- ಮನೆಯಲ್ಲಿ ಧನಸಂಪತ್ತು ವೃದ್ಧಿಸಲು ಈ ನಾಲ್ಕು ವಸ್ತುಗಳನ್ನು ತಂದಿಡಿ.
- ಲಾಫಿಂಗ್ ಬುದ್ಧ, ಮನಿ ಪ್ಲ್ಯಾಂಟ್ ಹೇಗೆ ಆರ್ಥಿಕ ಸಮೃದ್ಧಿಗೆ ಸಹಕಾರಿ.
- ಲಕ್ಷ್ಮಿ ಕಟಾಕ್ಷ, ಅದೃಷ್ಟ ಒಲಿದುಬರಲು ವಾಸ್ತು ಸೂಚಿಸುವ 4 ಅದ್ಭುತ ವಸ್ತುಗಳು!
vastu items for wealth: ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗಿ ನಿಶ್ಚಿಂತೆಯಾಗಿ ಬದುಕಲು ಹಗಲಿರುಳು ದುಡಿಯುವುದು ಸಾಕಾಗೋದಿಲ್ಲ. ಬದಲಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ನಿಯಮವನ್ನು ಪಾಲನೆ ಮಾಡಬೇಕಾಗಿರುತ್ತದೆ. ಹೌದು ಜ್ಯೋತಿಷ್ಯ ಶಾಸ್ತ್ರದಲ್ಲಿ ವಾಸ್ತು ಶಾಸ್ತ್ರಕ್ಕೆ ಪ್ರಾಮುಖ್ಯತೆ ಇದೆ. ಅದರಂತೆ, ಮನೆಯಲ್ಲಿ ವಾಸ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಮನೆಯಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಇರಿಸಿಕೊಳ್ಳುವುದರಿಂದ ಹಣಕಾಸಿನ ಮುಗ್ಗಟ್ಟು ದೂರವಾಗಿ, ಸಿರಿ-ಸಂಪತ್ತು ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಹಾಗಾದರೆ ಯಾವ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡರೆ ಲಕ್ಷ್ಮಿ ಕಟಾಕ್ಷ ಒಲಿಯಲಿದೆ. ಇನ್ನೂ ಆರ್ಥಿಕವಾಗಿ ಅದೃಷ್ಟ ಕಾಣುತ್ತೇವೆ. ಹೇಗೆ ಧನಲಾಭ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಈ ವಸ್ತು ಮನೆಯಲ್ಲಿ ಇರುವಂತೆ ನೋಡಿಕೊಳ್ಳಿ
ವಾಸ್ತು ಶಾಸ್ತ್ರದಲ್ಲಿ ಲಾಫಿಂಗ್ ಬುದ್ಧನಿಗೆ ವಿಶೇಷ ಸ್ಥಾನ ಇದೆ. ಯಾರು ಆರ್ಥಿಕವಾಗಿ ಸದೃಢರಾಗಿರಬೇಕು ಎಂದು ಬಯಸುತ್ತಾರೋ, ಸಂಪತ್ತಿನ ಕೊರತೆ ಎದುರಾಗಬಾರದು ಎಂದು ಬಯಸುತ್ತಾರೋ, ಅವರು ತಮ್ಮ ಮನೆಯಲ್ಲಿ ತಪ್ಪದೆ ಲಾಫಿಂಗ್ ಬುದ್ಧನನ್ನು ಇಟ್ಟುಕೊಳ್ಳಬೇಕು. ಇದು ಮನೆಯಲ್ಲಿ ಸಂಪತ್ತನ್ನು ವೃದ್ಧಿಸುತ್ತದೆ.
ಯಾವ ಮನೆಯಲ್ಲಿ ನೀರು ನಿರಂತರವಾಗಿ ಹರಿಯುವ ವಾಟರ್ ಫೌಂಟೇನ್ ವಸ್ತು ಇರುತ್ತದೆಯೋ ಅವರಿಗೆ ಅದೃಷ್ಟ ಎನ್ನಲಾಗಿದೆ, ಆ ಮನೆಯಲ್ಲಿ ಧನಕ್ಕೆ ಯಾವುದೇ ಕೊರತೆ ಬರುವುದಿಲ್ಲ ಎಂದು ನಂಬಲಾಗಿದೆ. ಹಾಗಾಗಿ, ಮನೆಯಲ್ಲಿ ವಾಟರ್ ಫೌಂಟೆನ್ ಅನ್ನು ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವುದರ ಜೊತೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.
ಮನೆಯಲ್ಲಿ ಮನಿ ಫ್ರಾಗ್ ಇರುವುದು ಬಹಳ ಶುಭಪ್ರದವಾಗಿದ್ದು, ಇದು ಅದೃಷ್ಟವನ್ನು ತಂದುಕೊಡುತ್ತದೆ. ವಿಶೇಷವಾಗಿ ಯಾರ ಮನೆಯಲ್ಲಿ ಮನಿ ಫ್ರಾಗ್ ಇರುತ್ತದೋ ಅವರಿಗೆ ಹಣದ ಕೊರತೆ ಇರುವುದಿಲ್ಲ. ಇದನ್ನು ಮನೆಯ ಮುಖ್ಯ ದ್ವಾರದ ಬಳಿ ಇಡುವುದರಿಂದ ಅದೃಷ್ಟ ಒಲಿದುಬರುತ್ತದೆ.
ವಾಸ್ತು ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ಗಿಡವಿದ್ದರೆ ಹಣಕ್ಕೆ ಎಂದಿಗೂ ಕೊರತೆ ಇರುವುದಿಲ್ಲ. ಅಲ್ಲದೆ, ಇದು ಮನೆಯಲ್ಲಿರುವ ನಕಾರಾತ್ಮಕತೆಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಪಂಡಿತರ ಸೂಚನೆಯಂತೆ ಮನಿ ಪ್ಲಾಂಟ್ ಗಿಡವನ್ನು ಕಡ್ಡಾಯವಾಗಿ ಮನೆಯಲ್ಲಿಡಬೇಕು, (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.