Stop Leaving Clothes On Chairs
- ಕುರ್ಚಿ ಸೋಫಾದ ಮೇಲೆ ಬಟ್ಟೆಯನ್ನು ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ತಪ್ಪು.
- ಕುರ್ಚಿಯನ್ನು ಗೌರವದ ಸಮಾನ ನೋಡಲಾಗುತ್ತದೆ.
- ದಿನಗಟ್ಟಲೇ ಕುರ್ಚಿ ಮೇಲೆ ಬಟ್ಟೆ ಇಡುವುದರಿಂದ ಸಾಲದ ಸುಳಿಯಲ್ಲಿ ಸಿಲುಕಬಹುದು.
Stop Leaving Clothes On Chairs: ಶುಭ್ರವಾಗಿ ಒಗೆದು ಆರಿದ ಬಟ್ಟೆಗಳನ್ನು ಹಾಗೂ ಕೆಲಸಕ್ಕೆಂದು ಧರಿಸಿದ ಬಟ್ಟೆಯನ್ನು ತಂದು ಕುರ್ಚಿ ಅಥವಾ ಸೋಫಾ ಮೇಲೆ ಹಾಕಿ ನಂತರ ಮಡಚಿ ಎತ್ತಿಡೋಣ ಎಂದು ಭಾವಿಸಿಕೊಳ್ಳುವುದು ಪ್ರತಿ ವ್ಯಕ್ತಿಯ ಅಭ್ಯಾಸ. ಆದರೆ ಇದು ವಾಸ್ತು ಶಾಸ್ತ್ರದ ಪ್ರಕಾರ ಹಲವು ಸಮಸ್ಯೆಗೆ ಎಡೆಮಾಡಿಕೊಡುತ್ತದೆ ಎನ್ನಲಾಗಿದೆ.
ಹೌದು ನಿತ್ಯ ಕಚೇರಿ ಕೆಲಸ, ಮನೆ ಕೆಲಸದ ಮಧ್ಯೆ ಮರೆತು ಬಿಡುತ್ತೇವೆ. ನಾಳೆ ಆ ಕೆಲಸ ಮಾಡೋಣ ಎಂದು ಆಲಸ್ಯ ಉಂಟಾಗುತ್ತದೆ. ಆದರೆ, ಇದು ವಾಸ್ತು ಶಾಸ್ತ್ರದ ಪ್ರಕಾರ ಸುಖಮಯ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಸಾಲಗಾರರನ್ನಾಗಿ ಮಾಡುತ್ತದೆ ಎನ್ನಲಾಗಿದೆ.
ಮಾನಸಿಕ, ಆರ್ಥಿಕ ಸಮಸ್ಯೆ
ಎಲ್ಲೆಂದರಲ್ಲಿ ಬಿಡುವ ಬಟ್ಟೆ ಅಥವಾ ಒಂದು ಮೂಲೆಯಲ್ಲಿ ಗುಡ್ಡೆ ಮಾಡಿ ಬಟ್ಟೆಯನ್ನು ಇಡುವುದರಿಂದ ಮನೆಯ ಸದಸ್ಯರಲ್ಲಿ ಕಿರಿಕಿರಿ ಮೂಡುತ್ತದೆ. ಎಲ್ಲ ವಿಚಾರದಲ್ಲೂ ಆಲಸ್ಯ ಉಂಟಾಗುವಂತೆ ಮಾಡುತ್ತದೆ. ಪ್ರತಿ ವಿಚಾರಕ್ಕೂ ಗಲಾಟೆ, ಮನಸ್ತಾಪ ಮೂಡುವುದು. ನಕರಾತ್ಮಕ ವಾತಾವರಣ ಸೃಷ್ಟಿಯಾಗಿ ಮಾನಸಿಕ ಒತ್ತಡ ಹೆಚ್ಚಾಗುವಂತೆ ಮಾಡುತ್ತದೆ ಎನ್ನುವುದು ವಾಸ್ತು ಶಾಸ್ತ್ರದಲ್ಲಿ ಇದೆ.
ಕುರ್ಚಿ ಗೌರವದ ಸಮಾನ
ಕುರ್ಚಿಗಳು ಒಬ್ಬರಿಗೆ ಗೌರವ ನೀಡುವ ಸಂಕೇತವಾಗಿರುವ ಕಾರಣ, ಬಟ್ಟೆಯನ್ನು ಅದರ ಮೇಲಿಟ್ಟು ಬೇಕಾಬಿಟ್ಟಿಯಾಗಿ ಬಿಡುವುದರಿಂದ ಸೋಮಾರಿತನ, ಕಿರಿಕಿರಿ, ಕ್ಷುಲ್ಲಕ ಕಾರಣಕ್ಕೆ ಗಲಾಟೆ ಉಂಟಾಗಬಹುದು ಎನ್ನಲಾಗಿದೆ. ಇದು ಆರ್ಥಿಕವಾಗಿಯೂ ಸಮಸ್ಯೆಯನ್ನುಂಟು ಮಾಡುತ್ತದೆ.
ಸಾಲವನ್ನು ಹೆಚ್ಚಿಸುತ್ತದೆ
ಒಂದಕ್ಕಿಂತ ಹೆಚ್ಚು ಕಾಲ ಕುರ್ಚಿ ಮೇಲೆ ಬಟ್ಟೆಯನ್ನು ಬಿಟ್ಟರೆ ನಿಮ್ಮ ಸಾಲ ಹೆಚ್ಚಾಗುವಂತೆ ಮಾಡುತ್ತದೆ. ನಿಮ್ಮ ಕೈನಲ್ಲಿ ಒಂದು ರೂಪಾಯಿಯು ನಿಲ್ಲುವುದಿಲ್ಲ. ಹೀಗಾಗಿ ಸಾಲದ ಹೊರೆ ಜೋರಾಗಿ ಬೆಳೆಯುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು ಒಟ್ಟಾಗಿ ಬಟ್ಟೆಯನ್ನು ಇಡಬೇಡಿ ಕಾಲಕಾಲಕ್ಕೆ ಶುಚಿಗೊಳಿಸಿ ಎನ್ನುತ್ತಾರೆ ವಾಸ್ತು ತಜ್ಞರು.
ನಿಮ್ಮ ಮನೆಯನ್ನು ಶಾಂತಿಯುತವಾಗಿ ನೋಡಿಕೊಳ್ಳಬೇಕು ಇರಬೇಕು ಎಂದು ಬಯಸಿದರೆ, ಸ್ವಚ್ಛತೆ ಇಲ್ಲದ ಬಟ್ಟೆಗಳನ್ನು ಎಲ್ಲೂ ಇಡಬೇಡಿ. ಇದು ಸೋಮಾರಿತನ ಹೆಚ್ಚಾಗುತ್ತದೆ. ಒಂದೊಂದೆ ಸಮಸ್ಯೆಯು ನಿಮ್ಮನ್ನು ಕಾಡಲು ಶುರು ಮಾಡುತ್ತದೆ. ನಿಮ್ಮ ಬಟ್ಟೆಗಳನ್ನು ಕಪಾಟಿನಲ್ಲಿಡಿ. ಎಲ್ಲೆಂದರಲ್ಲಿ ಬಿಸಾಡಬೇಡಿ