ಮನೆ ಮುಂದಿನ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನಿಂಬೆ ಗಿಡ ನೆಡುವುದು ಶುಭ.
ಪಶ್ಚಿಮ, ದಕ್ಷಿಣ ಹಾಗೂ ನೈಋತ್ಯ ಮತ್ತು ಮನೆಯ ಮುಂದಿನ ರಸ್ತೆಯಲ್ಲಿ ನಿಂಬೆ ಗಿಡ ನೆಡಬೇಡಿ.
ನಿಂಬೆ ಗಿಡಗಳು ಮನೆಗೆ ದುಷ್ಟ ಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತವೆ.
Vastu Tips: ಹಿಂದೂ ಸಂಪ್ರದಾಯದಲ್ಲಿ ನಿಂಬೆ ಗಿಡಗಳಿಗೆ ಹಾಗೂ ನಿಂಬೆ ಹಣ್ಣಿಗೆ ಪ್ರತ್ಯೇಕ ಸ್ಥಾನವಿದೆ. ಇದನ್ನು ಪೂಜೆಗಳಿಗೆ, ದೇವರಿಗೆ ಅಲಂಕರಿಸಲು,ತುಪ್ಪದ ದೀಪ ಹಚ್ಚಿ ಹರಕೆ ತೀರಿಸಲು, ದುಷ್ಟ ಶಕ್ತಿಗಳಿಂದ ರಕ್ಷಣೆಗೆ ಸೇರಿದಂತೆ ನಾನಾ ಪೂಜಾ ಕೈಂಕರ್ಯಕ್ಕೆ ಬಳಕೆ ಮಾಡಲಾಗುತ್ತದೆ. ಅದರಂತೆ, ನಿಂಬೆ ಹಣ್ಣು ಆರೋಗ್ಯಕ್ಕೂ ಮದ್ದು. ಹೀಗಾಗಿ ಕೆಲವರು ಮನೆಯ ಮುಂದಿನ ಆವರಣದಲ್ಲಿ ನಿಂಬೆ ಗಿಡ ಬೆಳೆಯುತ್ತಾರೆ.
ಕೆಲವೊಂದು ವಾಸ್ತು ದೋಷಗಳಿಂದ ನಿಂಬೆ ಗಿಡ ಮನೆಗೆ ಕೆಡಕು ತರಬಹುದು. ಹೀಗಾಗಿ , ವಾಸ್ತು ಶಾಸ್ತ್ರದ ಪ್ರಕಾರ ನಿಂಬೆ ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಸ್ಥಳದಲ್ಲಿ ಬೆಳೆಯ ಬೇಕು ಎನ್ನುತ್ತಾರೆ ತಜ್ಞರು. ಮನೆ ಮುಂದೆ ನಿಂಬೆ ಗಿಡ ಎಲ್ಲಿ ನೆಡಬೇಕು. ಇದು ಶುಭ ಫಲವೋ ಅಥವಾ ಅಶುಭವೋ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ನಿಂಬೆ ಮರವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದು ಒಳ್ಳೆಯದು. ನಿಂಬೆ ಮರವನ್ನು ಮುಖ್ಯ ದ್ವಾರದತ್ತ ಮುಖ ಮಾಡಿ ನೆಡದಂತೆ ನೋಡಿಕೊಳ್ಳಬೇಕು. ನಿಮ್ಮ ಮುಖ್ಯ ದ್ವಾರದಿಂದ ಕನಿಷ್ಠ ಮೂರು ಅಥವಾ ನಾಲ್ಕು ಅಡಿ ದೂರದಲ್ಲಿರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ, ನೀವು ಆರ್ಥಿಕ ನಷ್ಟವನ್ನು ಎದುರಿಸುವ ಸಾಧ್ಯತೆ ಇರುತ್ತದೆ.
ಆದರೆ, ಕೆಲವೊಬ್ಬರು ಈಗಾಗಲೇ ನಿಂಬೆ ಗಿಡಗಳನ್ನು ತಮ್ಮ ಮನೆಯ ಪಶ್ಚಿಮ, ದಕ್ಷಿಣ ಹಾಗೂ ನೈಋತ್ಯ ಮೂಲೆಯಲ್ಲಿ ನೆಡುತ್ತಾರೆ. ಅಂತಹ ದಿಕ್ಕಿನಲ್ಲಿ ನಿಂಬೆ ನೆಡುವುದರಿಂದ ಮನೆಯ ಆರ್ಥಿಕ ಸುಧಾರಣೆಗೆ ಪೆಟ್ಟು ಬೀಳಬಹುದು. ಇದರಿಂದ ಮನೆಯಲ್ಲಿ ಮನಸ್ಥಾಪ ಹೆಚ್ಚಾಗುವುದು. ಕುಟುಂಬ ಸದಸ್ಯರಲ್ಲಿ ಜಗಳಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಮನೆಯ ಮುಂದೆ ಇರುವ ರಸ್ತೆ ಬಳಿ ನಿಂಬೆ ಗಿಡ ನೆಡಬಾರದು. ಇದರಿಂದ ನಿಮ್ಮ ಜೀವನದಲ್ಲಿ ನೀವು ಆರ್ಥಿಕ, ಮಾನಸಿಕ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾದ ಸಾಧ್ಯತೆ ಇರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆ ಆವರಣದಲ್ಲಿ ನಿಂಬೆ ಗಿಡ ಬೆಳೆಸುವುದು ಶುಭ. ಇದು ನಿಮ್ಮ ಸುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ. ಅದರ ಹೂ ಮತ್ತು ಎಲೆ ಹಾಗೂ ಅದರಲ್ಲಿರುವ ನೈಸರ್ಗಿಕ ವಾಸನೆಯು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಮನೆಯಲ್ಲಿ ಕಂಡು ಬರುವ ವಾಸ್ತು ದೋಷ ಹೋಗಾಲಾಡಿಸಲು ನಿಂಬೆ ಗಿಡ ಸಹಾಯ ಮಾಡುತ್ತದೆ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.