಎಯ್​ ಶ್ರೀ ಸರಸ್ವತಿ ನಮಃ" ಎಂಬ ಮಂತ್ರವನ್ನು ಓದಿಗೆ ಕುಳಿತು ಕೊಳ್ಳುವ ಅರ್ಧ ಗಂಟೆಗೆ ಮೊದಲು 101 ಸಾರಿ ಪಠಿಸಿದರೆ ನಿಮ್ಮ ಮಗುವಿನ ಏಕಾಗ್ರತೆ ಖಂಡಿತವಾಗಿ ಹೆಚ್ಚಾಗುತ್ತದೆ. ಮೊದಲ ಏಳು ದಿನಗಳಲ್ಲಿಯೇ ನಿಮ್ಮ ಮಗುವಿನ ಓದಿನಲ್ಲಿ ಏಳಿಗೆಯನ್ನು ನೀವು ಗಮನಿಸ ಬಹುದಾಗಿದ್ದು, ಮುಂದೆ ಎದುರಾಗುವ ಪರೀಕ್ಷೆಯಲ್ಲಿ ಸಹ ನಿಮ್ಮ ಮಕ್ಕಳು ಅಧಿಕ ಅಂಕವನ್ನು ಗಲಸುತ್ತಾರೆ,(ಏಜನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.