Vastu plants for home  
ಧಾರ್ಮಿಕ

ಮನೆಯಲ್ಲಿ ಈ ಗಿಡಗಳನ್ನು ಪೋಷಿಸಿದರೆ ಲಕ್ಷ್ಮಿ ಕಟಾಕ್ಷ ಖಂಡಿತ; ಯಾವ ದಿಕ್ಕಿನಲ್ಲಿಡಬೇಕು ಗೊತ್ತಾ?..Vastu Tips

ಪ್ರಮುಖ ಮುಖ್ಯಾಂಶಗಳು

  • ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಈ ಗಿಡಗಳನ್ನು ಮನೆಯ ಆವರಣದಲ್ಲಿ ಬೆಳೆಸಿ.
  • ಆರ್ಥಿಕ ಸ್ಥಿರತೆಗಾಗಿ ಆಗ್ನೇಯ ದಿಕ್ಕು ಅಥವಾ ಉತ್ತರ ದಿಕ್ಕಿನಲ್ಲಿ ಬ್ಯಾಂಬು ಬೆಳೆಯಿರಿ.
  • ಮನಸ್ಸಿನ ನೆಮ್ಮದಿ ಹಾಗೂ ಪ್ರಶಾಂತತೆಗಾಗಿ ಶಂಖಪುಷ್ಪ ಹೂ ಅಥವಾ ಅಲೋವೆರಾ ಬೆಳೆಯಿರಿ.

Vastu plants for home:

ಮನೆಯಲ್ಲಿ ಗಿಡಗಳನ್ನು ಬೆಳೆಯುವುದು ಒತ್ತಡದ ಬದುಕಿಗೆ ಒಂದು ಧನಾತ್ಮಕ ಶಕ್ತಿ, ಸಂತೋಷ ಮತ್ತು ಸಮೃದ್ಧಿ ನೀಡಿದಂತೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸಸ್ಯಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿಟ್ಟು ಸಂರಕ್ಷಿಸುವುದರಿಂದ ಸಂಪತ್ತು, ಆರೋಗ್ಯ, ಪ್ರಶಾಂತತೆ ಮತ್ತು ಅಭಿವೃದ್ಧಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗುತ್ತದೆ ಎನ್ನಲಾಗಿದೆ.


ಗಿಡಗಳನ್ನು ಎಲ್ಲೆಂದರಲ್ಲಿ ಇಡದೆ, ವಾಸ್ತು ಪ್ರಕಾರ ಅವುಗಳಿಗೆ ಸೂಕ್ತವಾದ ದಿಕ್ಕುಗಳನ್ನು ಆಯ್ಕೆ ಮಾಡುವುದು ಮುಖ್ಯ. ಇಂದು ಯಾವ ದಿಕ್ಕಿನಲ್ಲಿ ಯಾವ ಗಿಡಗಳನ್ನು ನೆಡಬೇಕು ಎನ್ನುವುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.

ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ತುಳಸಿ

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಲಕ್ಷ್ಮಿ ದೇವಿಗೆ ಪ್ರಿಯವಾದದ್ದು ಎಂದು ಭಾವಿಸಲಾಗುವ ತುಳಸಿಯನ್ನು ಮನೆಯ ಈಶಾನ್ಯ, ಉತ್ತರ ಅಥವಾ ತೂರ್ವ ದಿಕ್ಕುಗಳಲ್ಲಿ ಬೆಳೆಸುವುದು ಬಹಳ ಶುಭ ಎನ್ನಲಾಗಿದೆ. ತುಳಸಿಯು ಮನೆಯಲ್ಲಿ ಧನಾತ್ಮಕ ಅಲೆಗಳನ್ನು ಹೆಚ್ಚಿಸುವುದರ ಜೊತೆಗೆ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ.

ಮನಿ ಪ್ಲಾಂಟ್​

ಸಾಮಾನ್ಯವಾಗಿ ಮನೆಯ ಅಲಂಕಾರಕ್ಕೆಂದು ಮನಿ ಪ್ಲ್ಯಾಂಟ್​ ಬೆಳೆಯೋದು ವಾಡಿಕೆ. ಆದರೆ, ಇದು ಆರ್ಥಿಕ ಸಮೃದ್ಧಿಯವೆಂದು ಹಲವರಿಗೆ ಗೊತ್ತೇ ಇರೋದಿಲ್ಲ. ಹಾಗಾಗಿ ಮನಿ ಪ್ಲಾಂಟನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಅನುಕೂಲಕರ. ಜೊತೆಗೆ ಪರ್ಯಾಯವಾಗಿ ಉತ್ತರ ದಿಕ್ಕಿನಲ್ಲಿ ಕೂಡ ಇಡಬಹುದು.

ಬಿದಿರಿನ ಗಿಡ

ಅದೃಷ್ಟತರುವ ಬಿದಿರಿನ ಗಿಡವನ್ನು ಅದೃಷ್ಟ, ಅಭಿವೃದ್ಧಿ ಹಾಗೂ ಆರ್ಥಿಕ ಸಂಕೇತವೆಂದು ಭಾವಿಸಲಾಗುತ್ತದೆ. ವಿಶೇಷವಾಗಿ 6 ಅಥವಾ 8 ಕಾಂಡಗಳುಳ್ಳ ಲಕ್ಕಿ ಬಾಂಬೂವನ್ನು ಹಾಲಿನಲ್ಲಿ, ಸ್ವಾಗತ ಕೋರುವ ಪ್ರದೇಶದಲ್ಲಿ ಅಥವಾ ಕಚೇರಿ ಮೇಜಿನ ಮೇಲೆ ಇಡುವುದು ಶುಭಕರ. ಇದನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಕುಟುಂಬದಲ್ಲಿ ಅಭಿವೃದ್ಧಿ, ಸಮೃದ್ಧಿ ಮತ್ತು ಯಶಸ್ಸಿಗೆ ಅನುಕೂಲವಾದ ವಾತಾವರಣ ನಿರ್ಮಾಣವಾಗುತ್ತದೆ.

ಅಲೋವೆರಾ ಮತ್ತು ಶಂಖಪುಷ್ಪ ಹೂ

ಅಲೋವೆರಾ ಮತ್ತು ಶಂಖಪುಷ್ಪ ಹೂವಿನ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಸೂಕ್ತವೆಂದು ಭಾವಿಸಲಾಗಿದೆ. ಈ ಗಿಡಗಳು ಮನೆಯ ಪರಿಸರವನ್ನು ಆಹ್ಲಾದಕರವಾಗಿ ಬದಲಾಯಿಸಲು ನೆರವಾಗುತ್ತವೆ.

ಬೇವು, ಮತ್ತು ನೆಲ್ಲಿಕಾಯಿ

ಬೇವು ಮತ್ತು ನೆಲ್ಲಿಕಾಯಿ ಹಿಂದೂ ಸಂಪ್ರದಾಯದಲ್ಲಿ ಶ್ರೇಷ್ಠ ಗಿಡ ಎಂದು ಭಾವಿಸಲಾಗುತ್ತದೆ. ಮನೆ ಮುಂದೆ ಜಾಗ ಇದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರುವ ಇವುಗಳನ್ನು ಬೆಳೆಸಿಕೊಳ್ಳಬಹುದು. ಆರೋಗ್ಯದ ದೃಷ್ಟಿಯಲ್ಲಿಯೂ ಇವು ಉಪಕಾರಿ, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.