Vastu Tips Lemon Tree At Home
Vastu Tips Lemon Tree At Home: ಹಿಂದೂ ಸಂಪ್ರದಾಯದಲ್ಲಿ ನಿಂಬೆ ಹಣ್ಣನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದೇವರ ಪೂಜೆಗೆ, ತುಪ್ಪದ ದೀಪ ಬೆಳಗಲು, ದೇವಾನು ದೇವತೆಗಳಿಗೆ ಹಾರವಾಗಿ ಬಳಕೆ ಮಾಡಲಾಗುತ್ತದೆ. ಸಿಟ್ರಸ್ ಅಂಶವುಳ್ಳ ಸಸ್ಯಗಳು ದುಷ್ಟ ಶಕ್ತಿಗಳನ್ನು ಸಂಹಾರ ಮಾಡುತ್ತದೆ. ಸಕರಾತ್ಮ ಶಕ್ತಿಯನ್ನು ಆಕರ್ಷಿಸಿಕೊಳ್ಳುತ್ತವೆ ಎನ್ನುವ ನಂಬಿಕೆ ಅನಾದಿಕಾಲದಿಂದಲು ಇದೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಥವಾ ಮನೆ ಮುಂದೆ ಒಂದಿಷ್ಟು ಜಾಗವಿದ್ದರೆ ನಿಂಬೆ ಹಣ್ಣು ಬೆಳೆಯೋದು ಸಾಮಾನ್ಯ. ಇದು ಅಡುಗೆ ವಿಚಾರದಲ್ಲಿ ಕೆಲವರು ಪ್ರತಿಬಾರಿ ಕೊಂಡುಕೊಳ್ಳೋಕೆ ಇಷ್ಟ ಪಡದೆ ನೈಸರ್ಗಿಕವಾಗಿ ಬೆಳೆದ ನಿಂಬೆ ಬಳಕೆ ಮಾಡುತ್ತಾರೆ. ಆದರೆ, ವಾಸ್ತು ಪ್ರಕಾರ ಇದು ಎಷ್ಟು ಒಳ್ಳೆಯದು, ಮನೆಗೆ ಆಗುವ ಲಾಭವೇನು ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.
ನಿಂಬೆ ಗಿಡ ಎಲ್ಲಿ ಇರಕೂಡದು
ನಿಂಬೆ ಗಿಡವನ್ನು ಮನೆಯ ಮುಖ್ಯ ದ್ವಾರದ ಹತ್ತಿರ ಅಥವಾ ಮನೆಗೆ ತೀರಾ ಹತ್ತಿರವಾಗಿ ನೆಡಕೂಡದು. ಶೌಚಾಲಯ ಸ್ಟೋರ್ ರೂಂ ಬಳಿ ನೆಡಬೇಡಿ. ನಿಯಮಿತವಾಗಿ ಒಣಗಿದ ಎಲೆ ಸತ್ತ ಕೊಂಬೆಗಳನ್ನು ತೆಗೆದು ಹಾಕಬೇಕು.
ಯಾವ ದಿಕ್ಕಿನಲ್ಲಿ ನಿಂಬೆ ಗಿಡವಿರಬೇಕು
ವಾಸ್ತು ಪ್ರಕಾರ ನಿಂಬೆ ಗಿಡವನ್ನು ಮನೆಯಿರುವ ಪೂರ್ವ ಅಥವಾ ಉತ್ತರ ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದ ಮನೆಗೆ ಪ್ರಗತಿ ಹಾಗೂ ಸಂತೋಷವನ್ನು ತರುತ್ತದೆ ಎನ್ನಲಾಗಿದೆ.
ಆದಾಯ ದ್ವಿಗುಣ
ಮನೆಯ ಮುಂದೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಿಂಬೆ ಮರವನ್ನು ಬೆಳೆದರೆ ನಿಮ್ಮ ಮನೆಯ ಆರ್ಥಿಕ ಆದಾಯವೂ ಕೊಂಚ ಕೊಂಚವಾಗಿ ಏರಿಕೆಯನ್ನು ಕಾಣುತ್ತದೆ. ಹೀಗಾಗಿ ಮನೆಯ ಮುಂದೆ ನಿಂಬೆ ಬೆಳೆಸುವ ಬಗ್ಗೆ ಯಾವುದೇ ತಾತ್ಸಾರ ತೋರಬೇಡಿ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ಕೆಟ್ಟದೃಷ್ಟಿ ಹೋಗಲಾಡಿಸಲು ಸಹಕಾರಿ
ಮನೆಯ ಮುಂದೆ ನಿಂಬೆ ಗಿಡ ಬೆಳೆಯುವುದರಿಂದ ನಕರಾತ್ಮಕ ಶಕ್ತಿಗಳು ದೂರವಾಗಿ ಸಕರಾತ್ಮವಾದಿಂದ ಕೂಡಿರುತ್ತದೆ. ನಿತ್ಯ ಜಗಳದಿಂದ ಕೂಡವ ಮನೆಯು ಶಾಂತಿ ಹಾಗೂ ನೆಮ್ಮದಿಯ ಸಾರವಾಗಿ ಮಾರ್ಪಾಡಾಗುತ್ತದೆ. ನರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿರುವವರಿಗೆ ಕೊಂಚವಾಗಿ ಮುಕ್ತಿ ಸಿಗುವಂತೆ ಇದರಲ್ಲಿರುವ ಶಕ್ತಿಯು ಸಹಾಯ ಮಾಡುತ್ತದೆ.